IPL ಶುರುವಾಗುವುದಕ್ಕೂ ಮುನ್ನ ಐತಿಹಾಸಿಕ ದಾಖಲೆ ಬರೆದ Virat Kohli

Virat Kohli
Published on

ಬೆಂಗಳೂರು: ಟೀಮ್​ ಇಂಡಿಯಾದ ಮಾಜಿ ನಾಯಕ, ರನ್​ ಮೆಷಿನ್​ ಎಂದೇ ಖ್ಯಾತಿ ಪಡೆದಿರುವ ವಿರಾಟ್​ ಕೊಹ್ಲಿ (Virat Kohli) ದಾಖಲೆಗಳ ಸರದಾರ ಎಂದರೆ ತಪ್ಪಾಗಲಾರದು. ರಾಷ್ಟ್ರೀಯ ತಂಡದ ಪರ ಹಾಗೂ ಐಪಿಎಲ್​ನಲ್ಲಿ ಈಗಾಗಲೇ ಹಲವು ಐತಿಹಾಸಿಕ ದಾಖಲೆ ಬರೆದಿರುವ ವಿರಾಟ್​ ಕೊಹ್ಲಿ (Virat Kohli) ಕ್ರೀಡಾ ವಲಯದಲ್ಲಿ ಕಿಂಗ್​ ಎಂದೇ ಕರೆಲ್ಪಡುತ್ತಾರೆ. ಇದೀಗ ವಿರಾಟ್​ ಕೊಹ್ಲಿ (Virat Kohli) ಮತ್ತೊಂದು ಐತಿಹಾಸಿಕ ದಾಖಲೆಯೊಂದನ್ನು ನಿರ್ಮಿಸಿದ್ದು, ಕ್ರೀಡಾ ವಲಯದಲ್ಲಿ ಸಖತ್​ ಸೌಂಡ್​ ಮಾಡುತ್ತಿದೆ.

18ನೇ ಆವೃತ್ತಿಯ ಐಪಿಎಲ್​ಗೆ (IPL) ಸಂಬಂಧಿಸಿದಂತೆ ಈಗಾಗಲೇ ರಿಟೇನ್​ ಪಟ್ಟಿ ಹೊರಬಿದ್ದಿದ್ದು, ಆರ್​ಸಿಬಿ (RCB) ತಂಡ ವಿರಾಟ್​ ಕೊಹ್ಲಿ, ರಜತ್​ ಪಾಟಿದಾರ್ ಹಾಗೂ ಯಶ್​ ದಯಾಳ್​ರನ್ನು ತಂಡದಲ್ಲಿ ಉಳಿಸಿಕೊಂಡಿದೆ. ವಿರಾಟ್​ ಕೊಹ್ಲಿಯನ್ನು (Virat Kohli) ಬರೋಬ್ಬರಿ 21 ಕೋಟಿ ರೂಪಾಯಿಗೆ ರಿಟೇನ್​ ಮಾಡುವ ಮೂಲಕ ಫ್ರಾಂಚೈಸಿ ಎಲ್ಲರ ಗಮನ ಸೆಳೆದಿದ್ದು, ಈ ಮೂಲಕ ಐಪಿಎಲ್​ನಲ್ಲಿ (IPL) ಎಲ್ಲರ ಗಮನ ಸೆಳೆದಿದೆ.

ಐಪಿಎಲ್ (IPL) ಮೆಗಾ ಹರಾಜಿಗೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಫ್ರಾಂಚೈಸಿಯು ವಿರಾಟ್ ಕೊಹ್ಲಿ ಅವರನ್ನು 21 ಕೋಟಿ ರೂಪಾಯಿಗೆ ರಿಟೇನ್​ ಮಾಡಿಕೊಂಡಿದೆ. ಇದರೊಂದಿಗೆ ಐಪಿಎಲ್​ (IPL) ಇತಿಹಾಸದಲ್ಲಿ ಅತ್ಯಧಿಕ ಮೊತ್ತ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ವಿರಾಟ್ ಕೊಹ್ಲಿ (Virat Kohli) ಪಾತ್ರರಾಗಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ ವಿರಾಟ್ ಕೊಹ್ಲಿ (Virat Kohli) ಅವರ ಹೆಸರಿನಲ್ಲಿತ್ತು.

Rohit Sharma and Virat Kohli

ಅಂದರೆ 2021ರಲ್ಲಿ ಫ್ರಾಂಚೈಸಿ ವಿರಾಟ್​ ಕೊಹ್ಲಿಯನ್ನು (Virat Kohli) 17 ಕೋಟಿ ರೂಪಾಯಿ ನೀಡಿ ರಿಟೇನ್ ಮಾಡಿಕೊಂಡಿತ್ತು. ಈ ಬಾರಿ 21 ಕೋಟಿ ರೂಪಾಯಿ ಪಡೆಯುವ ಮೂಲಕ ಐಪಿಎಲ್​ನಲ್ಲಿ (IPL) ಇಪ್ಪತ್ತು ಕೋಟಿಗೂ ಅಧಿಕ ಮೊತ್ತ ಪಡೆದ ಏಕೈಕ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ವಿರಾಟ್​ ಕೊಹ್ಲಿ (Virat Kohli) ಪಾತ್ರರಾಗಿದ್ದಾರೆ. ಇದಲ್ಲದೆ ಈ 21 ಕೋಟಿ ರೂಪಾಯಿ ಮೂಲಕ ಐಪಿಎಲ್​ನಲ್ಲಿ ವಿರಾಟ್​ ಕೊಹ್ಲಿಯ ಒಟ್ಟು ಗಳಿಕೆ 200 ಕೋಟಿ ರೂಪಾಯಿಗೆ ಏರಿಕೆಯಾಗಿದ್ದು, ಐಪಿಎಲ್ (IPL) ಇತಿಹಾಸದಲ್ಲಿ ಅತ್ಯಧಿಕ ಸಂಭಾವನೆ ಪಡೆದ ಎರಡನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ವಿರಾಟ್​ಗೂ ಮೊದಲು ರೋಹಿತ್​ ಶರ್ಮ ಈ ಸಾಧನೆ ಮಾಡಿದ್ದು, ಐಪಿಎಲ್​ನಲ್ಲಿ ಅವರ ಒಟ್ಟಾರೆ ಗಳಿಕೆ 210 ಕೋಟಿ ಸಂಭಾವನೆ ಪಡೆದಿದ್ದಾರೆ. ಇದೀಗ ವಿರಾಟ್ ಕೊಹ್ಲಿ 209.2 ಕೋಟಿ ರೂ.ನೊಂದಿಗೆ ಈ ಪಟ್ಟಿಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಐಪಿಎಲ್​ ಶುರುವಾದಾಗಿನಿಂದಲೂ ಆರ್​ಸಿಬಿ ಪರ ಆಡುತ್ತಿರುವ ವಿರಾಟ್​ ಅಧಿಕ ಮೊತ್ತ ಪಡೆದ ಏಕೈಕ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಡೆಕ್ಕನ್ ಚಾರ್ಜರ್ಸ್ ಹಾಗೂ ಮುಂಬೈ ಇಂಡಿಯನ್ಸ್ ಪರ ಕಣಕ್ಕಿಳಿದಿರುವ ರೋಹಿತ್ ಶರ್ಮಾ 18 ಸೀಸನ್​ಗಳಿಂದ ಒಟ್ಟು 210.9 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net