ನವಜಾತ ಗಂಡು ಮಗುವನ್ನು ಕಳೆದುಕೊಂಡ ಸ್ಟಾರ್ ಫುಟ್ಬಾಲ್ ಆಟಗಾರ ರೊನಾಲ್ಡೊ

Ronaldo
Published on

ಲಂಡನ್​: ಮ್ಯಾಂಚೆಸ್ಟರ್​ ಯುನೈಟೆಡ್ ಸ್ಟಾರ್ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೊ ಅವರು ತಮ್ಮ ಬದುಕಿನ ನೋವಿನ ಘಟನೆಯನ್ನು ಹಂಚಿಕೊಂಡಿದ್ದಾರೆ. ತಮ್ಮ ಸಂಗಾತಿ ಜಾರ್ಜಿನಾ ರೊಡ್ರಿಗಸ್ ಗಂಡು ಮತ್ತು ಹೆಣ್ಣು ಮಗುವಿಗೆ ಜನ್ಮ ನೀಡಿದ ಬೆನ್ನಲ್ಲೇ ಗಂಡು ಮಗು ದುರಂತ ಸಾವಿಗೀಡಾಗಿರುವ ದುಃಖದ ಸಂಗತಿಯನ್ನು ತಿಳಿಸಿದ್ದಾರೆ.

ರೊನಾಲ್ಡೊ ಹಾಗೂ ಜಾರ್ಜಿನಾ ರೊಡ್ರಿಗಸ್ ದಂಪತಿ ಅವಳಿ ಮಕ್ಕಳನ್ನು ನಿರೀಕ್ಷಿಸುತ್ತಿದ್ದರು. ಅದರಂತೆ ರೊಡ್ರಿಗಸ್​ ಅವರು ಸೋಮವಾರ ಹೆಣ್ಣು ಮತ್ತು ಗಂಡು ಅವಳಿ ಮಕ್ಕಳಿಗೆ ಜನ್ಮ ನೀಡಿದರು. ಆದರೆ, ದುರಾದೃಷ್ಟವಶಾತ್​ ಜನ್ಮ ನೀಡಿದ ಬೆನ್ನಲ್ಲೇ ಗಂಡು ಮಗು ಮೃತಪಟ್ಟಿದೆ.

ನಮ್ಮ ಮಗು ತೀರಿಕೊಂಡಿದೆ ಎಂದು ಘೋಷಿಸಲು ತುಂಬಾ ದುಃಖವಾಗುತ್ತಿದೆ ಎಂದು ರೊನಾಲ್ಡೊ ಇನ್​ಸ್ಟಾಗ್ರಾಂ ಮೂಲಕ ಸೋಮವಾರ ತಿಳಿಸಿದ್ದಾರೆ.

ಇದು ಯಾವುದೇ ಪೋಷಕರು ಅನುಭವಿಸಬಹುದಾದ ದೊಡ್ಡ ನೋವು. ನಮ್ಮ ಹೆಣ್ಣು ಮಗುವಿನ ಜನನವು ಈ ಕ್ಷಣವನ್ನು ಸ್ವಲ್ಪ ಭರವಸೆ ಮತ್ತು ಸಂತೋಷದಿಂದ ಬದುಕುವ ಶಕ್ತಿಯನ್ನು ನೀಡುತ್ತದೆ. ಆರೈಕೆ ಮತ್ತು ಬೆಂಬಲಕ್ಕಾಗಿ ನಾವು ವೈದ್ಯರು ಮತ್ತು ದಾದಿಯರಿಗೆ ಧನ್ಯವಾದ ಹೇಳಲು ಬಯಸುತ್ತೇವೆ. ಗಂಡ ಮಗು ಕಳೆದುಕೊಂಡ ನಷ್ಟದಿಂದ ನಾವೆಲ್ಲರೂ ಆಘಾತಗೊಂಡಿದ್ದೇವೆ ಮತ್ತು ಈ ಕಷ್ಟದ ಸಮಯದಲ್ಲಿ ನಾವು ಗೌಪ್ಯತೆಯನ್ನು ಬಯಸುತ್ತೇವೆ ಎಂದು ರೊನಾಲ್ಡೊ ಕೇಳಿಕೊಂಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net