ಪ್ರೊ ಕಬಡ್ಡಿ ಲೀಗ್​ನಲ್ಲಿ ಪಟನಾ ಪೈರೇಟ್ಸ್​ ಭರ್ಜರಿ ಗೆಲುವಿನ ಆರಂಭ

pro web
Published on

ಅಹಮದಾಬಾದ್​: ಸಚಿನ್​ (14 ಅಂಕ) ನಡೆಸಿದ 12 ಯಶಸ್ವಿ ರೈಡಿಂಗ್​ಗಳ ಬಲದಿಂದ ಮೂರು ಬಾರಿಯ ಚಾಂಪಿಯನ್​ ಪಟನಾ ಪೈರೇಟ್ಸ್​ ತಂಡ ಪ್ರೊ ಕಬಡ್ಡಿ ಲೀಗ್​ 10ನೇ ಆವೃತ್ತಿಗೆ ಭರ್ಜರಿ ಗೆಲುವಿನ ಎಂಟ್ರಿ ನೀಡಿದೆ. ಪಟನಾ ತಂಡ ತನ್ನ ಮೊದಲ ಪಂದ್ಯದಲ್ಲಿ ತೆಲುಗು ಟೈಟಾನ್ಸ್​ ಎದುರು 50-28 ಅಂಕಗಳಿಂದ ಸುಲಭ ಜಯ ಸಾಧಿಸಿತು.

ಟ್ರಾನ್ಸ್​ಸ್ಟಡಿಯಾದಲ್ಲಿ ಬುಧವಾರ ನಡೆದ ಮೊದಲ ಪಂದ್ಯದಲ್ಲಿ ಮೊದಲಾರ್ಧದಲ್ಲೇ ತೆಲುಗು ತಂಡವನ್ನು 2 ಬಾರಿ ಆಲೌಟ್​ ಬಲೆಗೆ ಬೀಳಿಸಿ 28&16ರಿಂದ ಭಾರಿ ಮುನ್ನಡೆ ಸಾಧಿಸಿದ ಪಟನಾ, ದ್ವಿತೀಯಾರ್ಧದಲ್ಲೂ ಮೇಲುಗೈ ಉಳಿಸಿಕೊಂಡಿತು. ತೆಲುಗು ಟೈಟಾನ್ಸ್​ ಪರ ಟೂರ್ನಿಯ ದುಬಾರಿ ಆಟಗಾರ ಪವನ್​ ಶೆರಾವತ್​ (11) ತೋರಿದ ಏಕಾಂಗಿ ಹೋರಾಟ ವ್ಯರ್ಥವಾಯಿತು. ಪಟನಾ ಪರ ಸಚಿನ್​ಗೆ ಮಂಜೀತ್​ (8), ಸಂದೀಪ್​ ಕುಮಾರ್​ (4), ಅಂಕಿತ್​ (5) ಉತ್ತಮ ಬೆಂಬಲ ಒದಗಿಸಿದರು.

ಯೋಧಾಸ್​ಗೆ ಜಯ: ಸುರೇಂದರ್​ ಗಿಲ್​ (13) ಮತ್ತು ನಾಯಕ ಪ್ರದಿಪ್​ ನರ್ವಾಲ್​ (12) ಭರ್ಜರಿ ರೈಡಿಂಗ್​ ಬಲದಿಂದ ಯುಪಿ ಯೋಧಾಸ್​ ತಂಡ ದಿನದ 2ನೇ ಪಂದ್ಯದಲ್ಲಿ 57&27 ಅಂತರದಿಂದ ಹರಿಯಾಣ ಸ್ಟೀಲರ್ಸ್​ ಎದುರು ಗೆಲುವು ದಾಖಲಿಸಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net