

ನವದೆಹಲಿ: ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟ್ಸ್ಮನ್ ಡೇವಿಡ್ ವಾರ್ನರ್ ಲಾಕ್ಡೌನ್ ಸಮಯದಲ್ಲಿ ವಿವಿಧ ಟಿಕ್ಟಾಕ್ ವಿಡಿಯೋಗಳ ಮೂಲಕ ಭಾರತೀಯ ಅಭಿಮಾನಿಗಳ ಗಮನ ಸೆಳೆಯುತ್ತಿದ್ದರು. ಆದರೆ ಭಾರತ ಸರ್ಕಾರ ಸೋಮವಾರ ಚೀನಾದ 59 ಆ್ಯಪ್ಗಳ ಜತೆಗೆ ಟಿಕ್ಟಾಕ್ ಅನ್ನೂ ನಿಷೇಧಿಸಿದೆ. ಇದಕ್ಕಾಗಿ ಡೇವಿಡ್ ವಾರ್ನರ್ ಅವರನ್ನು ಭಾರತದ ಹಿರಿಯ ಸ್ಪಿನ್ನರ್ ಆರ್. ಅಶ್ವಿನ್ ಕಿಚಾಯಿಸಿದ್ದಾರೆ.
ಇದನ್ನೂ ಓದಿ: ಶೂಟರ್ ಅಭಿಷೇಕ್ ವರ್ಮಗೆ ಕ್ರಿಮಿನಲ್ ಲಾಯರ್ ಆಗುವ ಹಂಬಲ!
ಸರ್ಕಾರ ಟಿಕ್ಟಾಕ್ ಆ್ಯಪ್ ನಿಷೇಧಿಸಿರುವ ಬಗೆಗಿನ ಸುದ್ದಿಯನ್ನು ಪರ್ತಕತ್ರೆಯೊಬ್ಬರು ಟ್ವೀಟಿಸಿರುವುದಕ್ಕೆ ಪ್ರತಿಯಾಗಿ ಅಶ್ವಿನ್, 'ಅಪ್ಪೋ ಅನ್ವರ್?' ಎಂದು ಟ್ವೀಟಿಸಿ ಡೇವಿಡ್ ವಾರ್ನರ್ರನ್ನು ಟ್ಯಾಗ್ ಮಾಡಿದ್ದಾರೆ. ಇದು ಸೂಪರ್ಸ್ಟಾರ್ ರಜನಿಕಾಂತ್ ಅವರ 'ಬಾಷಾ' ಸಿನಿಮಾದ ಜನಪ್ರಿಯ ಡೈಲಾಗ್ ಆಗಿದೆ. ವಾರ್ನರ್ ಈಗೇನು ಮಾಡುವರು ಎಂಬುದು ಇದರ ಅರ್ಥವಾಗಿದೆ.
ಇದನ್ನೂ ಓದಿ: ಕೆಎಲ್ ರಾಹುಲ್ಗೆ ಮತ್ತೆ ಫಜೀತಿ ತಂದ ಕಾಫಿ!
ಲಾಕ್ಡೌನ್ ಸಮಯದಲ್ಲಿ ಆಸ್ಟ್ರೇಲಿಯಾದ ಮನೆಯಿಂದಲೇ ಪತ್ನಿ ಮತ್ತು ಮಕ್ಕಳ ಜತೆಗೂಡಿ ವಿವಿಧ ತಮಿಳು, ತೆಲುಗು, ಹಿಂದಿ ಹಾಡುಗಳಿಗೆ ನರ್ತಿಸಿ ಟಿಕ್ಟಾಕ್ ವಿಡಿಯೋ ಮಾಡುತ್ತಿರುವ ಡೇವಿಡ್ ವಾರ್ನರ್ಗೆ ಭಾರತೀಯ ಅಭಿಮಾನಿಗಳಿಂದಲೇ ಹೆಚ್ಚಿನ ಮೆಚ್ಚುಗೆ ಲಭಿಸಿದೆ.