ನವದೆಹಲಿ: ಸೆಲೆಬ್ರಿಟಿಗಳದ್ದು ದುಬಾರಿ ಜೀವನ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಚಿಕ್ಕ ವಾಚ್ನಿಂದ ಹಿಡಿದು ದೊಡ್ಡ ಕಾರುಗಳವರೆಗೂ ಸೆಲೆಬ್ರಿಟಿಗಳು ಬಳಸುವ ವಸ್ತುಗಳೆಲ್ಲ ತುಂಬಾ ದುಬಾರಿಯಾಗಿರುತ್ತವೆ. ಒಮ್ಮೆಮ್ಮೆ ಅವರು ಬಳಸುವ ವಸ್ತುಗಳ ಬೆಲೆ ತಿಳಿದು ಹುಬ್ಬೇರಿಸಿರುತ್ತೀವೆ. ಇದೀಗ ಅಂಥದ್ದೇ ಮತ್ತೊಂದು ಸಂಗತಿ ಬೆಳಕಿಗೆ ಬಂದಿದೆ.
ಟೀಮ್ ಇಂಡಿಯಾದ ಆಟಗಾರ ಹಾರ್ದಿಕ್ ಪಾಂಡ್ಯ ಬಳಿ ಬೆಲೆ ಬಾಳುವ ವಸ್ತುಗಳಿವೆ. ಹಾರ್ದಿಕ್ ಬಳಿ ಇರುವ ವಸ್ತುಗಳ ಸಂಗ್ರಹಣೆಯಲ್ಲಿ ಅತ್ಯಂತ ದುಬಾರಿಯೆಂದರೆ ಪಾಟೆಕ್ ಫಿಲಿಪ್ ನಾಟಿಲಸ್ ಪ್ಲಾಟಿನಂ 5711 ವಾಚ್. ಇದು 32 ಬ್ಯಾಗೆಟ್-ಕಟ್ ಪಚ್ಚೆಗಳನ್ನು ಹೊಂದಿದ್ದು, ಸಂಪೂರ್ಣವಾಗಿ ಪ್ಲಾಟಿನಂ ಆಗಿದೆ. ಇದರ ಬೆಲೆ ಬರೋಬ್ಬರಿ 5 ಕೋಟಿ ರೂಪಾಯಿ.

ಪಾಂಡ್ಯ ಬಳಿ ಮತ್ತೊಂದು ದುಬಾರಿ ವಾಚ್ ಇರುವುದು ಅವರು ಇನ್ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿರುವ ಫೋಟೋದಿಂದ ತಿಳಿಯುತ್ತದೆ. ಅದರ ಹೆಸರು ಪಾಟೆಕ್ ಫಿಲಿಪ್ ನಾಟಿಲಸ್ 5712R. ಇದರಲ್ಲಿ ವಜ್ರದ ಡಿಸೈನ್ ಇದ್ದು, ಇದರ ಬೆಲೆ 1.65 ಕೋಟಿ ರೂಪಾಯಿ.
ಹಾರ್ದಿಕ್ ಸ್ಪಷ್ಟವಾಗಿ ಪಾಟೆಕ್ ಫಿಲಿಪ್ ವಾಚ್ಗಳ ಸರಣಿಯನ್ನೇ ಹೊಂದಿದ್ದಾರೆ ಎಂಬುದು ಅವರು ಇನ್ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿರುವ ಫೋಟೋಗಳಲ್ಲಿ ಸ್ಪಷ್ಟವಾಗಿದೆ. ಪಾಟೆಕ್ ಫಿಲಿಪ್ ನಾಟಿಲಸ್ ಹೆಸರಿನ ವಾಚ್ನಲ್ಲಿ 18 ಕ್ಯಾರೆಟ್ ಚಿನ್ನದ ಡಯಲ್ ಪ್ಲೇಟ್ನಲ್ಲಿ 255 ವಜ್ರಗಳು ಆವರಿಸಿದೆ. ಇದರ ಬೆಲೆ 2.7 ಕೋಟಿ ರೂಪಾಯಿ.
ರೋಲೆಕ್ಸ್ ಆಯ್ಸ್ಟರ್ ಪರ್ಪೆಚುವಲ್ ಡೇಟೋನಾ ಕಾಸ್ಮೊಗ್ರಾಫ್ ಹೆಸರಿನ 1 ಕೋಟಿ ರೂ. ಬೆಲೆ ಬಾಳುವ ವಾಚ್ ಹಾಗೂ 38 ಲಕ್ಷ ರೂ. ಬೆಲೆ ಬಾಳುವ ಆಡೆಮಾರ್ಸ್ ಪಿಗುಯೆಟ್ ಓಕ್ ಸೆಲ್ಫ್ವಿನ್ಫಿಂಗ್ ಕ್ರೋನೋಗ್ರಾಫ್ ರೋಸ್ ಗೋಲ್ಡ್ ವಾಚ್ ಸೇರಿದಂತೆ ಎಲ್ಲ ವಾಚ್ಗಳು ಸೇರಿ 10 ಕೋಟಿ ರೂಪಾಯಿ ಮೌಲ್ಯದ ವಾಚ್ ಹಾರ್ದಿಕ್ ಪಾಂಡ್ಯರ ಬಳಿ ಇದೆಯಂತೆ.
ಇನ್ನು ವಾಚ್ ವಿಚಾರದಲ್ಲಿ ಹಾರ್ದಿಕ್ ಪಾಂಡ್ಯ ವಿವಾದಕ್ಕೂ ಗುರಿಯಾಗಿದ್ದಾರೆ. ಹಿಂದೊಮ್ಮೆ ದುಬೈನಿಂದ ಮರಳಿದಾಗ 5 ಕೋಟಿ ರೂ. ಮೌಲ್ಯದ ಎರಡು ವಾಚ್ಗಳನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ ಕಸ್ಟಮ್ ಅಧಿಕಾರಿಗಳು ಹಾರ್ದಿಕ್ ಪಾಂಡ್ಯರಿಂದ ವಶಕ್ಕೆ ಪಡೆದಿದ್ದರು. ಟಿ20 ವಿಶ್ವಕಪ್ ಟೂರ್ನಿ ಮುಗಿದ ಬಳಿಕ ಹಾರ್ದಿಕ್ ಪಾಂಡ್ಯ ದುಬೈನಿಂದ ತವರಿಗೆ ವಾಪಾಸ್ಸಾಗಿದ್ದರು. ಈ ವೇಳೆ ಕಸ್ಟಮ್ಸ್ ಅಧಿಕಾರಿಗಳು ತಪಾಸಣೆ ನಡೆಸಿದಾಗ 5 ಕೋಟಿ ರೂ. ಮೌಲ್ಯದ ಎರಡು ವಾಚ್ಗಳು ಪತ್ತೆಯಾಗಿದ್ದವು. ಅದರ ಬಿಲ್ ಕೇಳಿದ್ದಕ್ಕೆ ಇಲ್ಲ ಎಂಬ ಉತ್ತರ ಪಾಂಡ್ಯರಿಂದ ಬಂದಿದೆ. ಹೀಗಾಗಿ ವಾಚ್ಗಳನ್ನು ಅಧಿಕಾರಿಗಳು ಸೀಜ್ ಮಾಡಿದ್ದಾರೆ ಎಂದು ವರದಿಯಾಗಿತ್ತು. (ಏಜೆನ್ಸೀಸ್)