ಅಬ್ಬಾ…. ಐಪಿಎಲ್​ನಲ್ಲಿ ಎಂ.ಎಸ್​. ಧೋನಿಗೆ ಇಷ್ಟೊಂದು ಹಣ ಸಿಗ್ತಿದ್ಯಾ? ನಿಜಕ್ಕೂ ಅಚ್ಚರಿಪಡ್ತೀರಾ..!

dhoni web
Published on

ಚೆನ್ನೆ: ಇಂಡಿಯನ್​ ಪ್ರೀಮಿಯರ್​ ಲೀಗ್ ವಿಶ್ವದಲ್ಲೇ ಅತ್ಯಂತ ಶ್ರೀಮಂತ ಲೀಗ್​ ಟೂರ್ನಮೆಂಟ್​. ಹಣದ ಹೊಳೆಯೇ ಹರಿಯುವ ಈ ಟೂರ್ನಿಯಲ್ಲಿ ಕೇವಲ ಭಾರತೀಯ ಕ್ರಿಕೆಟಿಗರು ಮಾತ್ರವಲ್ಲದೇ ವಿದೇಶಿ ಆಟಗಾರರು ಸಹ ಆಡಲು ಬಯಸುತ್ತಾರೆ. ಏಕೆಂದರೆ, ಒಳ್ಳೆಯ ಸಂಬಳದೊಂದಿಗೆ ಖ್ಯಾತಿಯೂ ಸಹ ಈ ಟೂರ್ನಿಯಿಂದ ಸಿಗುತ್ತದೆ.

2021ರ ಐಪಿಎಲ್​ ಟೂರ್ನಿಯಲ್ಲಿ ಕ್ರಿಸ್​ ಮೊರಿಸ್​ ದುಬಾರಿ ಆಟಗಾರನೆಂಬ ಹೆಸರಿಗೆ ಪಾತ್ರರಾಗಿದ್ದಾರೆ. ರಾಜಸ್ಥಾನ ರಾಯಲ್ಸ್ ತಂಡದ ಪರ ಆಡಲು ಕ್ರಿಸ್​ ಮೊರಿಸ್​ಗೆ ಬರೋಬ್ಬರಿ 16.25 ಕೋಟಿ ರೂ. ಅನ್ನು ಹರಾಜು ಪ್ರಕ್ರಿಯೆ ವೇಳೆ ನೀಡಲಾಗಿದೆ. ಇನ್ನು ಹರಾಜಿನ ಸಮಯದಲ್ಲಿ ಬೆಲೆ ಬದಲಾಗಬಹುದಾದರೂ, ಪ್ರತಿ ಒಪ್ಪಂದಕ್ಕೆ ಗಳಿಸುವ ಕೆಲವು ಮೀಸಲು ಆಟಗಾರರು ಸಹ ಐಪಿಎಲ್ ತಂಡಗಳಲ್ಲಿರುತ್ತಾರೆ. ಅವರಲ್ಲಿ ಟೀಮ್​ ಇಂಡಿಯಾದ ಮಾಜಿ ಕ್ರಿಕೆಟಿಗ ಮತ್ತು ಚೆನ್ನೈ ಸೂಪರ್​​ ಕಿಂಗ್ಸ್​ ತಂಡದ ನಾಯಕ ಎಂ.ಎಸ್​. ಧೋನಿ ಕೂಡ ಒಬ್ಬರು.

ಟೂರ್ನಿ ಶುರುವಾದಾಗಿನಿಂದ ಧೋನಿ ಚೆನ್ನೈ ಪರ ಆಡುತ್ತಿದ್ದಾರೆ. ಹೀಗಾಗಿಯೇ ಧೋನಿ ಅವರಿಗೆ ಚೆನ್ನೈ ಒಳ್ಳೆಯ ಅಭಿಮಾನಿ ಬಳಗವೂ ಇದೆ. ಮೂರು ಬಾರಿ ಚೆನ್ನೈ ತಂಡಕ್ಕೆ ಟ್ರೋಫಿ ಜಯಿಸಿಕೊಟ್ಟಿರುವ ಧೋನಿ ಅವರಿಗೆ ಒಪ್ಪಂದ ಪ್ರಕಾರ ಪ್ರತಿ ಆವೃತ್ತಿಯಲ್ಲೂ 15 ಕೋಟಿ ರೂಪಾಯಿ ಪಡೆಯುತ್ತಿದ್ದಾರೆಂದು ತಿಳಿದುಬಂದಿದೆ.

ಇನ್ನು ಧೋನಿ ಅವರು ಜಾಹಿರಾತುಗಳಿಂದಲೂ ಹಣ ಗಳಿಕೆ ಮಾಡುತ್ತಿದ್ದಾರೆ. ಬ್ರ್ಯಾಂಡ್​ ಪ್ರಚಾರಗಳ ಕಿಂಗ್​ ಆಗಿರುವ ಧೋನಿ ಡ್ರೀಮ್​ 11, ಗೋ ಡ್ಯಾಡಿ, ಮಾಸ್ಟರ್​ ಕಾರ್ಡ್​, ಯಿಪ್ಪಿ ನೂಡಲ್ಸ್​, ಗಲ್ಫ್​ ಎಂಜಿನ್​ ಆಯಿಲ್​ ಮತ್ತು ಇತರೆ ಬ್ರ್ಯಾಂಡ್​ಗಳ ಮೂಲಕ 50 ಕೋಟಿ ರೂ. ಸಂಪಾದನೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅಂತಾರಾಷ್ಟ್ರೀಯ ಕ್ರಿಕೆಟ್​​ ಕರಿಯರ್​ನಲ್ಲಿ ಧೋನಿ ಸಂಬಳದ ವಿಚಾರಕ್ಕೆ ಬಂದಾಗ ಅವರನ್ನು ಬಿಸಿಸಿಐ ಎ+ ಕ್ಯಾಟಗರಿ ಅಡಿಯಲ್ಲಿ ಇರಿಸಿದ್ದು, ಕಳೆದ ವರ್ಷ ಧೋನಿ ಅವರು ಕ್ರಿಕೆಟ್​ನಿಂದ ನಿವೃತ್ತಿ ಘೋಷಿಸಿದ್ದರು. ಈಗಲೂ ಧೋನಿ ಅವರು 74.49 ಕೋಟಿ ರೂಪಾಯಿ ಸಂಪಾದನೆ ಮಾಡುತ್ತಿದ್ದಾರೆಂದು ತಿಳಿದುಬಂದಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net