ಟೆಸ್ಟ್​ನಲ್ಲಿ ಭಾರತ ನಂಬರ್ 1 ಆಗುವಲ್ಲಿ ಪೂಜಾರ ಪ್ರಮುಖ ಪಾತ್ರ ವಹಿಸಿದರು: ರವಿ ಶಾಸ್ತ್ರಿ| Ravi Shastri

Cheteshwar Pujara,
Published on

Ravi Shastri: ಭಾರತೀಯ ಕ್ರಿಕೆಟ್​ನ ಸ್ಟಾರ್​ ಆಟಗಾರ ಚೇತೇಶ್ವರ ಪೂಜಾರ ನಿವೃತ್ತಿಯ ಬಗ್ಗೆ ಟೀಮ್ ಇಂಡಿಯಾದ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ ಬಗ್ಗೆ ಕೆಲವು ವಿಶೇಷ ಮಾತುಗಳನ್ನು ಆಡಿದ್ದಾರೆ.

ಈ ಪೂಜಾರ ಬಗ್ಗೆ ಎಕ್ಸ್​ನಲ್ಲಿ ಪೋಸ್ಟ್​ ಮಾಡಿರುವ ಮಾಜಿ ಕೋಚ್​, 2020-21ರ ಆಸ್ಟ್ರೇಲಿಯಾ ಪ್ರವಾಸದಲ್ಲಿ, ಪೂಜಾರ ವಿಕೆಟ್ ನೀಡಲು ನಿರಾಕರಿಸಿದ್ದರಿಂದ ಬೌಲರ್​ಗಳು ದೇಹದ ಮೇಲೆ ಹೊಡೆತಗಳನ್ನು ನೀಡುತ್ತಲೇ ಇದ್ದರು. ಭಾರತವು ಎಲ್ಲಾ ಕಂಡಿಷನ್​ ವಿರುದ್ಧ ಗೆದ್ದ ಗಬ್ಬಾ ಟೆಸ್ಟ್‌ನಲ್ಲಿ, ದೇಹದ ಮೇಲೆ 11 ಹೊಡೆತ ಬಿದ್ದಿತ್ತು ಎಂದು ಹೇಳಿದ್ದಾರೆ.

ಮುಂದುವರೆದು ಮಾತನಾಡಿದ ಶಾಸ್ತ್ರಿ, ಪೂಜಾರ ಒಬ್ಬ ಯೋಧ ಎಂದು ಕರೆದಿದ್ದಾರೆ. ನನ್ನ ಕೋಚಿಂಗ್ ಅವಧಿಯಲ್ಲಿ ಭಾರತ ಟೆಸ್ಟ್ ಕ್ರಿಕೆಟ್‌ನಲ್ಲಿ ಸೋಲಿಸಬೇಕಾದ ತಂಡವಾಯಿತು ಮತ್ತು ಟೆಸ್ಟ್​ನಲ್ಲಿ ಜಗತ್ತಿನಲ್ಲಿ ನಂ.1 ಸ್ಥಾನಕ್ಕೆ ಏರಿತು. ಪೂಜಾರ ಕೊಡುಗೆ ಅಪಾರವಾಗಿದೆ ಎಂದು ತಿಳಿಸಿದ್ದಾರೆ.

ಭಾರತ ಸತತ 5 ವರ್ಷಗಳ ಕಾಲ ನಂಬರ್ 1 ಸ್ಥಾನ ಗಳಿಸುವಲ್ಲಿ ಮತ್ತು ಆಸ್ಟ್ರೇಲಿಯಾದಲ್ಲಿ ಸತತ 2 ಸರಣಿ ಗೆಲುವುಗಳಲ್ಲಿ ಪೂಜಾರ ಪ್ರಮುಖ ಪಾತ್ರ ವಹಿಸಿದ್ದರು. ಅಸ್ಟ್ರೇಲಿಯಾದಲ್ಲಿ ಪೂಜಾರ ಆಟ ಅದ್ಭುತವಾಗಿತ್ತು. ಚೆನ್ನಾಗಿ ಮಾಡಿದ್ದೀರಿ ಪೂಜಿ. ದೇವರು ನಿಮಗೆ ಒಳ್ಳೆಯದಾಗಲಿ ಎಂದು ಶಾಸ್ತ್ರಿ ಪೋಸ್ಟ್​​ನಲ್ಲಿ​ಬರೆದಿದ್ದಾರೆ.

ಪೂಜಾರ 2010 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್​ ಮಾದರಿಗೆ ಪಾದಾರ್ಪಣೆ ಮಾಡಿದರು. 2012 ರಲ್ಲಿ ಹೈದರಾಬಾದ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ತಮ್ಮ ಮೊದಲ ಶತಕವನ್ನು ದಾಖಲಿಸಿದರು. ಒಂದೇ ಟೆಸ್ಟ್ ಇನ್ನಿಂಗ್ಸ್‌ನಲ್ಲಿ 500 ಕ್ಕೂ ಹೆಚ್ಚು ಎಸೆತಗಳನ್ನು ಎದುರಿಸಿದ ಏಕೈಕ ಭಾರತೀಯ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ.

ಭಾರತವನ್ನು 103 ಟೆಸ್ಟ್ ಮತ್ತು 5 ಏಕದಿನ ಪಂದ್ಯಗಳಲ್ಲಿ ಪ್ರತಿನಿಧಿಸಿದ್ದಾರೆ. ಎರಡೂ ಸ್ವರೂಪಗಳಲ್ಲಿ 7,000 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net