

ಚಂಡೀಗಢ: ನಿನ್ನೆ (ಏ.9) ಇಲ್ಲಿನ ಮುಲ್ಲನ್‌ಪುರದ ಮಹಾರಾಜ ಯಾದವೀಂದ್ರ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 2024ರ 23ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಸನ್ರೈಸರ್ಸ್ ಹೈದರಾಬಾದ್ ಭರ್ಜರಿ ಜಯ ಸಾಧಿಸಿದೆ. ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ತಂಡದ ನಾಯಕ ಶಿಖರ್ ಧವನ್ ಮೊದಲು ಬೌಲಿಂಗ್ ಆಯ್ದುಕೊಂಡರು. ಅದರಂತೆ ಮೊದಲು ಬ್ಯಾಟ್ ಮಾಡಿದ ಸನ್ರೈಸರ್ಸ್ ಹೈದರಾಬಾದ್ ಉತ್ತಮ ಸ್ಟಾರ್ಟ್ ಪಡೆಯಲಿಲ್ಲ.
ಓಪನರ್ಸ್ ಆಗಿ ಬಂದ ಟ್ರಾವಿಸ್ ಹೆಡ್ (21) ಹಾಗೂ ಅಭಿಷೇಕ್ ಶರ್ಮಾ (16) ಹೆಚ್ಚು ಕಾಲ ಕ್ರೀಸ್ನಲ್ಲಿ ನಿಲ್ಲದೆ ಬೇಗನೆ ಔಟ್ ಆಗಿ ಪೆವಿಲಿಯನ್ ಸೇರಿದರು. ಇನ್ನು ಮೂರನೇ ಕ್ರಮಾಂಕದಲ್ಲಿ ಬಂದ ಐಡೆನ್ ಮಾರ್ಕ್ರಾಮ್ (0) ಡಕ್ ಔಟ್ ಆಗಿ ಹೋದರೆ, ನಂತರದಲ್ಲಿ ಕಣಕ್ಕಿಳಿದ ನಿತೀಶ್ ರೆಡ್ಡಿ ಬ್ಯಾಟಿಂಗ್ ಆರ್ಭಟದಿಂದ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 182 ಕಲೆಹಾಕುವಲ್ಲಿ ಎಸ್ಆರ್ಎಚ್ ಯಶಸ್ವಿಯಾಯಿತು.
37 ಎಸೆತಗಳನ್ನು ಎದುರಿಸಿದ ನಿತೀಶ್ ಐದು ಸಿಕ್ಸ್ ಹಾಗೂ 4 ಫೋರ್ಗಳನ್ನು ಸಿಡಿಸುವ ಮೂಲಕ 64 ರನ್ ಗಳಿಸಿ, ಕ್ರಿಕೆಟ್ ಅಭಿಮಾನಿಗಳನ್ನು ಮನರಂಜಿಸಿದರು. ಎಸ್ಆರ್ಎಚ್ ನೀಡಿದ 183 ರನ್ಗಳ ಗುರಿ ಬೆನ್ನಟ್ಟಿದ ಪಂಜಾಬ್ ಕಿಂಗ್ಸ್ ಉತ್ತಮ ಆರಂಭ ಸಿಗಲಿಲ್ಲ. ಜಾನಿ ಬೈರ್ಸ್ಟೋವ್ (0) ಶೂನ್ಯಕ್ಕೆ ಔಟ್ ಆದರೆ, ಪ್ರಭ್ಸಿಮ್ರಾನ್ ಸಿಂಗ್ (4) ರನ್ಗೆ ಹೊರನಡೆದರು. ಇನ್ನು ನಾಯಕ ಶಿಖರ್ ಧವನ್ ಕೇವಲ 14 ರನ್ಗಳಿಗೆ ಪೆವಿಲಿಯನ್ಗೆ ಮರಳಿದರು. ಕಡೆಯ ಓವರ್ವರೆಗೆ ತಲುಪಿದ ಈ ಪಂದ್ಯವನ್ನು ವಶಪಡಿಸಿಕೊಳ್ಳುವಲ್ಲಿ ಪಂಜಾಬ್ ವಿಫಲವಾಯಿತು. ಅದರಲ್ಲೂ ಕೇವಲ 2 ರನ್ಗಳಿಂದ ಪಂದ್ಯ ಕೈಚೆಲ್ಲಿದ್ದು ಫ್ಯಾನ್ಸ್ಗೆ ಅತೀವ ಬೇಸರ ತಂದಿತು.
ಸತತ ಸೋಲಿನಿಂದ ತತ್ತರಿಸಿರುವ ಪಂಜಾಬ್ ಕಿಂಗ್ಸ್ ಮತ್ತೆ ಗೆಲುವಿನ ಹಾದಿಗೆ ಮರಳಲು ಮಾಡಬೇಕಾದ ಮೂರು ಬದಲಾವಣೆಗಳು ಹೀಗಿವೆ:
1. ಹರ್‌ಪ್ರೀತ್ ಬ್ರಾರ್ ಬದಲಿಗೆ ರಾಹುಲ್ ಚಾಹರ್!
2. ಪ್ರಭಾಸಿಮ್ರಾನ್ ಸಿಂಗ್ ಬದಲಿಗೆ ಅಥರ್ವ ಟೈಡೆಯಲ್ಲಿ ಸ್ಲಾಟ್
3. ಶಿಖರ್ ಧವನ್ ಸ್ಟ್ರೈಕ್ ರೇಟ್ನಲ್ಲಿ ಬೇಕಿದೆ ಸುಧಾರಣೆ,(ಏಜೆನ್ಸೀಸ್).