ಆಸೀಸ್​ ವಿರುದ್ಧ 2ನೇ ಟಿ20 ಪಂದ್ಯದಲ್ಲಿ ಮುಗ್ಗರಿಸಿದ ಭಾರತದ ಮಹಿಳೆಯರು; ಸರಣಿ 1-1 ಸಮಬಲ

ind vs aus web
Published on

ಮುಂಬೈ: ದೀಪ್ತಿ ಶರ್ಮ (30 ರನ್​, 22ಕ್ಕೆ 2 ವಿಕೆಟ್​) ಆಲ್ರೌಂಡ್​ ನಿರ್ವಹಣೆಯ ನಡುವೆಯೂ ಭಾರತ ತಂಡ ಮಹಿಳೆಯರ ಟಿ20 ಸರಣಿಯ 2ನೇ ಪಂದ್ಯದಲ್ಲಿ ಪ್ರವಾಸಿ ಆಸ್ಟ್ರೆಲಿಯಾ ಎದುರು 4 ವಿಕೆಟ್​ಗಳಿಂದ ಮುಗ್ಗರಿಸಿದೆ. ಇದರೊಂದಿಗೆ ಆಸ್ಟ್ರೆಲಿಯಾ ತಂಡ 3 ಪಂದ್ಯಗಳ ಸರಣಿಯಲ್ಲಿ 1&1 ಸಮಬಲ ಸಾಧಿಸಿದೆ.

ಡಾ. ಡಿವೈ ಪಾಟೀಲ್​ ಅಕಾಡೆಮಿ ಮೈದಾನದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್​ಗೆ ಇಳಿದ ಭಾರತ ತಂಡ ಅಗ್ರ ಕ್ರಮಾಂಕದ ಬ್ಯಾಟರ್​ಗಳ ವೈಲ್ಯದ ನಡುವೆ 8 ವಿಕೆಟ್​ಗೆ 130 ರನ್​ ಪೇರಿಸಲಷ್ಟೇ ಶಕ್ತವಾಯಿತು. ಪ್ರತಿಯಾಗಿ ಆಸೀಸ್​ ಕೂಡ ರನ್​ ಗಳಿಸಲು ತಿಣುಕಾಡಿತು. ಆದರೆ ಸ್ಲಾಗ್​ ಓವರ್​ಗಳಲ್ಲಿ ಭಾರತ ಪ್ರದರ್ಶಿಸಿದ ನೀರಸ ಬೌಲಿಂಗ್​ ನಿರ್ವಹಣೆಯಿಂದ ಆಸೀಸ್​ 19 ಓವರ್​ಗಳಲ್ಲಿ 4 ವಿಕೆಟ್​ಗೆ 133 ರನ್​ ಗಳಿಸಿ ಜಯಿಸಿತು.

ಆಸೀಸ್​ಗೆ ಕೊನೇ 4 ಓವರ್​ಗಳಲ್ಲಿ 32 ರನ್​ ಗಳಿಸುವ ಒತ್ತಡ ಎದುರಾಗಿತ್ತು. ಆದರೆ ಈ ವೇಳೆ ಎಲ್ಲಿಸ್​ ಪೆರ್ರಿ (34*) ಮತ್ತು ೋಬ್​ ಲಿಚ್​ಫೀಲ್ಡ್​ (18*) ಮುರಿಯದ 5ನೇ ವಿಕೆಟ್​ಗೆ 20 ಎಸೆತಗಳಲ್ಲೇ 36 ರನ್​ ಕಸಿದು ಆಸೀಸ್​ ಗೆಲ್ಲಿಸಿದರು. ಇನಿಂಗ್ಸ್​ನ 17ನೇ ಓವರ್​ನಲ್ಲಿ ದೀಪ್ತಿ ಶರ್ಮ 13 ಮತ್ತು 19ನೇ ಓವರ್​ನಲ್ಲಿ ಕನ್ನಡತಿ ಶ್ರೇಯಾಂಕಾ ಪಾಟೀಲ್​ 17 ರನ್​ ಬಿಟ್ಟುಕೊಟ್ಟರು. ಎಲ್ಲಿಸ್​ ಪೆರ್ರಿ ಸಿಕ್ಸರ್​ ಸಿಡಿಸುವ ಮೂಲಕ ಆಸ್ಟ್ರೆಲಿಯಾವನ್ನು ಗೆಲುವಿನ ದಡ ಸೇರಿಸಿ 300ನೇ ಪಂದ್ಯವನ್ನು ಸ್ಮರಣೀಯವಾಗಿಸಿಕೊಂಡರು.

ಭಾರತ: 8 ವಿಕೆಟ್​ಗೆ 130 (ಶೆಫಾಲಿ 1, ಸ್ಮೃತಿ 23, ಜೆಮೀಮಾ 13, ಹರ್ಮಾನ್​ಪ್ರೀತ್​ 6, ರಿಚಾ 23, ದೀಪ್ತಿ ಶರ್ಮ 30, ಪೂಜಾ 9, ಕಿಮ್​ ಗಾರ್ತ್​ 27ಕ್ಕೆ 2, ಸುದರ್​ಲ್ಯಾಂಡ್​ 18ಕ್ಕೆ 2, ವರೆಹ್ಯಾಂ 17ಕ್ಕೆ 2). ಆಸ್ಟ್ರೆಲಿಯಾ: 19 ಓವರ್​ಗಳಲ್ಲಿ 4 ವಿಕೆಟ್​ಗೆ 133 (ಅಲಿಸ್ಸಾ ಹೀಲಿ 26, ಬೆತ್​ ಮೂನಿ 20, ತಹ್ಲಿಯಾ 19, ಎಲ್ಲಿಸ್​ ಪೆರ್ರಿ 34*, ಲಿಚ್​ಫೀಲ್ಡ್​ 18*, ದೀಪ್ತಿ ಶರ್ಮ 22ಕ್ಕೆ 2, ಶ್ರೇಯಾಂಕಾ 40ಕ್ಕೆ 1, ಪೂಜಾ 8ಕ್ಕೆ 1).

ಅಂತಿಮ ಟಿ20 ಪಂದ್ಯ

ಯಾವಾಗ: ಮಂಗಳವಾರ

ಆರಂಭ: ರಾತ್ರಿ 7.00

ನೇರಪ್ರಸಾರ: ಸ್ಪೋರ್ಟ್ಸ್​18

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net