ಪಂಜಾಬ್ ನೂತನ ಸ್ಟೇಡಿಯಂಗೆ ಪಟಿಯಾಲ ಮಹಾರಾಜನ ಹೆಸರು

pca for web
Published on

ಚಂಡೀಗಢ: ಪಂಜಾಬ್ ಕ್ರಿಕೆಟ್ ಸಂಸ್ಥೆ ಶೀಘ್ರವೇ ದೇಶದ ಎರಡನೇ ದೊಡ್ಡ ಸ್ಟೇಡಿಯಂ ನಿರ್ಮಿಸಲು ಸಿದ್ಧತೆಕೈಗೊಂಡಿದೆ. ಮೊಹಾಲಿಯಲ್ಲಿ ಸ್ಟೇಡಿಯಂ ಇದುವರೆಗೂ ಪಿಸಿಎ ಸ್ಟೇಡಿಯಂ ಆಗಿ ಗುರುತಿಸಿಕೊಂಡಿತ್ತು. ಚಂಡೀಗಢದ ಹೊರವಲಯದಲ್ಲಿ ನಿರ್ಮಾಣವಾಗುತ್ತಿರುವ ನೂತನ ಸ್ಟೇಡಿಯಂಗೆ ಪಂಜಾಬ್ ರಾಜ್ಯದ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ತಂದೆ ಪಟಿಯಾಲದ ರಾಜ್ಯದ ಕೊನೇ ರಾಜ ಮಹಾರಾಜ ಯಡವಿಂದ್ರ ಸಿಂಗ್ ಹೆಸರನ್ನು ಇಡಲು ಸರ್ಕಾರ ತೀರ್ಮಾನಿಸಿದೆ. 1934ರಲ್ಲಿ ಯಡವಿಂದ್ರ ಸಿಂಗ್ ರಾಷ್ಟ್ರೀಯ ತಂಡದ ಪರ ಏಕೈಕ ಟೆಸ್ಟ್ ಪಂದ್ಯವಾಡಿದ್ದರು.

ಪಂಜಾಬ್‌ನಲ್ಲಿ ಕ್ರಿಕೆಟ್ ಅಭಿವೃದ್ಧಿಗೆ ಸಾಕಷ್ಟು ಶ್ರಮವಹಿಸಿರುವ ಯಡವೀಂದ್ರ ಸಿಂಗ್ ನೆನಪಿಗೆ ನೂತನ ಸ್ಟೇಡಿಯಂಗೆ ಅವರ ಹೆಸರು ಇಡಲು ತೀರ್ಮಾನಿಸಿರುವುದಾಗಿ ಪಿಸಿಎ ಮುಖ್ಯಸ್ಥ ರಾಜೀಂದರ್ ಗುಪ್ತಾ ಹಾಗೂ ಕಾರ್ಯದರ್ಶಿ ಪುನೀತ್ ಬಾಲಿ ಹೇಳಿದ್ದಾರೆ. ಇತ್ತೀಚೆಗೆ ನಡೆದ ಸಭೆಯಲ್ಲಿ ಈ ಕುರಿತು ಪ್ರಸ್ತಾಪಿಸಿ ಅನುಮೋದನೆ ಪಡೆದುಕೊಳ್ಳಲಾಯಿತು ಎಂದು ಬಾಲಿ ಹೇಳಿದ್ದಾರೆ. ಪಿಸಿಬಿ ಮಾಜಿ ಅಧ್ಯಕ್ಷ ಐಎಸ್ ಬಿಂದ್ರಾ ಅವರ ಪರಿಕಲ್ಪನೆಯಂತೆ ಈ ಸ್ಟೇಡಿಯಂ 38.2 ಏಕರೆ ಪ್ರದೇಶದಲ್ಲಿ ಸಿದ್ಧಗೊಳ್ಳುತ್ತಿದೆ. ಸುಸಜ್ಜಿತ ಮೈದಾನ, ಈಜುಕೊಳ, ಜಿಮ್ ಹಾಗೂ ಇನ್ನಿತರ ವ್ಯವಸ್ಥೆಗಳು ನೂತನ ಸ್ಟೇಡಿಯಂನಲ್ಲಿ ಇರಲಿದೆ.

ರಾಜ ಮಹಾರಾಜ ಯಡವಿಂದ್ರ ಸಿಂಗ್, 1934ರಲ್ಲಿ ಇಂಗ್ಲೆಂಡ್ ಎದುರು ಏಕೈಕ ಟೆಸ್ಟ್ ಪಂದ್ಯವಾಡಿದ್ದರು. ಆ ಪಂದ್ಯದಲ್ಲಿ 84 ರನ್ ಬಾರಿಸಿದ್ದರು. ಜತೆಗೆ 52 ಪ್ರಥಮ ದರ್ಜೆ ಪಂದ್ಯಗಳನ್ನಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net