ಸಿಎಸ್​ಕೆ ಪಾಲಾಗಲು ಹಿಂದಿನ ಕಾರಣ ಬಿಚ್ಚಿಟ ಪೀಯುಷ್​ ಚಾವ್ಲ

dhoni-piyush-chawla 11112
Published on

ಬೆಂಗಳೂರು: ಉತ್ತರ ಪ್ರದೇಶದ ಸ್ಪಿನ್ನರ್​ ಪೀಯುಷ್​ ಚಾವ್ಲ, ಇಂಡಿಯನ್​ ಪ್ರೀಮಿಯರ್​ ಲೀಗ್​ (ಐಪಿಎಲ್​) ಕೋಲ್ಕತ ನೈಟ್​ ರೈಡರ್ಸ್​ (ಕೆಕೆಆರ್​) ತಂಡದ ಭಾಗವಾಗಿದ್ದರು. ಪ್ರಸಕ್ತ ವರ್ಷ ಕೆಕೆಆರ್​ ತಂಡದಿಂದ ಅವರನ್ನು ಬಿಡುಗಡೆ ಮಾಡಲಾಗಿತ್ತು. ರವೀಂದ್ರ ಜಡೇಜಾ, ಹರ್ಭಜನ್​ ಸಿಂಗ್​, ಮಿಚೆಲ್​ ಸ್ಯಾಂಟ್ನರ್​ ಹಾಗೂ ಇಮ್ರಾನ್​ ತಾಹೀರ್​ರಂಥ ಅನುಭವಿ ಸ್ಪಿನ್ನರ್​ಗಳಿದ್ದರೂ ಪೀಯುಷ್​ ಚಾವ್ಲರನ್ನು ಸಿಎಸ್​ಕೆ 6.75 ಕೋಟಿ ರೂಪಾಯಿಗೆ ಕೊಂಡುಕೊಂಡಿತು. ಇದಕ್ಕೆ ಧೋನಿ ನಿರ್ಧಾರವೇ ಪ್ರಮುಖ ಕಾರಣ ಎಂದು ಚಾವ್ಲ ಹೇಳಿಕೊಂಡಿದ್ದಾರೆ.

ಲಾಕ್​ಡೌನ್​ಗೂ ಮುನ್ನ ಎಂಎಸ್​ ಧೋನಿ, ಅಂಬಟಿ ರಾಯುಡು, ಸುರೇಶ್​ ರೈನಾ, ಸೇರಿದಂತೆ ಕೆಲ ಮಂದಿ ಚೆನ್ನೈನಲ್ಲಿ ಅಭ್ಯಾಸ ನಡೆಸುತ್ತಿದ್ದೇವು. ಈ ವೇಳೆ ಧೋನಿ ಅವರನ್ನು ನನ್ನ ಕೊಂಡುಕೊಂಡ ಕುರಿತು ಕುತೂಹಲಕ್ಕೆ ಕೇಳಿದೆ. ನಿನ್ನನ್ನು ಕೊಂಡುಕೊಳ್ಳುವುದು ನನ್ನ ನಿರ್ಧಾರವಾಗಿತ್ತು ಎಂದರಂತೆ ಎಂದು ಪೀಯುಷ್​ ಹೇಳಿಕೊಂಡಿದ್ದಾರೆ. 2020ರ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಪೀಯುಷ್​ ಚಾವ್ಲ ಭಾರತದ ದುಬಾರಿ ಆಟಗಾರನಾಗಿ ಸೇಲಾದರು. ಧೋನಿ ಕೂಡ ಚಾವ್ಲ ಅವರ ಅಭಿಮಾನಿಯಂತೆ, 2011ರ ಏಕದಿನ ವಿಶ್ವಕಪ್​ ತಂಡದಲ್ಲೂ ಸ್ಥಾನಗಿಟ್ಟಿಸಿಕೊಂಡಿದ್ದರು. 2018ರ ಹರಾಜಿನಲ್ಲಿ ಚಾವ್ಲಾಗಾಗಿ 4.2 ಕೋಟಿ ರೂಪಾಯಿಗೆ ಸಿಎಸ್​ಕೆ, ಬಿಡ್​ ಕೂಗಿದರೂ ಕೆಕೆಆರ್​ ರೈಟ್​ ಟು ಮ್ಯಾಚ್​ ಕೋಟಾದಡಿ ಉಳಿಸಿಕೊಂಡಿತ್ತು.

ಪೀಯುಷ ಚಾವ್ಲ 2012ರಿಂದಲೂ ಅಂತಾರಾಷ್ಟ್ರೀಯ ಕ್ರಿಕೆಟ್​ ಪಂದ್ಯವನ್ನಾಡಿಲ್ಲ. ಇದುವರೆಗೂ 3 ಟೆಸ್ಟ್​ ಪಂದ್ಯಗಳಿಂದ 7 ವಿಕೆಟ್​, 25 ಏಕದಿನ ಪಂದ್ಯಗಳಿಂದ 32 ವಿಕೆಟ್​, 7 ಟಿ20 ಪಂದ್ಯಗಳಿಂದ 4 ವಿಕೆಟ್​ ಕಬಳಿಸಿದ್ದಾರೆ. 2007ರಲ್ಲಿ ಚೊಚ್ಚಲ ಟಿ20 ವಿಶ್ವಕಪ್​ ಜಯಿಸಿದ ಭಾರತ ತಂಡದ ಸದಸ್ಯರಾಗಿದ್ದರು. 2012ರ ಟಿ20 ವಿಶ್ವಕಪ್​ ತಂಡದಲ್ಲಿದ್ದರು. ದೇಶೀಯ ಕ್ರಿಕೆಟ್ ಟೂರ್ನಿಗಳನಲ್ಲಿ ಗುಜರಾತ್​ ತಂಡ ಪ್ರತಿನಿಧಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net