Paralympics 2024: ಬ್ಯಾಡ್ಮಿಂಟನ್​ನಲ್ಲಿ ಚಿನ್ನ ಪದಕ ಗೆದ್ದ ನಿತೇಶ್ ಕುಮಾರ್!

gold
Published on

ಬೆಂಗಳೂರು: ಪ್ಯಾರಾಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಭಾರತದ ಪದಕ ಬೇಟೆ ಮುಂದುವರಿದಿದೆ. ಪುರುಷರ ಬ್ಯಾಡ್ಮಿಂಟನ್ ಸಿಂಗಲ್ಸ್ ಎಸ್​ಎಲ್3 ವಿಭಾಗದಲ್ಲಿ ಭಾರತದ ನಿತೇಶ್ ಕುಮಾರ್ ನೇರ ಸೆಟ್​ಗಳಿಂದ ಬ್ರಿಟನ್‌ನ ಡೇನಿಯಲ್ ಬೆಥೆಲ್ ಅವರನ್ನು ಸೋಲಿಸಿ ಚೊಚ್ಚಲ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿದ್ದಾರೆ.

ಒಂದು ಗಂಟೆ 20 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಹರಿಯಾಣದ 29 ವರ್ಷದ ನಿತೇಶ್​ ಕುಮಾರ್ 21-14, 18-21, 23-21 ಅಂಕಗಳಿಂದ ಟೋಕಿಯೋ ಬೆಳ್ಳಿ ಪದಕ ವಿಜೇತ ಡೇನಿಯಲ್ ಬೆಥಲ್ ಅವರನ್ನು ಸೋಲಿಸಿದ್ದಾರೆ. ಇದರೊಂದಿಗೆ ಭಾರತ ಪ್ರಸಕ್ತ ಪ್ಯಾರಾಲಿಂಪಿಕ್ಸ್‌ನಲ್ಲಿ 2 ಚಿನ್ನ,3 ಬೆಳ್ಳಿ,4 ಕಂಚಿನ ಸೇರಿ ಒಟ್ಟು 9 ಪದಕಗಳನ್ನು ಗಳಿಸಿದಂತಾಗಿದೆ.

ಭಾನುವಾರ ನಡೆದ 48 ನಿಮಿಷಗಳ ಸೆಮಿಫೈನಲ್ ಪಂದ್ಯದಲ್ಲಿ ನಿತೇಶ್ ನೇರ ಗೇಮ್​ಗಳಿಂದ ಜಪಾನ್​ನ ಆಟಗಾರ ದೈಸುಕೆ ಫುಜಿಹಾರ ಅವರನ್ನು 21-16, 21-12 ರಿಂದ ಸೋಲಿಸಿದ್ದರು.

2009ರಲ್ಲಿ ವಿಶಾಖಪಟ್ಟಣದಲ್ಲಿ ಸಂಭವಿಸಿದ ರೈಲು ಅಪಘಾತದಲ್ಲಿ ನಿತೇಶ್​ ಕುಮಾರ್ ಅವರು ತಮ್ಮ ಎಡಗಾಲನ್ನು ಕಳೆದುಕೊಂಡಿದ್ದರು.

2020ರ ಟೋಕಿಯೊದಲ್ಲಿ ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲಿ ಭಾರತದ ಪ್ರಮೋದ್ ಭಗತ್ ಚಾಂಪಿಯನ್ ಆಗಿದ್ದರು. ಆದರೆ ವಿಶ್ವ ಬ್ಯಾಡ್ಮೀಟನ್​ನ ಡೋಪಿಂಗ್ ನಿಯಮ ಉಲ್ಲಂಘಿಸಿ ಹಿನ್ನೆಲೆಯಲ್ಲಿ ಪ್ರಮೋದ್ ಭಗತ್ ಅವರ ಮೇಲೆ 18 ತಿಂಗಳ ಕಾಲ ನಿಷೇಧ ಹೇರಲಾಗಿದೆ. ಇದರಿಂದ ಪ್ಯಾರೀಸ್ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಭಾಗವಹಿಸುವ ಅವಕಾಶ ಕಳೆದುಕೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net