

ಮುಂಬೈ: ಆಲ್ರೌಂಡರ್ ಎಲ್ಲಿಸ್ ಪೆರ್ರಿ ಭಾರತ ವಿರುದ್ಧ 2ನೇ ಟಿ20ಯಲ್ಲಿ ಕಣಕ್ಕಿಳಿಯುವ ಮೂಲಕ 300 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ ವಿಶ್ವದ 4ನೇ ಹಾಗೂ ಆಸ್ಟ್ರೆಲಿಯಾದ ಮೊದಲ ಮಹಿಳಾ ಕ್ರಿಕೆಟರ್ ಎನಿಸಿದ್ದಾರೆ.
ಭಾರತದ ಮಿಥಾಲಿ ರಾಜ್ 333 ಪಂದ್ಯ ಆಡಿರುವುದು ಗರಿಷ್ಠವೆನಿಸಿದ್ದರೆ, ಇಂಗ್ಲೆಂಡ್ನ ಚಾಲೋರ್ಟ್ ಎಡ್ವರ್ಡ್ಸ್ (309) ಮತ್ತು ನ್ಯೂಜಿಲೆಂಡ್ನ ಸೂಜಿ ಬೇಟ್ಸ್ (309) ನಂತರದ ಇಬ್ಬರು ಸಾಧಕಿಯರಾಗಿದ್ದಾರೆ.
33 ವರ್ಷದ ಎಲ್ಲಿಸ್ ಪೆರ್ರಿ 12 ಟೆಸ್ಟ್, 141 ಏಕದಿನ ಮತ್ತು 147 ಟಿ20 ಪಂದ್ಯಗಳನ್ನು ಆಡುವ ಮೂಲಕ 300ರ ಮೈಲಿಗಲ್ಲು ನೆಟ್ಟಿದ್ದು, 400 ಪಂದ್ಯಗಳನ್ನು ಆಡುವುದು ತನ್ನ ಕನಸು ಎಂದು ಹೇಳಿಕೊಂಡಿದ್ದಾರೆ. ಎಲ್ಲಿಸ್ ಪೆರ್ರಿ ಆಸ್ಟ್ರೆಲಿಯಾ ಪರ ಫುಟ್ಬಾಲ್ನಲ್ಲೂ ಆಡಿದ್ದು, 3 ಗೋಲು ಸಿಡಿಸಿದ ದಾಖಲೆ ಹೊಂದಿದ್ದಾರೆ.