ಟಾಮ್ ಕರನ್​ ಕಣ್ಣೀರಿಟ್ಟರು! ಡ್ಯಾರಿ ಮಿಚೆಲ್​ ಇನ್ಯಾವತ್ತೂ ಪಾಕ್​ಗೆ ಹೋಗಲ್ಲ ಅಂದ್ರು... ಕಹಿ ಅನುಭವ ಬಿಚ್ಚಿಟ್ಟ PSL ಆಟಗಾರ | Rishad Hossain

ವಿಜಯವಾಣಿ - 2025-05-11T073813.956
Published on

Rishad Hossain: ಕದನ ವಿರಾಮಕ್ಕೂ ಮೊದಲು ಭಾರತ ಮತ್ತು ಪಾಕಿಸ್ತಾನ ನಡುವೆ ಉದ್ವಿಗ್ನತೆ ಹೆಚ್ಚಿದ ಹಿನ್ನೆಲೆ ಪಾಕ್​ನಲ್ಲಿ ನಡೆಯುತ್ತಿದ್ದ ಪಿಎಸ್​ಎಲ್​ ಕ್ರಿಕೆಟ್​ ಲೀಗ್​ನ ಅಲ್ಲಿನ ಸರ್ಕಾರ ರದ್ದುಗೊಳಿಸಿದೆ. ಒಂದೆಡೆ ಭಾರತ ಐಪಿಎಲ್​ ಲೀಗ್​ನ ಒಂದು ವಾರಕ್ಕೆ ಮುಂದೂಡಿಕೆ ಮಾಡುತ್ತಿದ್ದಂತೆ ಇದೀಗ ಪಿಎಸ್​ಎಲ್​ ರದ್ದಾಗಿದೆ. ಎರಡೂ ದೇಶಗಳ ನಡುವೆ ನಡೆಯುತ್ತಿದ್ದ ದಾಳಿಯಲ್ಲಿ ತಾವು ಅನುಭವಿಸಿದ ಪರಿಸ್ಥಿತಿಯನ್ನು ಪಿಎಸ್​ಎಲ್​ ಆಟಗಾರ ಮನಬಿಚ್ಚಿ ಹಂಚಿಕೊಂಡಿದ್ದಾರೆ.

2025ರ ಪಿಎಸ್​ಎಲ್​ನಲ್ಲಿ ಲಾಹೋರ್ ಖಲಂದರ್ಸ್‌ ತಂಡದ ಪರ ಆಡುತ್ತಿದ್ದ ಬಾಂಗ್ಲಾದೇಶಿ ಲೆಗ್​ ಸ್ಪಿನ್ನರ್ ರಿಷದ್ ಹೊಸೈನ್ ಮಾತನಾಡಿ, "ಪಾಕ್​ ಮತ್ತು ಭಾರತ ನಡುವಿನ ಉದ್ವಿಗ್ನತೆಯಿಂದ ನಾವು ಭಯಾನಕ ಅನುಭವವನ್ನು ಎದುರಿಸಿದೆವು. ವಿದೇಶಿ ಆಟಗಾರರು ಪಾಕಿಸ್ತಾನದಿಂದ ಹೊರಹೋಗಲು ಪ್ರಯತ್ನಿಸಿದಾಗ ಭಯಭೀತರಾಗಿದ್ದರು. ಸ್ಯಾಮ್ ಬಿಲ್ಲಿಂಗ್ಸ್, ಡ್ಯಾರಿಲ್ ಮಿಚೆಲ್, ಕುಶಾಲ್ ಪೆರೆರಾ, ಡೇವಿಡ್ ವೈಸ್, ಟಾಮ್ ಕರನ್ ಮುಂತಾದ ವಿದೇಶಿ ಆಟಗಾರರು ಈ ಬೆಳವಣಿಗೆಯಿಂದ ತುಂಬಾ ಭಯಭೀತರಾಗಿದ್ದರು" ಎಂದರು.

"ನಾವು ದುಬೈಗೆ ಬಂದಿಳಿದ ತಕ್ಷಣ ಡ್ಯಾರಿಯಲ್​ ಮಿಚೆಲ್ ಅವರು, ನಾನು ಇನ್ಯಾವತ್ತು ಪಾಕಿಸ್ತಾನಕ್ಕೆ ಹೋಗುವುದಿಲ್ಲ ಎಂದರು. ಒಟ್ಟಾರೆಯಾಗಿ ವಿದೇಶಿ ಆಟಗಾರರೆಲ್ಲರೂ ಗಾಬರಿಗೊಂಡಿದ್ದರು. ಇಂಗ್ಲೆಂಡ್ ಕ್ರಿಕೆಟರ್ ಟಾಮ್ ಕರನ್ ಪರಿಸ್ಥಿತಿ ನೆನೆದು ಕಣ್ಣೀರಿಡುತ್ತಿದ್ದರು. ಇಂತಹ ಸವಾಲಿನ ಸಮಯದಲ್ಲಿ ಅವರನ್ನು ಸಮಾಧಾನಪಡಿಸಲು ಕೆಲವು ಜನರ ಅಗತ್ಯವಿತ್ತು. ಕರನ್​ ಏರ್​ಪೋರ್ಟ್​ಗೆ ತೆರಳಿದಾಗ ಅದು ಬಂದ್​ ಆಗಿತ್ತು. ಈ ವಿಷಯ ತಿಳಿಯುತ್ತಿದ್ದಂತೆ ಮುಂದೇನು ಎಂದು ಕುಳಿತಲ್ಲೇ ಅಳಲು ಪ್ರಾರಂಭಿಸಿದರು. ಆಗ ಕರನ್​ರನ್ನು ನಾವೆಲ್ಲ ಸಮಾಧಾನ ಮಾಡಿದೆವು" ಎಂದು ರಿಷದ್ ಹೇಳಿಕೊಂಡಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net