ದಿಗ್ಗಜ ಮಿಲ್ಖಾ ಸಿಂಗ್​ ಆರೋಗ್ಯ ವಿಚಾರಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ

milka singh and modi for web
Published on

ಚಂಡೀಗಢ: ಕೋವಿಡ್​ನಿಂದ ಬಳಲುತ್ತಿರುವ ಅಥ್ಲೆಟಿಕ್​ ದಿಗ್ಗಜ ಮಿಲ್ಖಾ ಸಿಂಗ್​ ಅವರ ಆರೋಗ್ಯ ಬಗ್ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿಚಾರಿಸಿದ್ದಾರೆ. ಖುದ್ದು ಮೋದಿ ಅವರೇ ಮಿಲ್ಖಾ ಸಿಂಗ್​ಗೆ ಫೋನ್​ ಮಾಡಿ, ಆರೋಗ್ಯದ ಬಗ್ಗೆ ಮಾಹಿತಿ ಪಡೆದಿದ್ದಾರೆ. ಎರಡು ವಾರಗಳ ಹಿಂದಷ್ಟೇ ಮಿಲ್ಖಾ ಸಿಂಗ್​ಗೆ ಕೋವಿಡ್​ ಕಾಣಿಸಿಕೊಂಡಿತ್ತು. ಬಳಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ವಾಪಸಾಗಿದ್ದರು. ಗುರುವಾರ ಮತ್ತೆ ಪೋಸ್ಟ್​ ಗ್ರ್ಯಾಜುವೆಟ್ ಇನ್​ಸ್ಟಿಟ್ಯೂಟ್​ ಆಫ್​ ಮೆಡಿಕಲ್​ ಎಜುಕೇಷನ್​ ಅಂಡ್​ ರಿಸರ್ಚ್​​ (ಪಿಜಿಐಎಂಇಆರ್​) ಕೇಂದ್ರದ ಐಸಿಯೂಗೆ ಸೇರಿಸಲಾಗಿದೆ.

ಮಿಲ್ಖಾ ಸಿಂಗ್​ ಅವರು ಅದಷ್ಟು ಬೇಗ ಸುಧಾರಿಸಿಕೊಳ್ಳಲಿ, ಟೋಕಿಯೊ ಒಲಿಂಪಿಕ್ಸ್​ನಲ್ಲಿ ಪಾಲ್ಗೊಳ್ಳುತ್ತಿರುವ ಕ್ರೀಡಾಪಟುಗಳಿಗೆ ಸ್ಫೂರ್ತಿಯಾಗಲಿ ಎಂದು ಮೋದಿ ಹಾರೈಸಿದ್ದಾರೆ.

ಮೇ 24 ರಂದು ಮಿಲ್ಖಾ ಸಿಂಗ್​ ಅವರನ್ನು ಮುನ್ನೆಚ್ಚರಿಕೆ ಕ್ರಮವಾಗಿ ಮೊಹಾಲಿಯ ಫೋಟಿಸ್​ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮನೆಗೆಲಸದವರ ಮೂಲಕ ಮಿಲ್ಖಾ ಸಿಂಗ್​ ಅವರಿಗೆ ಕೋವಿಡ್​ ಹರಡಿತ್ತು. ಮಿಲ್ಖಾ ಸಿಂಗ್​ ಅವರ ಪತ್ನಿ ನಿರ್ಮಲ್​ ಕೌರ್​ ಅವರ ಆರೋಗ್ಯದಲ್ಲೂ ಏರುಪೇರು ಉಂಟಾಗಿದ್ದು, ಐಸಿಯುವಿನಲ್ಲಿ ಚಿಕಿತ್ಸೆ ಮುಂದುವರಿದಿದೆ.

ದಿಗ್ಗಜ ಮಿಲ್ಖಾ ಸಿಂಗ್​, ಏಷ್ಯಾಡ್​ ಚಾಂಪಿಯನ್​ ಆಗಿದ್ದರು, 1958ರ ಕಾಮನ್ವೆಲ್ತ್​ ಗೇಮ್ಸ್​ನಲ್ಲಿ ಸ್ವರ್ಣ ಗೆದ್ದಿದ್ದರೆ, 1960ರ ರೋಮ್​ ಒಲಿಂಪಿಕ್ಸ್​ನಲ್ಲಿ 400 ಮೀಟರ್​ ಓಟದಲ್ಲಿ 4ನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದರು. 1956 ಹಾಗೂ 1964ರ ಒಲಿಂಪಿಕ್ಸ್​ನಲ್ಲಿ ಭಾರತ ಪ್ರತಿನಿಧಿಸಿದ್ದಾರೆ. 1959ರಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕಾರ ಭಾಜನರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net