ಪ್ರೊ ಕಬಡ್ಡಿ ಲೀಗ್​ನಲ್ಲಿ ಬೆಂಗಳೂರು ಬುಲ್ಸ್​ಗೆ ಶರಣಾದ ತೆಲುಗು ಟೈಟಾನ್ಸ್​

bulls web
Published on

ಹೈದರಾಬಾದ್​: ಯುವ ರೈಡರ್​ ಅಕ್ಷಿತ್​ (9) ದ್ವೀತಿಯಾರ್ಧದಲ್ಲಿ ಬದಲಿ ಆಟಗಾರನಾಗಿ ಕಣಕ್ಕಿಳಿದು ತೋರಿದ ಅದ್ಭುತ ನಿರ್ವಹಣೆಯ ಬಲದಿಂದ ಬೆಂಗಳೂರು ಬುಲ್ಸ್​ ತಂಡ ಪ್ರೊ ಕಬಡ್ಡಿ ಲೀಗ್​ 10ನೇ ಆವೃತ್ತಿಯಲ್ಲಿ ತೆಲುಗು ಟೈಟಾನ್ಸ್​ ಎದುರು 42-26ರಿಂದ ಗೆಲುವು ದಾಖಲಿಸಿದೆ.

ಶುಕ್ರವಾರ ಆರಂಭಗೊಂಡ ಹೈದರಾಬಾದ್​ ಚರಣದ ಮೊದಲ ಪಂದ್ಯದಲ್ಲಿ ಬುಲ್ಸ್​ ಮೊದಲಾರ್ಧದಲ್ಲಿ 9-12ರಿಂದ ಹಿನ್ನಡೆಯಲ್ಲಿತ್ತು. ಬಳಿಕ ದ್ವೀತಿಯಾರ್ಧದಲ್ಲಿ ತೆಲುಗು ತಂಡವನ್ನು 3 ಬಾರಿ ಆಲೌಟ್​ ಬಲೆಗೆ ಬೀಳಿಸುವ ಮೂಲಕ ಭರ್ಜರಿ ತಿರುಗೇಟು ನೀಡಿತು. ಬುಲ್ಸ್​ಗೆ ಇದು ಆಡಿದ 13 ಪಂದ್ಯಗಳಲ್ಲಿ 5ನೇ ಗೆಲುವಾಗಿದೆ.

ದಿನದ 2ನೇ ಪಂದ್ಯದಲ್ಲಿ ಪಟನಾ ಪೈರೇಟ್ಸ್​ 34-31ರಿಂದ ಯುಪಿ ಯೋಧಾಸ್​ ಎದುರು ಗೆದ್ದಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net