ಪ್ರೊ ಕಬಡ್ಡಿ ಲೀಗ್​ ಪ್ಲೇಆಫ್​, ಫೈನಲ್​ಗೆ ದಿನಾಂಕ, ಸ್ಥಳ ನಿಗದಿ

web pro kabaddi
Published on

ನವದೆಹಲಿ: ಪ್ರೊ ಕಬಡ್ಡಿ ಲೀಗ್​ 12ನೇ ಆವೃತ್ತಿಯ ಪ್ಲೇಆಫ್​ ಮತ್ತು ಫೈನಲ್​ ಪಂದ್ಯಗಳು ನವದೆಹಲಿಯ ತ್ಯಾಗರಾಜ್​ ಸ್ಟೇಡಿಯಂನಲ್ಲಿ ನಿಗದಿಯಾಗಿವೆ. ಶನಿವಾರದಿಂದ ಲೀಗ್​ ಹಂತದ ಕೊನೇ ಚರಣದ ಪಂದ್ಯಗಳು ಕೂಡ ನವದೆಹಲಿಯಲ್ಲೇ ನಡೆಯಲಿವೆ. ಅಕ್ಟೋಬರ್​ 31ರಂದು ಫೈನಲ್​ ಪಂದ್ಯ ನಡೆಯಲಿದೆ.

ಅಕ್ಟೋಬರ್​ 23ಕ್ಕೆ ಲೀಗ್​ ಪಂದ್ಯಗಳು ಮುಕ್ತಾಯಗೊಳ್ಳಲಿದ್ದು, ಅಕ್ಟೋಬರ್​ 25ರಿಂದ ಪ್ಲೇಆಫ್​​ ಪಂದ್ಯಗಳು ನಡೆಯಲಿವೆ. ಅ.25ಕ್ಕೆ ಅಂಕಪಟ್ಟಿಯಲ್ಲಿ 5ರಿಂದ 8ನೇ ಸ್ಥಾನ ಪಡೆದ ತಂಡಗಳು ಪ್ಲೇ-ಇನ್​ ಪಂದ್ಯಗಳಲ್ಲಿ ಆಡಲಿವೆ. ಅ.26ಕ್ಕೆ ಮೊದಲ ಎಲಿಮಿನೇಟರ್​ ಮತ್ತು ಮಿನಿ-ಕ್ವಾಲಿಫೈಯರ್​ ಪಂದ್ಯಗಳು ನಡೆಯಲಿವೆ. ಅ.27ಕ್ಕೆ ಎರಡನೇ ಎಲಿಮಿನೇಟರ್​ ಮತ್ತು ಮೊದಲ ಕ್ವಾಲಿಫೈಯರ್​ ಪಂದ್ಯಗಳು ನಡೆಯಲಿವೆ. ಅ.28ರಂದು ಮೂರನೇ ಎಲಿಮಿನೇಟರ್​ ಮತ್ತು ಅ.29ಕ್ಕೆ ಎರಡನೇ ಕ್ವಾಲಿಫೈಯರ್​ ಪಂದ್ಯ ನಡೆಯಲಿವೆ.

ಈ ಬಾರಿ ಹೊಸ ಸ್ವರೂಪದಲ್ಲಿ ಟೂರ್ನಿ ನಡೆಯುತ್ತಿದ್ದು, ಎಲ್ಲ 12 ತಂಡಗಳು ತಲಾ 18 ಲೀಗ್​ ಪಂದ್ಯಗಳನ್ನು ಆಡಿದ ಬಳಿಕ ಅಂಕಪಟ್ಟಿಯ ಅಗ್ರ 8 ತಂಡಗಳು ಪ್ರಶಸ್ತಿ ರೇಸ್​ನಲ್ಲಿ ಉಳಿದುಕೊಳ್ಳಲಿವೆ. ಅಂಕಪಟ್ಟಿಯ ಅಗ್ರ 2 ತಂಡಗಳು ಮೊದಲ ಕ್ವಾಲಿಫೈಯರ್​ನಲ್ಲಿ ಸೆಣಸಲಿದ್ದು, ಗೆದ್ದ ತಂಡ ನೇರವಾಗಿ ಫೈನಲ್​ಗೇರಿದರೆ, ಸೋತ ತಂಡ ಸೆಮಿಫೈನಲ್​ ಮಾದರಿಯ 2ನೇ ಕ್ವಾಲಿಫೈಯರ್​ನಲ್ಲಿ ಆಡಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net