

ಚೆನ್ನೈ: ಒಬ್ಬರು ಸಿನಿಮಾ ಜಗತ್ತಿನ ಸ್ಟಾರ್ ಆದರೆ, ಇನ್ನೊಬ್ಬರು ಕ್ರೀಡಾ ಲೋಕದ ಧ್ರುವ ತಾರೆ. ಇದೀಗ ಇಬ್ಬರು ಒಟ್ಟಿಗೆ ಸೇರಿರುವುದು ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ. ನಾವು ಯಾರ ಬಗ್ಗೆ ಹೇಳುತ್ತಿದ್ದೇವೆ ಎಂಬುದ ಈಗಾಗಲೇ ಫೋಟೋ ಮೇಲಿನ ಫೋಟೋ ಮೂಲಕ ನಿಮಗೆಲ್ಲ ಗೊತ್ತಾಗಿದೆ. ಹಾಗದರೆ, ಇಬ್ಬರು ಬಿಗ್ ಸೆಲೆಬ್ರಿಟಿಗಳು ಒಟ್ಟಿಗೆ ಸೇರಿದ್ದೇಕೆ ಎಂಬ ಕುತೂಹಲ ಎಲ್ಲರಲ್ಲೂ ಇದೆ. ಅದಕ್ಕೆ ಕಾರಣವೂ ಇಲ್ಲಿದೆ.
ಕ್ರಿಕೆಟ್ ಲೋಕದ ಕೂಲ್ ಕ್ಯಾಪ್ಟನ್ ಎಂ.ಎಸ್. ಧೋನಿ ಮತ್ತು ಕಾಲಿವುಡ್ ಸಿನಿ ಜಗತ್ತಿನ ಇಳಯದಳಪತಿ ವಿಜಯ್ ಇತ್ತೀಚೆಗೆ ಚೆನ್ನೈನಲ್ಲಿ ಪರಸ್ಪರ ಭೇಟಿಯಾಗಿದ್ದಾರೆ. ಶೂಟಿಂಗ್ ಇದ್ದ ಕಾರಣದಿಂದ ಇಬ್ಬರು ಒಂದೇ ಸ್ಟುಡಿಯೋದಲ್ಲಿ ಎದುರು-ಬದುರಾಗಿದ್ದಾರೆ. ಇಬ್ಬರು ಸ್ಟಾರ್ಗಳ ಮಹಾಸಂಗಮದ ಫೋಟೋವನ್ನು ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ತಂಡವು ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದು, ಅದಕ್ಕೆ "ಮಾಸ್ಟರ್ ಆ್ಯಂಡ್ ದಿ ಬ್ಲ್ಯಾಸ್ಟರ್" ಎಂದು ಅಡಿಬರಹ ನೀಡಿದೆ.
ಈ ವರ್ಷದ ಆರಂಭದಲ್ಲಿ ಬಿಡುಗಡೆಯಾದ ವಿಜಯ್ ಅಭಿಯನದ ಮಾಸ್ಟರ್ ಚಿತ್ರ ಒಳ್ಳೆಯ ಹೆಸರು ಮಾಡಿದೆ. ಅದೇ ರೀತಿ ಧೋನಿಯನ್ನು ಚೆನ್ನೈ ಮಂದಿ ಪ್ರೀತಿಯಿಂದ ಬ್ಲಾಸ್ಟರ್ ಎಂದು ಕರೆದಿದ್ದಾರೆ. ಏಕೆಂದರೆ, ಧೋನಿ ಬ್ಯಾಟ್ ಹಿಡಿದು ಕ್ರೀಸ್ನಲ್ಲಿ ನಿಂತರೆ ಅವರ ಒಂದೊಂದು ಶಾಟ್ಸ್ ಕೂಡ ಬ್ಲಾಸ್ಟರ್ ಆಗಿರುತ್ತದೆ.
ಇಬ್ಬರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಕೇವಲ ಒಂದೇ ಗಂಟೆಯಲ್ಲಿ 4 ಲಕ್ಷಕ್ಕೂ ಹೆಚ್ಚು ಲೈಕ್ಸ್ ಬಂದಿವೆ. ಅನೇಕ ನೆಟ್ಟಿಗರು ಫೋಟೋದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದು, ಇದು ವರ್ಷದ ಅತ್ಯುತ್ತಮ ಚಿತ್ರವೆಂದು ಟ್ವೀಟ್ ಮಾಡಿದ್ದಾರೆ. ಅಲ್ಲದೆ, ಎರಡು ಸಿಂಹಗಳು ಒಟ್ಟಿಗೆ ಭೇಟಿಯಾಗಿವೆ, ಒಬ್ಬರು ಕ್ರಿಕೆಟ್ ದಿಗ್ಗಜ ಮತ್ತೊಬ್ಬರು ಸಿನಿಮಾ ದಿಗ್ಗಜ ಎಂದು ವಿವಿಧ ರೀತಿಯಲ್ಲಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಅಂದಹಾಗೆ ವಿಜಯ್ ತಮ್ಮ ಮುಂದಿನ "ಬೀಸ್ಟ್" ಚಿತ್ರದ ಶೂಟಿಂಗ್ನಲ್ಲಿ ತೊಡಗಿಸಿಕೊಂಡಿದ್ದಾರೆ. ವಿಜಯ್ ಮತ್ತು ಧೋನಿ ತಮಿಳುನಾಡಿನಲ್ಲಿ ಬಹುದೊಡ್ಡ ಅಭಿಮಾನಿ ಬಳಗವನ್ನೇ ಹೊಂದಿದ್ದಾರೆ. (ಏಜೆನ್ಸೀಸ್)