

ಬೆಂಗಳೂರು: ಪ್ರೊ ಕಬಡ್ಡಿ ಲೀಗ್ 10ನೇ ಆವೃತ್ತಿಯ ವೇಳಾಪಟ್ಟಿ ಪ್ರಕಟಗೊಂಡಿದ್ದು, ಡಿಸೆಂಬರ್ 2ರಂದು ಅಹಮದಾಬಾದ್ನ ಅರೆನಾ ಬೈ ಟ್ರಾನ್ಸ್ಸ್ಟೇಡಿಯಾದಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ಗುಜರಾತ್ ಜೈಂಟ್ಸ್ ಮತ್ತು ತೆಲುಗು ಟೈಟಾನ್ಸ್ ತಂಡಗಳು ಮುಖಾಮುಖಿ ಆಗಲಿವೆ. ಬೆಂಗಳೂರು ಬುಲ್ಸ್ ತಂಡ ಡಿ.3ರಂದು ಗುಜರಾತ್ ಜೈಂಟ್ಸ್ ಎದುರು ಅಭಿಯಾನ ಆರಂಭಿಸಲಿದೆ.
ಈ ಬಾರಿ ಟೂರ್ನಿ ಹಿಂದಿನಂತೆ 12 ನಗರಗಳಲ್ಲಿ ಕ್ಯಾರವಾನ್ ಸ್ವರೂಪದಲ್ಲಿ ನಡೆಯಲಿದ್ದು, ಅಹಮದಾಬಾದ್ನಲ್ಲಿ ಮೊದಲ ಚರಣದ ಪಂದ್ಯಗಳು ನಡೆಯಲಿವೆ. 2024ರ ಫೆಬ್ರವರಿ 21ರವರೆಗೆ ಲೀಗ್ ಹಂತದ ಪಂದ್ಯಗಳು ನಡೆಯಲಿದ್ದು, ಪ್ಲೇಆಫ್ ವೇಳಾಪಟ್ಟಿ ತಡವಾಗಿ ಪ್ರಕಟಗೊಳ್ಳಲಿದೆ.
ಡಿಸೆಂಬರ್ 7ರವರೆಗೆ ಅಹಮದಾಬಾದ್ ಚರಣ ನಡೆಯಲಿದೆ. ಬಳಿಕ ಬೆಂಗಳೂರು (ಡಿ.8-13), ಪುಣೆ (ಡಿ.15-20), ಚೆನ್ನೈ (ಡಿ.22-27), ನೋಯ್ಡಾ (ಡಿ.29-ಜ.3), ಮುಂಬೈ (ಜ.5-10), ಜೈಪುರ (ಜ.12-17), ಹೈದರಾಬಾದ್ (ಜ.19-24), ಪಟನಾ (ಜ.26-31), ದೆಹಲಿ (ಫೆ.2-7), ಕೋಲ್ಕತ (ಫೆ.9-14), ಪಂಚಕುಲ (ಫೆ.16-21) ಚರಣದ ಪಂದ್ಯಗಳು ನಡೆಯಲಿವೆ. ಸ್ಟಾರ್ ಸ್ಪೋರ್ಟ್ಸ್, ಡಿಸ್ನಿ+ ಹಾಟ್ಸ್ಟಾರ್ನಲ್ಲಿ ಎಲ್ಲ ಪಂದ್ಯಗಳು ನೇರಪ್ರಸಾರ ಕಾಣಲಿವೆ. ಪ್ರತಿ ದಿನದ ಮೊದಲ ಪಂದ್ಯ ರಾತ್ರಿ 8 ಮತ್ತು 2ನೇ ಪಂದ್ಯ ರಾತ್ರಿ 9ರಿಂದ ನಡೆಯಲಿದೆ.
ಡಿ.8-13 ಬೆಂಗಳೂರು ಚರಣ
ಅಹಮದಾಬಾದ್ನಲ್ಲಿ ಟೂರ್ನಿಗೆ ಚಾಲನೆ ದೊರೆತ ಬೆನ್ನಲ್ಲೇ ಬೆಂಗಳೂರಿನ ಶ್ರೀ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಡಿಸೆಂಬರ್ 8ರಿಂದ 13ರವರೆಗೆ 2ನೇ ಚರಣದ ಪಂದ್ಯಗಳು ನಡೆಯಲಿವೆ. ಬೆಂಗಳೂರು ಬುಲ್ಸ್&ದೆಹಲಿ ನಡುವೆ ಬೆಂಗಳೂರು ಚರಣದ ಮೊದಲ ಪಂದ್ಯ ನಡೆಯಲಿದೆ. ಈ ಪೈಕಿ ಡಿಸೆಂಬರ್ 12ರಂದು ಮಾತ್ರ ಒಂದೇ ಪಂದ್ಯ ನಡೆಯಲಿದ್ದರೆ, ಉಳಿದ ದಿನಗಳಲ್ಲಿ ತಲಾ 2 ಪಂದ್ಯಗಳು ನಡೆಯಲಿವೆ.
ಬೆಂಗಳೂರು ಬುಲ್ಸ್ ಪಂದ್ಯಗಳು
ದಿನಾಂಕ:ಎದುರಾಳಿ (ಸ್ಥಳ): ಆರಂಭ
ಡಿ.3: ಗುಜರಾತ್ ಜೈಂಟ್ಸ್ (ಅಹಮದಾಬಾದ್): ರಾತ್ರಿ 9
ಡಿ.4: ಬೆಂಗಾಲ್ ವಾರಿಯರ್ಸ್ (ಅಹಮದಾಬಾದ್): ರಾತ್ರಿ 9
ಡಿ.8: ದಬಾಂಗ್ ದೆಹಲಿ (ಬೆಂಗಳೂರು): ರಾತ್ರಿ 8
ಡಿ. 9: ಹರಿಯಾಣ ಸ್ಟೀಲರ್ಸ್ (ಬೆಂಗಳೂರು): ರಾತ್ರಿ 8
ಡಿ. 11: ಯುಪಿ ಯೋಧಾಸ್ (ಬೆಂಗಳೂರು): ರಾತ್ರಿ 9
ಡಿ.13: ಜೈಪುರ ಪಿಂಕ್ಪ್ಯಾಂಥರ್ಸ್ (ಬೆಂಗಳೂರು): ರಾತ್ರಿ 9
ಡಿ.20: ಪುಣೇರಿ ಪಲ್ಟಾನ್ (ಪುಣೆ): ರಾತ್ರಿ 9
ಡಿ.24: ತೆಲುಗು ಟೈಟಾನ್ಸ್ (ಚೆನ್ನೈ): ರಾತ್ರಿ 9
ಡಿ.29: ಯುಪಿ ಯೋಧಾಸ್ (ನೋಯ್ಡಾ): ರಾತ್ರಿ 9
ಡಿ. 31: ತಮಿಳ್ ತಲೈವಾಸ್ (ನೋಯ್ಡಾ): ರಾತ್ರಿ 9
ಜ.5: ಯು ಮುಂಬಾ (ಮುಂಬೈ): ರಾತ್ರಿ 9
ಜ. 8: ಪಟನಾ ಪೈರೇಟ್ಸ್ (ಮುಂಬೈ): ರಾತ್ರಿ 8
ಜ.15: ಬೆಂಗಾಲ್ ವಾರಿಯರ್ಸ್ (ಜೈಪುರ): ರಾತ್ರಿ 8
ಜ. 19: ತೆಲುಗು ಟೈಟಾನ್ಸ್ (ಹೈದರಾಬಾದ್): ರಾತ್ರಿ 9
ಜ. 21: ತಮಿಳ್ ತಲೈವಾಸ್ (ಹೈದರಾಬಾದ್): ರಾತ್ರಿ 9
ಜ. 28: ಜೈಪುರ ಪಿಂಕ್ಪ್ಯಾಂಥರ್ಸ್ (ಪಟನಾ): ರಾತ್ರಿ 9
ಜ. 31: ಪಟನಾ ಪೈರೇಟ್ಸ್ (ಪಟನಾ): ರಾತ್ರಿ 9
ಫೆ.4: ಯು ಮುಂಬಾ (ದೆಹಲಿ): ರಾತ್ರಿ 9
ಫೆ. 7: ಪುಣೇರಿ ಪಲ್ಟಾನ್ (ದೆಹಲಿ): ರಾತ್ರಿ 8
ಫೆ. 11: ಗುಜರಾತ್ ಜೈಂಟ್ಸ್ (ಕೋಲ್ಕತ): ರಾತ್ರಿ 9
ಫೆ. 18: ದಬಾಂಗ್ ದೆಹಲಿ (ಪಂಚಕುಲ): ರಾತ್ರಿ 9
ಫೆ. 21: ಹರಿಯಾಣ ಸ್ಟೀಲರ್ಸ್ (ಪಂಚಕುಲ): ರಾತ್ರಿ 9