Asian Games 2023: 107 ಪದಕಗಳನ್ನು ಗೆದ್ದು, ಐತಿಹಾಸಿಕ ಸಾಧನೆಗೈದ ಭಾರತೀಯ ಕ್ರೀಡಾಪಟುಗಳಿಗೆ ಪ್ರಧಾನಿ ಶ್ಲಾಘನೆ

Untitled design - 2023-10-08T134212.205
Published on

ನವದೆಹಲಿ: ಈ ಬಾರಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ ಭಾರತೀಯ ಕ್ರೀಡಾಪಟುಗಳು ಐತಿಹಾಸಿಕ ಸಾಧನೆ ಮಾಡಿದ್ದು, ಇಲ್ಲಿಯವರೆಗೂ ಒಟ್ಟು 107 ಪದಕಗಳನ್ನು ಗೆದ್ದು ಭಾರತದ ಕೀರ್ತಿಯನ್ನು ಮತ್ತಷ್ಟು ಹೆಚ್ಚಿಸಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಏಷ್ಯನ್ ಗೇಮ್ಸ್‌ನಲ್ಲಿ 107 ಪದಕಗಳನ್ನು ಗೆದ್ದು ಇತಿಹಾಸ ಬರೆದ ಕ್ರೀಡಾಪಟುಗಳ ಅಚಲ ದೃಢತೆ ಮತ್ತು ಕಠಿಣ ಪರಿಶ್ರಮವು ರಾಷ್ಟ್ರವನ್ನು ಹೆಮ್ಮೆಪಡುವಂತೆ ಮಾಡಿದೆ ಎಂದು ಪ್ರಧಾನಿ ಹೇಳಿದರು. ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಒಟ್ಟು 28 ಚಿನ್ನ, 38 ಬೆಳ್ಳಿ ಮತ್ತು 41 ಕಂಚಿನ ಪದಕಗಳನ್ನು ತನ್ನ ಮುಡಿಗೇರಿಸಿಕೊಂಡಿದೆ.

ಈ ಬಗ್ಗೆ ಟ್ವಿಟರ್​ನಲ್ಲಿ ಬರೆದುಕೊಂಡ ಪ್ರಧಾನಿ, "ಏಷ್ಯನ್ ಗೇಮ್ಸ್‌ನಲ್ಲಿ ಭಾರತಕ್ಕೆ ಎಂತಹ ಐತಿಹಾಸಿಕ ಸಾಧನೆ! ನಮ್ಮ ಅದ್ಭುತ ಕ್ರೀಡಾಪಟುಗಳು ಕಳೆದ 60 ವರ್ಷಗಳಲ್ಲಿ ಇದುವರೆಗೆ ಅತ್ಯಧಿಕ ಒಟ್ಟು 107 ಪದಕಗಳನ್ನು ಮನೆಗೆ ತಂದಿದ್ದಾರೆ ಎಂದು ಇಡೀ ರಾಷ್ಟ್ರ ಸಂತಸ ಪಡುತ್ತದೆ. ಅವರ ಗೆಲುವುಗಳು ನಮಗೆ ನೆನಪಿಡುವ ಕ್ಷಣಗಳನ್ನು ನೀಡಿವೆ, ನಮಗೆಲ್ಲರಿಗೂ ಸ್ಫೂರ್ತಿ ನೀಡಿವೆ ಮತ್ತು ಶ್ರೇಷ್ಠತೆಗೆ ನಮ್ಮ ಬದ್ಧತೆಯನ್ನು ಪುನರುಚ್ಚರಿಸಿದೆ" ಎಂದು ಪೋಸ್ಟ್​ ಮಾಡಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net