

ಚೆನ್ನೈ: ಪ್ರೊ ಕಬಡ್ಡಿ ಲೀಗ್ ಇತಿಹಾಸದ ದುಬಾರಿ ಆಟಗಾರ ಪವಾನ್ ಶೆರಾವತ್ ನೇತೃತ್ವದ ತೆಲುಗು ಟೈಟಾನ್ಸ್ ತಂಡ ಸತತ 5 ಸೋಲಿನ ಬಳಿಕ ಕೊನೆಗೂ ಗೆಲುವಿನ ನಗೆ ಬೀರಿದೆ.
ತೆಲುಗು ಟೈಟಾನ್ಸ್ ತಂಡ ಚೆನ್ನೈ ಚರಣದ ಮೊದಲ ದಿನದ 2ನೇ ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್ ವಿರುದ್ಧ 37-36ರಿಂದ ರೋಚಕ ಗೆಲುವು ಸಾಧಿಸಿತು.
ಮೊದಲಾರ್ಧದಲ್ಲಿ ಟೈಟಾನ್ಸ್ 21-20ರಿಂದ ಮುಂದಿತ್ತು. ಪವನ್ 7 ಯಶಸ್ವಿ ರೈಡಿಂಗ್ನೊಂದಿಗೆ 10 ಅಂಕ ಕಲೆಹಾಕಿ ಟೈಟಾನ್ಸ್ ಗೆಲುವಿಗೆ ನೆರವಾದರು.