

Pat Cummins: ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಟೀಮ್ ಇಂಡಿಯಾ ವಿರುದ್ಧ 3-1 ಅಂತರದಲ್ಲಿ ತಮ್ಮ ತಂಡವನ್ನು ಭರ್ಜರಿ ಗೆಲುವಿನೆಡೆಗೆ ಕೊಂಡೊಯ್ದ ಆಸ್ಟ್ರೇಲಿಯಾ ಕ್ಯಾಪ್ಟನ್ ಪ್ಯಾಟ್ ಕಮ್ಮಿನ್ಸ್, ಟೆಸ್ಟ್ ( WTC) ಇತಿಹಾಸದಲ್ಲಿ ಐತಿಹಾಸಿಕ ದಾಖಲೆ ನಿರ್ಮಿಸಿದ್ದಾರೆ.
ಐದನೇ ಹಾಗೂ ಕೊನೆಯ ಟೆಸ್ಟ್ ಪಂದ್ಯದಲ್ಲಿ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಮೈಲಿಗಲ್ಲು ತಲುಪಿದ ಕಮ್ಮಿನ್ಸ್, ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ 200 ವಿಕೆಟ್‌ಗಳನ್ನು ಕಬಳಿಸಿದ ಮೊದಲ ಬೌಲರ್ ಆಗಿ ಹೊಸ ದಾಖಲೆ ಬರೆದಿದ್ದಾರೆ. ಡಬ್ಲ್ಯೂಟಿಸಿಯಲ್ಲಿ ಅತೀ ಹೆಚ್ಚು ವಿಕೆಟ್‌ಗಳನ್ನು ಪಡೆದಿರುವ ಬೌಲರ್‌ಗಳ ಪೈಕಿ ಈಗ ಕಮ್ಮಿನ್ಸ್ ಹೆಸರು ಅಗ್ರಸ್ಥಾನದಲ್ಲಿದೆ. ಇಲ್ಲಿಯವರೆಗೆ ಆಸೀಸ್ ಪರ 47 ಮ್ಯಾಚ್ಗಳನ್ನಾಡಿರುವ ಪ್ಯಾಟ್, 200 ವಿಕೆಟ್‌ಗಳನ್ನು ಪಡೆದು ಈ ಐತಿಹಾಸಿಕ ದಾಖಲೆ ಬರೆದ ವಿಶ್ವದ ಮೊದಲ ಬೌಲರ್ ಆಗಿ ಹೊರಹೊಮ್ಮಿದ್ದಾರೆ.
ಡಬ್ಲ್ಯುಟಿಸಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಕಮ್ಮಿನ್ಸ್ ಮೊದಲ ಸ್ಥಾನದಲ್ಲಿದ್ದರೆ, ನಂತರದಲ್ಲಿ ಆಸೀಸ್ನ ಆಟಗಾರ ನಾಥನ್ ಲಿಯಾನ್ (196 ವಿಕೆಟ್) ಮತ್ತು ಭಾರತದ ಮಾಜಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ (195 ವಿಕೆಟ್) ಇದ್ದಾರೆ. ಭಾರತ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾದ ಪ್ರಮುಖ ವಿಕೆಟ್ ಟೇಕರ್ ಆಗಿರುವ ಕಮ್ಮಿನ್ಸ್ ಗುರುತಿಸಿಕೊಂಡಿದ್ದು, ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ 2023-25 ಆವೃತ್ತಿಯಲ್ಲಿ ಇದುವರೆಗೆ ಆಡಿದ 17 ಪಂದ್ಯಗಳಲ್ಲಿ 73 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಡಬ್ಲ್ಯೂಟಿಸಿಯ ಒಂದೇ ಆವೃತ್ತಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಪ್ರಸ್ತುತ ಪ್ಯಾಟ್ ಕಮ್ಮಿನ್ಸ್ ಮೂರನೇ ಸ್ಥಾನದಲ್ಲಿದ್ದಾರೆ.
1. ನಾಥನ್ ಲಿಯಾನ್ - 88 (2021-23)
2. ಜಸ್ಪ್ರೀತ್ ಬುಮ್ರಾ - 77 (2023-25)
3. ಪ್ಯಾಟ್ ಕಮ್ಮಿನ್ಸ್ – 73* (2023-25)
4. ರವಿಚಂದ್ರನ್ ಅಶ್ವಿನ್ – 71 (2019-21)
5. ಪ್ಯಾಟ್ ಕಮ್ಮಿನ್ಸ್ – 70 (2019-21)
1. ಪ್ಯಾಟ್ ಕಮ್ಮಿನ್ಸ್ (ಆಸ್ಟ್ರೇಲಿಯಾ) – 200* ವಿಕೆಟ್
2. ನಾಥನ್ ಲಿಯಾನ್ (ಆಸ್ಟ್ರೇಲಿಯಾ) - 196 ವಿಕೆಟ್
3. ರವಿಚಂದ್ರನ್ ಅಶ್ವಿನ್ (ಭಾರತ) – 195 ವಿಕೆಟ್
4. ಮಿಚೆಲ್ ಸ್ಟಾರ್ಕ್ (ಆಸ್ಟ್ರೇಲಿಯಾ) - 165 ವಿಕೆಟ್
5. ಜಸ್ಪ್ರೀತ್ ಬುಮ್ರಾ (ಭಾರತ) - 156 ವಿಕೆಟ್