

ಬೆಂಗಳೂರು: ಪ್ರೊ ಕಬಡ್ಡಿ ಲೀಗ್ 11ನೇ ಆವೃತ್ತಿಯ ವೇಳಾಪಟ್ಟಿ ಸೋಮವಾರ ಪ್ರಕಟಗೊಂಡಿದೆ. ಅಕ್ಟೋಬರ್ 18ರಂದು ಹೈದರಾಬಾದ್ನಲ್ಲಿ ನಡೆಯಲಿರುವ ಬೆಂಗಳೂರು ಬುಲ್ಸ್ ಮತ್ತು ತೆಲುಗು ಟೈಟಾನ್ಸ್ ತಂಡಗಳ ನಡುವಿನ ಉದ್ಘಾಟನಾ ಪಂದ್ಯದೊಂದಿಗೆ ಟೂರ್ನಿಗೆ ಚಾಲನೆ ದೊರೆಯಲಿದೆ. ಇದರೊಂದಿಗೆ ಸ್ಟಾರ್ ಆಟಗಾರರಾದ ಪ್ರದಿಪ್ ನರ್ವಾಲ್ (ಬುಲ್ಸ್) ಮತ್ತು ಪವನ್ ಸೆಹ್ರಾವತ್ (ಟೈಟಾನ್ಸ್) ಮೊದಲ ಪಂದ್ಯದಲ್ಲೇ ಮುಖಾಮುಖಿ ಆಗಲಿದ್ದಾರೆ. ಮೊದಲ ದಿನದ 2ನೇ ಪಂದ್ಯದಲ್ಲಿ ದಬಾಂಗ್ ದೆಹಲಿ ಮತ್ತು ಯು ಮುಂಬಾ ತಂಡಗಳು ಸೆಣಸಲಿವೆ.
ಈ ಬಾರಿ ಲೀಗ್ ಹಂತದ ಪಂದ್ಯಗಳು 3 ನಗರಗಳಲ್ಲಿ ಮಾತ್ರ ನಡೆಯಲಿವೆ. ಹೈದರಾಬಾದ್ನ ಗಚ್ಚಿಬೌಲಿ ಒಳಾಂಗಣ ಸ್ಟೇಡಿಯಂನಲ್ಲಿ ನವೆಂಬರ್ 9ರವರೆಗೆ ಟೂರ್ನಿಯ ಮೊದಲ ಚರಣದ ಪಂದ್ಯಗಳು ನಡೆಯಲಿವೆ. ನಂತರ ನವೆಂಬರ್ 10ರಿಂದ ಡಿಸೆಂಬರ್ 1ರವರೆಗೆ ನೋಯ್ಡಾದಲ್ಲಿ 2ನೇ ಚರಣದ ಪಂದ್ಯಗಳು ನಡೆಯಲಿವೆ. ಡಿಸೆಂಬರ್ 3ರಿಂದ 24ರವರೆಗೆ ಪುಣೆಯ ಬಾಲೆವಾಡಿ ಬ್ಯಾಡ್ಮಿಂಟನ್ ಸ್ಟೇಡಿಯಂನಲ್ಲಿ 3ನೇ ಚರಣದ ಪಂದ್ಯಗಳು ನಡೆಯಲಿವೆ. ಫೈನಲ್ ಸಹಿತ ಪ್ಲೇಆಫ್ ಹಂತದ ಪಂದ್ಯಗಳ ಸ್ಥಳ ಮತ್ತು ದಿನಾಂಕವನ್ನು ತಡವಾಗಿ ಪ್ರಕಟಿಸಲಾಗುವುದು ಎಂದು ಟೂರ್ನಿಯ ಸಂಟಕ ಮಶಾಲ್ ಸ್ಪೋರ್ಟ್ಸ್ ಸಂಸ್ಥೆ ತಿಳಿಸಿದೆ.
ಕಳೆದ ತಿಂಗಳು ಮುಂಬೈನಲ್ಲಿ ನಡೆದ ಟೂರ್ನಿಯ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ 8 ಆಟಗಾರರು ಕೋಟ್ಯಧಿಪತಿಗಳಾಗಿ ಹೊರಹೊಮ್ಮಿದ್ದರು. ಈ ಪೈಕಿ ರೈಡರ್ ಸಚಿನ್ ಸರ್ವಾಧಿಕ 2.15 ಕೋಟಿ ರೂ.ಗೆ ತಮಿಳ್ ತಲೈವಾಸ್ ಪಾಲಾಗಿದ್ದರು. ಲೀಗ್ ಹಂತದಲ್ಲಿ ಪ್ರತಿದಿನ 2 ಪಂದ್ಯಗಳು ನಡೆಯಲಿದ್ದು, ಮೊದಲ ಪಂದ್ಯ ರಾತ್ರಿ 8 ಮತ್ತು 2ನೇ ಪಂದ್ಯ ರಾತ್ರಿ 9ಕ್ಕೆ ಶುರುವಾಗಲಿದೆ. 12 ತಂಡಗಳು ಲೀಗ್ ಹಂತದಲ್ಲಿ ಪರಸ್ಪರ 2 ಬಾರಿ ಮುಖಾಮುಖಿ ಆಗಲಿದ್ದು, ಎಲ್ಲ ತಂಡಗಳು ತಲಾ 22 ಲೀಗ್ ಪಂದ್ಯಗಳನ್ನು ಆಡಲಿವೆ. ಟೂರ್ನಿಯ ಪಂದ್ಯಗಳು ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್ ಮತ್ತು ಡಿಸ್ನಿ+ ಹಾಟ್ಸ್ಟಾರ್ನಲ್ಲಿ (ಒಟಿಟಿ) ನೇರಪ್ರಸಾರ ಕಾಣಲಿವೆ.
ಬೆಂಗಳೂರು ಬುಲ್ಸ್ ವೇಳಾಪಟ್ಟಿ
ದಿನಾಂಕ ಎದುರಾಳಿ ಸಮಯ
ಅ.18 ತೆಲುಗು ಟೈಟಾನ್ಸ್ ರಾತ್ರಿ 8
ಅ.20 ಗುಜರಾತ್ ಜೈಂಟ್ಸ್ ರಾತ್ರಿ 9
ಅ. 22 ಯುಪಿ ಯೋಧಾಸ್ ರಾತ್ರಿ 9
ಅ. 25 ಪುಣೇರಿ ಪಲ್ಟಾನ್ ರಾತ್ರಿ 9
ಅ. 29 ದಬಾಂಗ್ ದೆಹಲಿ ರಾತ್ರಿ 9
ನ. 2 ತೆಲುಗು ಟೈಟಾನ್ಸ್ ರಾತ್ರಿ 8
ನ. 4 ತಮಿಳ್ ತಲೈವಾಸ್ ರಾತ್ರಿ 8
ನ. 9 ಬೆಂಗಾಲ್ ವಾರಿಯರ್ಸ್ ರಾತ್ರಿ 9
ನ. 12 ಜೈಪುರ ಪಿಂಕ್ಪ್ಯಾಂಥರ್ಸ್ ರಾತ್ರಿ 8
ನ. 16 ದಬಾಂಗ್ ದೆಹಲಿ ರಾತ್ರಿ 9
ನ. 18 ಯು ಮುಂಬಾ ರಾತ್ರಿ 8
ನ. 19 ಪಟನಾ ಪೈರೇಟ್ಸ್ ರಾತ್ರಿ 9
ನ. 21 ಹರಿಯಾಣ ಸ್ಟೀಲರ್ಸ್ ರಾತ್ರಿ 8
ನ. 25 ಯು ಮುಂಬಾ ರಾತ್ರಿ 8
ನ. 30 ಪಟನಾ ಪೈರೇಟ್ಸ್ ರಾತ್ರಿ 8
ಡಿ. 3 ಗುಜರಾತ್ ಜೈಂಟ್ಸ್ ರಾತ್ರಿ 8
ಡಿ. 10 ಬೆಂಗಾಲ್ ವಾರಿಯರ್ಸ್ ರಾತ್ರಿ 9
ಡಿ. 11 ಹರಿಯಾಣ ಸ್ಟೀಲರ್ಸ್ ರಾತ್ರಿ 8
ಡಿ. 13 ಪುಣೇರಿ ಪಲ್ಟಾನ್ ರಾತ್ರಿ 9
ಡಿ. 17 ಜೈಪುರ ಪಿಂಕ್ಪ್ಯಾಂಥರ್ಸ್ ರಾತ್ರಿ 9
ಡಿ. 22 ತಮಿಳ್ ತಲೈವಾಸ್ ರಾತ್ರಿ 8
ಡಿ. 24 ಯುಪಿ ಯೋಧಾಸ್ ರಾತ್ರಿ 8