

ಪ್ಯಾರೀಸ್: ಫ್ರಾನ್ಸ್ ರಾಜಧಾನಿ ಪ್ಯಾರಿಸ್ನಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಮೊದಲ ದಿನವೇ ಭಾರತೀಯ ಸ್ಪರ್ಧಿಗಳಿಂದ ನಿರಾಸೆಯ ಪ್ರದರ್ಶನ ಮೂಡಿಬಂದಿದೆ.
ಹತ್ತು ಮೀಟರ್ ಏರ್ ರೈಫಲ್ ವಿಭಾಗದಲ್ಲಿ ಭಾರತೀಯ ಶೂಟರ್ಗಳು ಪದಕ ಬೇಟೆಯಾಡುವಲ್ಲಿ ವಿಫಲರಾಗಿದ್ದಾರೆ. ಕಂಚಿನ ಪದಕದ ಸ್ಪರ್ಧೆಗೆ ಅರ್ಹತೆ ಪಡೆಯಲು ಭಾರತದ ಕ್ರಿಡಾಪಟುಗಳು ಕೇವಲ 1 ಅಂಕದಿಂದ ದೂರ ಉಳಿಯುವ ಮೂಲಕ ಭಾರತೀಯ ಕ್ರೀಡಾಭಿಮಾನಿಗಳಲ್ಲಿ ನಿರಾಸೆ ಉಂಟು ಮಾಡಿದರು.
ಜರ್ಮನಿಯ ಶೂಟರ್ಗಳು 629.7 ಅಂಕಗಳನ್ನು ಗಳಿಸಿ, ಪದಕದ ಸುತ್ತಿಗೆ ಲಗ್ಗೆ ಇಟ್ಟರೆ, ಭಾರತೀಯ ರಮಿತಾ ಮತ್ತು ಅರ್ಜುನ್ 628.7 ಅಂಕಗಳನ್ನು ಕಲೆಹಾಕಿ ಪದಕದ ಆಸೆಯನ್ನು ಕೈಚೆಲ್ಲುವ ಮೂಲಕ 6ನೇ ಸ್ಥಾನಕ್ಕೆ ಕುಸಿದರು. ಒಟ್ಟು 17 ದಿನಗಳ ಕಾಲ ನಡೆಯುವ ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಮೊದಲ ದಿನವೇ ಭಾರತಕ್ಕೆ ಯಾವುದೇ ಪದಕ ಸಿಗದಿರುವುದು ಭಾರತೀಯರನ್ನು ನಿರಾಸೆಗೆ ದೂಡಿದೆ. (ಏಜೆನ್ಸೀಸ್)