RCBvsLSG, IPL 2024: ಪೂರನ್​ ಸಿಕ್ಸರ್​ಗಳ ಆರ್ಭಟ! ಆರ್​ಸಿಬಿಗೆ 182 ರನ್​ ಗುರಿ

WhatsApp Image 2024-04-02 at 9.08.05 PM
Published on

ಬೆಂಗಳೂರು: ಇಂದು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 15ನೇ ಐಪಿಎಲ್​ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್​​​ ಮತ್ತು ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡಗಳು ಭಾರೀ ಪೈಪೋಟಿಗೆ ಇಳಿದಿವೆ. ಟಾಸ್​ ಗೆದ್ದ ಆರ್​ಸಿಬಿ ಮೊದಲು ಬೌಲಿಂಗ್ ಆಯ್ದುಕೊಂಡು, ಬ್ಯಾಟಿಂಗ್​ ಮಾಡಲು ಲಕ್ನೋಗೆ ಆಹ್ವಾನಿಸಿತು. ಇದೀಗ 20 ಓವರ್​ಗಳಲ್ಲಿ ಎಲ್​ಎಸ್​ಜಿ 14 ರನ್​ಗಳನ್ನು ಗಳಿಸುವಲ್ಲಿ ಶಕ್ತವಾಯಿತು.

ಮೊದಲು ಬ್ಯಾಟಿಂಗ್​ಗೆ ಬಂದ ಕ್ವಿಂಟನ್ ಡಿ ಕಾಕ್ ಮತ್ತು ಕ್ಯಾಪ್ಟನ್​ ಕೆ.ಎಲ್​. ರಾಹುಲ್​ ಉತ್ತಮ ಆರಂಭವನ್ನು ಕೊಟ್ಟರು. 56 ಎಸೆತಗಳಲ್ಲಿ 81 ರನ್​ ಸಿಡಿಸಿದ ಕಾಕ್​ ರಿಸಿಗೆ ವಿಕೆಟ್ ಒಪ್ಪಿಸಿದರು. ತದನಂತರದಲ್ಲಿ ರಾಹುಲ್ ಕೂಡ ಪೆವಿಲಿಯನ್​ ಹಾದಿ ಹಿಡಿದಿದ್ದು, ಕೇವಲ 20 ರನ್​ ಕೊಡುಗೆಯಾಗಿ ನೀಡಿದರು. ಉಳಿದಂತೆ ದೇವದತ್ತ ಪಡಿಕ್ಕಲ್ 6, ಮಾರ್ಕಸ್​​ ಸ್ಟೋಯಿನಿಸ್​ 24, ಆಯುಷ್ ಬದೋನಿ ಶೂನ್ಯಕ್ಕೆ ಔಟ್ ಆದರು.

ಎಂದಿನಂತೆ ಸ್ಪೋಟಕ ಬ್ಯಾಟಿಂಗ್ ಮಾಡುವ ಮೂಲಕ ತಂಡಕ್ಕೆ ಆಸರೆಯಾಗಿದ್ದು, ನಿಕೋಲಸ್​ ಪೂರನ್​. 18ನೇ ಓವರ್​ನಲ್ಲಿ ಟೋಫ್ಲಿ ಬೌಲಿಂಗ್​ಗೆ ಮೂರು ಬ್ಯಾಕ್ ಟು ಬ್ಯಾಕ್ ಸಿಕ್ಸರ್​ ಸಿಡಿಸಿ ಸ್ಕೋರ್​ನ ಲೆಕ್ಕಾಚಾರಗಳನ್ನು ಬದಲಾಯಿಸಿದರು. 21 ಎಸೆತಗಳಲ್ಲಿ 40 ರನ್​ ಗಳಿಸುವ ಮೂಲಕ ತಂಡದ ಸ್ಕೋರ್​ ಅನ್ನು 181ಕ್ಕೆ ತಲುಪಿಸಿದರು. ಇದೀಗ ಆರ್​ಸಿಬಿ ತಂಡಕ್ಕೆ 182 ರನ್​ ಗುರಿ ತಲುಪುವುದು ಎಷ್ಟು ದೊಡ್ಡ ಸವಾಲಾಗಲಿದೆ ಎಂಬುದನ್ನು ಕಾದು ನೋಡಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net