More

  ನಿತೀಶ್​ ರೆಡ್ಡಿ ಆಲ್​ರೌಂಡರ್​ ಪ್ರದರ್ಶನ: ಸನ್​ರೈಸರ್ಸ್​ ಹೈದರಾಬಾದ್ ಎದುರು ಶರಣಾದ ಪಂಜಾಬ್​ ಕಿಂಗ್ಸ್​​

  ಚಂಡೀಗಢ: ಮುಲ್ಲನ್ಪುರ್ ಮಹಾರಾಜ ಯಾದವೀಂದ್ರ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಮಂಗಳವಾರ (ಏಪ್ರಿಲ್​ 09) ನಡೆದ ಪ್ರಸಕ್ತ ಐಪಿಎಲ್ ಟೂರ್ನಿಯ 23ನೇ​ ಪಂದ್ಯದಲ್ಲಿ ಸನ್​ ರೈಸರ್ಸ್​ ಹೈದರಾಬಾದ್​​ (ಎಸ್​ಆರ್​ಎಚ್​) ತಂಡ ಪಂಜಾಬ್​ ಕಿಂಗ್ಸ್​ ವಿರುದ್ಧ 2 ರನ್​ಗಳ ರೋಚಕ ಗೆಲುವು ದಾಖಲಿಸಿತು.

  ಟಾಸ್​ ಸೋತು ಬ್ಯಾಟಿಂಗ್​ ಆರಂಭಿಸಿದ ಎಸ್​ಆರ್​ಎಚ್​ ನಿಗದಿತ 20 ಓವರ್​ಗಳಲ್ಲಿ 9 ವಿಕೆಟ್​ ನಷ್ಟಕ್ಕೆ 182 ರನ್ ಕಲೆಹಾಕಿತು. ತಂಡದ ಪರ ನಿತೀಶ್​ ರೆಡ್ಡಿ (64 ರನ್, 37 ಎಸೆತ, 4 ಬೌಂಡರಿ, 5 ಸಿಕ್ಸರ್​) ಅಮೋಘ ಬ್ಯಾಟಿಂಗ್​ ಪ್ರದರ್ಶಿಸುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

  ಪಂಜಾಬ್​ ಪರ ಅರ್ಷದೀಪ್​ ಸಿಂಗ್​ 2 ವಿಕೆಟ್​ ಪಡೆದರೆ, ರಬಾಡ, ಸ್ಯಾಮ್​ ಕರನ್​ ಮತ್ತು ಹರ್ಷಲ್​ ಪಟೇಲ್​ ತಲಾ ಒಂದೊಂದು ವಿಕೆಟ್​ ಪಡೆದರು.

  ಎಸ್​ಆರ್​ಎಚ್​ ನೀಡಿದ 183 ರನ್​ಗಳ ಗುರಿ ಬೆನ್ನತ್ತಿದ ಪಂಜಾಬ್​ ತಂಡ ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್​ ನಷ್ಟಕ್ಕೆ 180 ರನ್​ ಮಾತ್ರ ಕಲೆಹಾಕಿತು. ತಂಡದ ಪರ ಶಶಾಂಕ್​ ಸಿಂಗ್ (46)​ ಮತ್ತೆ ಉತ್ತಮ ಆಟವಾಡಿದರು. ಉಳಿದಂತೆ ಸ್ಯಾಮ್​ ಕರನ್​ (29) ಹಾಗೂ ಶಿಖಂದರ್​ ರಜಾ (28) ಬಿಟ್ಟರೆ ಉಳಿದ ಯಾವೊಬ್ಬ ಆಟಗಾರನು ಕೂಡ ಉತ್ತಮ ಬ್ಯಾಟಿಂಗ್​ ಪ್ರದರ್ಶನ ನೀಡಲಿಲ್ಲ.

  ಎಸ್​ಆರ್​ಎಚ್​ ಪರ ಉತ್ತಮ ಬೌಲಿಂಗ್​ ಮಾಡಿದ ಭುವನೇಶ್ವರ್​ ಕುಮಾರ್​ 2 ವಿಕೆಟ್​ ಪಡೆದು ಮಿಂಚಿದರು. ಉಳಿದಂತೆ ಪ್ಯಾಟ್​ ಕಮಿನ್ಸ್​, ಟಿ ನಟರಾಜನ್​, ನಿತೀಶ್​ ರೆಡ್ಡಿ ಹಾಗೂ ಜಯದೇವ್​ ಉನದ್ಕಟ್​ ತಲಾ ಒಂದೊಂದು ವಿಕೆಟ್​ ಪಡೆದರು. (ಏಜೆನ್ಸೀಸ್​)

  ಏಕಕಾಲದಲ್ಲಿ ಒಂದೇ ಕುಟುಂಬದ 17 ಮಂದಿಗೆ ಮದುವೆ! ಅಜ್ಜನ ಮಾಸ್ಟರ್​ ಪ್ಲಾನ್​ಗೆ ಬೆರಗಾದ್ರು ಗ್ರಾಮಸ್ಥರು

  ಏಕಾಏಕಿ ಬಾಲಕನ ಮೇಲೆ ಪಿಟ್​ಬುಲ್​ ದಾಳಿ; ಆದರೆ ಆತನನ್ನು ರಕ್ಷಿಸಿದ್ದು ಮಾತ್ರ…

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts