

ಬರ್ಮಿಂಗ್‌ಹ್ಯಾಮ್ (ಯುಕೆ) : ಇಂಗ್ಲೆಂಡ್ ವಿರುದ್ಧದ ಮರುನಿಗದಿತ ಐದನೇ ಟೆಸ್ಟ್ ಪಂದ್ಯದಲ್ಲಿ ಭಾರತದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರನ್ನು ಆಯ್ಕೆ ಮಾಡದಿರುವ ನಿರ್ಧಾರವನ್ನು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಡ್ಯಾನಿಶ್ ಕನೇರಿಯಾ ಪ್ರಶ್ನಿಸಿದ್ದಾರೆ.
ಜೋ ರೂಟ್ (76*) ಮತ್ತು ಜಾನಿ ಬೈರ್‌ಸ್ಟೋವ್ (72*) ಅರ್ಧಶತಕಗಳಿಂದ ಇಂಗ್ಲೆಂಡ್ ಈಗ ಉತ್ತಮ ಸ್ಥಿಯಲ್ಲಿದ್ದು, ಸೋಮವಾರ ಭಾರತ ತಂಡ ವಿಕೆಟ್ ಪಡೆಯಲು ಹೆಣಗಾಡಿತು. ಇಂಗ್ಲೆಂಡ್ ವಿರುದ್ಧದ ಐದನೇ ಟೆಸ್ಟ್ ಪಂದ್ಯಕ್ಕೆ ಸರಿಯಾದ ಆಯ್ಕೆ ಮಾಡದಿರುವುದಕ್ಕೆ ತಂಡ ಈಗ ಬೆಲೆ ತರುತ್ತಿದೆ ಎಂದು ಕನೇರಿಯಾ ಹೇಳಿದ್ದಾರೆ.
"ಎಡ್ಜ್‌ಬಾಸ್ಟನ್‌ನಲ್ಲಿ ಟೀಮ್ ಇಂಡಿಯಾ ಗೆಲುವಿನಿಂದ ಸೋಲಿನತ್ತ ಸಾಗುತ್ತಿದೆ. ರವಿಚಂದ್ರನ್ ಅಶ್ವಿನ್ ಹನ್ನೊಂದರ ಆಟದಲ್ಲಿ ಏಕೆ ಆಡುತ್ತಿಲ್ಲ. ಯಾರು ಈ ನಿರ್ಧಾರವನ್ನು ಮಾಡಿದರು. ದ್ರಾವಿಡ್ ಅವರೇ? ಸ್ವತಃ ಅವರೇ ಕೋಚ್ ಆಗಿ ಇಂಗ್ಲೆಂಡ್‌ನಲ್ಲಿ ತುಂಬಾ ಆಟ ಆಡಿದ್ದಾರೆ. ಇಂಗ್ಲೆಂಡ್ನ ಹವಾಗುಣ ಅವರಿಗೆ ಚೆನ್ನಾಗಿ ಗೊತ್ತಿದೆ. ಈಗ ಇಂಗ್ಲೆಂಡ್‌ನಲ್ಲಿ ಬೇಸಿಗೆ. ಮೈದಾನ ಒಣಗಿರುತ್ತದೆ. ಅಲ್ಲದೆ ಮೂರು ದಿನದಿಂದ ಚೆಂಡು ಸ್ಪಿನ್ ಆಗುತ್ತಿದೆ. ಸೀಮ್ ಇರುವಲ್ಲಿ ತೇವಾಂಶದ ಕಾರಣದಿಂದ ಚೆಂಡು ಸ್ಪಿನ್ ಆಗುತ್ತಿದೆ. ಬುಮ್ರಾ ಮಾತ್ರ ಅದ್ಭುತಗಳನ್ನು ಮಾಡಬಲ್ಲರು ಎಂದು ಕಾಣುತ್ತದೆ. ಈ ಸಂದರ್ಭದಲ್ಲಿ ಭಾರತ ಅಶ್ವಿನ್ ಅವರನ್ನು ಹೊರಗಿಟ್ಟು ತಪ್ಪು ಮಾಡಿದೆ ಮತ್ತು ಅದರ ಬೆಲೆಯನ್ನು ತೆರುತ್ತದೆ" ಎಂದು ಕನೇರಿಯಾ ಕೂ ಮಾಡಿದ್ದಾರೆ.
ಸೋಮವಾರದ ದಿನದಾಟದ ಅಂತ್ಯಕ್ಕೆ ಇಂಗ್ಲೆಂಡ್ ಸ್ಕೋರ್ 259/3 ಆಗಿತ್ತು. ರೂಟ್ ಮತ್ತು ಬೈರ್‌ಸ್ಟೋವ್ ಕ್ರೀಸ್‌ನಲ್ಲಿದ್ದರು. ಇಂಗ್ಲೆಂಡ್‌ಗೆ ಗೆಲುವಿಗೆ 119 ರನ್‌ಗಳ ಅವಶ್ಯಕತೆಯಿದ್ದು, ಭಾರತವು ಸರಣಿಯನ್ನು ವಶಪಡಿಸಿಕೊಳ್ಳಲು ಏಳು ವಿಕೆಟ್‌ಗಳನ್ನು ಪಡೆಯಬೇಕಾಗಿದೆ.
ಸೋಮವಾರದ ನಾಲ್ಕನೇ ದಿನದ ಅಂತಿಮ ಸೆಷನ್‌ನಲ್ಲಿ ಇವರಿಬ್ಬರು ರನ್‌ಗಳನ್ನು ಪೇರಿಸುವುದನ್ನು ಮುಂದುವರೆಸಿದ್ದರಿಂದ ಭಾರತೀಯ ವೇಗದ ಬೌಲಿಂಗ್ ದಾಳಿಯು ರೂಟ್ ಮತ್ತು ಬೈರ್ಟ್‌ಸೊವ್ ಅವರ ಇನ್-ಫಾರ್ಮ್ ಜೋಡಿಯ ವಿರುದ್ಧ ನಿಷ್ಪರಿಣಾಮಕಾರಿಯಾಯಿತು.