More

    ಮದ್ಯದ ಅಮಲಿನಲ್ಲಿ ಮಹಿಳಾ ಅಧಿಕಾರಿ ಕೊಟ್ಟ ಕಾಟಕ್ಕೆ ಹೈರಾಣಾದ ಪೊಲೀಸರು: ವಿಡಿಯೋ ವೈರಲ್​!

    ಬಹ್ರೈಚ್: ಮದ್ಯದ ಅಮಲಿನಲ್ಲಿ ಹಾಡಹಗಲಿನಲ್ಲೇ ಪೊಲೀಸರಿಗೆ ಕಾಟ ಕೊಟ್ಟ ಮಹಿಳಾ ಅಧಿಕಾರಿಯ ವಿರುದ್ಧ ಉತ್ತರ ಪ್ರದೇಶ ಸರ್ಕಾರ ತನಿಖೆಗೆ ಆದೇಶಿಸಿದೆ.

    ಈ ಘಟನೆ ಬಹ್ರೈಚ್ ಜಿಲ್ಲೆಯ ಜರ್ವಾಲ್ ರಸ್ತೆ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮಹಿಳಾ ಅಧಿಕಾರಿಯನ್ನು ರಚನಾ ಕೇಸರವಾಣಿ ಎಂದು ಗುರುತಿಸಲಾಗಿದೆ. ರಚನಾ ಅವರು ದೇವಿಪಟ್ಟಣ ಮಂಡಲದ ಡೆಪ್ಯೂಟಿ ಲೇಬರ್​ ಕಮಿಷನರ್​ ಆಗಿ ಸೇವೆ ಸಲ್ಲಿಸುತ್ತಿದ್ದು, ಕುಡಿದ ಅಮಲಿನಲ್ಲಿ ಬಹ್ರೈಚ್ ಪೊಲೀಸರಿಗೆ ತೊಂದರೆ ನೀಡಿದ್ದಲ್ಲದೆ, ಬೆದರಿಕೆ ಹಾಕಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.

    ವಿಡಿಯೋದಲ್ಲಿ ಏನಿದೆ?
    ವಿಡಿಯೋದಲ್ಲಿ ರಚನಾ ಅವರು ಕುಡಿದ ಅಮಲಿನಲ್ಲಿ ಪೊಲೀಸ್​ ಅಧಿಕಾರಿಗಳೊಂದಿಗೆ ಚರ್ಚೆಗೆ ಇಳಿದಿರುವುದನ್ನು ಕಾಣಬಹುದು. ನಾನೇನು ಜಿಲ್ಲಾ ಮಟ್ಟದ ಅಧಿಕಾರಿಯಲ್ಲ, ನಾನು ವಿಭಾಗೀಯ ಮಟ್ಟದ ಅಧಿಕಾರಿ. ನಾನು ಕಮಿಷನರ್​ ಜೊತೆ ಮಾತನಾಡುತ್ತೇನೆಂದು ಪೊಲೀಸ್​ ಅಧಿಕಾರಿಗಳಿಗೆ ಬೆದರಿಕೆ ಹಾಕಿರುವುದು ವಿಡಿಯೋದಲ್ಲಿ ಕೇಳಬಹುದಾಗಿದೆ. ಮಹಿಳಾ ಕಾನ್ಸ್​ಟೇಬಲ್​ ಒಬ್ಬರು ರಚನಾ ಅವರನ್ನು ಕಾರಿನೊಳಗೆ ಕೂರಿಸಲು ಹರಸಾಹಸ ಪಡುತ್ತಿರುವ ಸಮಯದಲ್ಲಿ ನಾನೇನು ಬೀಳುವುದಿಲ್ಲ ಎಂದು ಹೇಳಿರುವುದು ಸಹ ವೈರಲ್​ ವಿಡಿಯೋದಲ್ಲಿದೆ.

    ವೈರಲ್ ವೀಡಿಯೊವನ್ನು ಭಾನುವಾರ ಉತ್ತರ ಪ್ರದೇಶದ ಕಾರ್ಮಿಕ ಇಲಾಖೆಗೆ ರವಾನಿಸಿರುವ ಬಹ್ರೈಚ್ ಪೊಲೀಸರು ರಚನಾ ಅವರ ವಿರುದ್ಧ ತನಿಖೆಗೆ ವಿನಂತಿಸಿದ್ದಾರೆ.

    ಈ ಘಟನೆಯ ಬಗ್ಗೆ ಜರ್ವಾಲ್ ರೋಡ್ ಪೊಲೀಸ್ ಠಾಣೆಯ ಅಧಿಕಾರಿ ರಾಜೇಶ್ ಕುಮಾರ್ ಸಿಂಗ್ ಮಾತನಾಡಿ, ಏಪ್ರಿಲ್ 27ರಂದು ಮಹಿಳಾ ಅಧಿಕಾರಿ ಲಖನೌದಿಂದ ಗೊಂಡಾದಲ್ಲಿರುವ ತನ್ನ ಕಚೇರಿಗೆ ತನ್ನದೇ ಕಾರನ್ನು ಚಲಾಯಿಸಿಕೊಂಡು ಪ್ರಯಾಣಿಸುತ್ತಿದ್ದರು. ಈ ವೇಳೆ ದಾರಿ ತಪ್ಪಿದ ಅವರು ಬಹ್ರೈಚ್ ಕಡೆಗೆ ತಿರುಗಿ ಬಹ್ರೈಚ್ ರಸ್ತೆಯಲ್ಲಿ ಡಿವೈಡರ್‌ಗೆ ಡಿಕ್ಕಿ ಹೊಡೆದರು ಎಂದು ತಿಳಿಸಿದ್ದಾರೆ.

    ಡಿಕ್ಕಿ ಹೊಡೆದಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ತಕ್ಷಣ ಸ್ಥಳಕ್ಕೆ ತಲುಪಿದಾಗ, ಮಹಿಳಾ ಅಧಿಕಾರಿ ಮದ್ಯದ ಅಮಲಿನಲ್ಲಿರುವುದು ಕಂಡುಬಂದಿತು. ಅಲ್ಲದೆ, ಅಮಲಿನಲ್ಲೇ ತನ್ನ ಕಾರನ್ನು ಚಲಾಯಿಸಲು ಪ್ರಯತ್ನಿಸುತ್ತಿದ್ದರು. ಮಧ್ಯ ಪ್ರವೇಶಿಸಿದ ಪೊಲೀಸ್​ ಅಧಿಕಾರಿಗಳಿಗೆ ನಾನು ವಿಭಾಗೀಯ ಮಟ್ಟದ ಹಿರಿಯ ಅಧಿಕಾರಿ ಎಂದು ‘ಬೆದರಿಕೆ’ ಹಾಕಿದರು ಎಂದು ರಾಜೇಶ್ ಕುಮಾರ್ ಸಿಂಗ್ ಹೇಳಿದರು.

    ಮಾಹಿತಿ ಕೇಳಿದಾಗ, ನನ್ನ ಹೆಸರು ರಚನಾ ಕೇಸರವಾಣಿ. ನಾನು ದೇವಿ ಪಟ್ಟಣ ಮಂಡಲದ ಉಪ ಕಾರ್ಮಿಕ ಆಯುಕ್ತೆ ಎಂದು ಪರಿಚಯಿಸಿಕೊಂಡಳು. ಮಹಿಳಾ ಪೊಲೀಸ್ ಪಡೆಯು ರಚನಾ ಅವರ ಸಮ್ಮುಖದಲ್ಲೇ ಆಕೆಯ ಪತಿಯನ್ನು ಕರೆಸಿದರು. ಇದಾದ ಬಳಿಕ ಮಹಿಳಾ ಅಧಿಕಾರಿಯನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಿ ಪತಿಗೆ ಒಪ್ಪಿಸಲಾಗಿದೆ ಎಂದು ರಾಜೇಶ್ ಕುಮಾರ್ ಸಿಂಗ್ ಮಾಹಿತಿ ನೀಡಿದರು.

    ವೈದ್ಯಕೀಯ ಪರೀಕ್ಷೆಯ ವರದಿಯನ್ನು ಹಿರಿಯ ಪೊಲೀಸ್ ಅಧಿಕಾರಿಗಳ ಮೂಲಕ ಕಾರ್ಮಿಕ ಇಲಾಖೆಯ ಉನ್ನತಾಧಿಕಾರಿಗಳಿಗೆ ರವಾನಿಸಲಾಗಿದೆ. (ಏಜೆನ್ಸೀಸ್​)

    ಬಸ್​ ಚಾಲಕನನ್ನು ಪ್ರೀತಿಸಿ ಮದುವೆಯಾದ ಇಂಜಿನಿಯರಿಂಗ್​ ವಿದ್ಯಾರ್ಥಿನಿಗೆ ಕಾದಿತ್ತು ಶಾಕ್​!

    ಹಿಂದಿ ರಾಷ್ಟ್ರೀಯ ಭಾಷೆ: ಖ್ಯಾತ ಗಾಯಕ ಸೋನು ನಿಗಮ್​ ಹೇಳಿದ್ದು ಹೀಗೆ

    ಚಿಕನ್​ ಶೋರ್ಮಾ ತಿಂದ ಮರುದಿನವೇ ವಿದ್ಯಾರ್ಥಿನಿ ಸಾವು: ಮರಣೋತ್ತರ ವರದಿಯಲ್ಲಿತ್ತು ಸ್ಫೋಟಕ ಸಂಗತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts