ಶತಕದಂಚಿನಲ್ಲಿ ಶುಭಮನ್​ ಗಿಲ್​ ಔಟ್​; ಕಿವೀಸ್​ ಪಡೆ ಎದುರು ಅತ್ಯಲ್ಪ ಮುನ್ನಡೆ ಸಾಧಿಸಿದ Team India

Gill Pant
Published on

ಮುಂಬೈ: ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ (Team India) ಹಾಗೂ ನ್ಯೂಜಿಲೆಂಡ್​ (NewZealand) ನಡುವಿನ ಟೆಸ್ಟ್​ ಸರಣಿಯ (Test Series) ಅಂತಿಮ ಪಂದ್ಯದಲ್ಲಿ ಆತಿಥೇಯರು 263 ರನ್​ಗಳಿ ಆಲೌಟ್​ ಆಗಿದ್ದು, 28 ರನ್​ಗಳ ಅತ್ಯಲ್ಪ ಮುನ್ನಡೆಯನ್ನು ಸಾಧಿಸಿದೆ.

4 ವಿಕೆಟ್​ ನಷ್ಟದೊಂದಿಗೆ ಎರಡನೇ ದಿನದಾಟ ಆರಂಭಿಸಿದ ಭಾರತ ತಂಡವು (Team India) ಶುಭಮನ್​ ಗಿಲ್​ (90 ರನ್, 146 ಎಸೆತ, 7 ಬೌಂಡರಿ, 1 ಸಿಕ್ಸರ್), ರಿಷಭ್​ ಪಂತ್​ (60 ರನ್​, 59 ಎಸೆತ, 8 ಬೌಂಡರಿ, 2 ಸಿಕ್ಸರ್​) ಅರ್ಧಶತಕಗಳ ಫಲವಾಗಿ 263 ರನ್​ಗಳಿಸಿ ಆಲೌಟ್​ ಆಯಿತು. ಈ ಮೂಲಕ ಎದುರಾಳಿಗಳ ವಿರುದ್ಧ 28 ರನ್​ಗಳ ಮುನ್ನಡೆಯನ್ನು ಭಾರತ ತಂಡ ಸಾಧಿಸಿದೆ.

ಟೀಮ್ ಇಂಡಿಯಾದ (Team India) ಆರಂಭಿಕ ಆಟಗಾರ ಶುಭ್​ಮನ್ ಗಿಲ್ ಶತಕದಂಚಿನಲ್ಲಿ ಎಡವಿದ್ದಾರೆ. ಈ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಗಿಲ್ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದರು. 146 ಎಸೆತಗಳಲ್ಲಿ 4 ಫೋರ್, 1 ಸಿಕ್ಸ್​ನೊಂದಿಗೆ 90 ರನ್ ಬಾರಿಸಿ ಶತಕದತ್ತ ದಾಪುಗಾಲಿಟ್ಟಿದ್ದ ಗಿಲ್, ಎಜಾಝ್ ಪಟೇಲ್ ಎಸೆತದಲ್ಲಿ ಸ್ಲಿಪ್​ನಲ್ಲಿದ್ದ ಡೆರಿಲ್​ ಮಿಚೆಲ್​ಗೆ ಚ್ ನೀಡಿದರು. ಈ ಮೂಲಕ ಕೇವಲ 10 ರನ್​ಗಳಿಂದ ಶತಕ ವಂಚಿತರಾದರು. ಇದೀಗ ನ್ಯೂಜಿಲೆಂಡ್​ ತಂಡವು ಎರಡನೇ ಇನ್ನಿಂಗ್ಸ್​ ಆರಂಭಿಸಿದ್ದು, 1 ವಿಕೆಟ್​ ನಷ್ಟಕ್ಕೆ 19 ರನ್​ ಗಳಿಸಿದೆ.

ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ಆಯ್ಕೆ ಮಾಡಕೊಂಡ ನ್ಯೂಜಿಲೆಂಡ್​ ತಂಡವು ಡೆರಿಲ್​ ಮಿಚೆಲ್​ (82 ರನ್​, 129 ಎಸೆತ, 3 ಬೌಂಡರಿ, 3 ಸಿಕ್ಸರ್​), ವಿಲ್​ ಯಂಗ್​ (71 ರನ್​, 138 ಎಸೆತ, 4 ಬೌಂಡರಿ, 2 ಸಿಕ್ಸರ್​) ಅರ್ಧಶತಕಗಳ ಫಲವಾಗಿ 65.4 ಓವರ್​ಗಳಲ್ಲಿ 235 ರನ್​ಗಳಿಗೆ ಆಲೌಟ್​ ಆಯಿತು. ಭಾರತದ ಪರ ರವೀಂದ್ರ ಜಡೇಜಾ (Ravindra Jadeja) (22-1-65-5), ವಾಷಿಂಗ್ಟನ್​ ಸುಂದರ್​ (18.4-2-81-4), ಆಕಾಶ್​ ದೀಪ್​ (5-0-22-1) ರನ್​ ನೀಡಿ ವಿಕೆಟ್​ ಪಡೆದಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net