ಬೆಂಗಳೂರಿನಲ್ಲಿ ಅಭಿಮಾನಿಗಳೊಂದಿಗೆ ಕ್ರಿಕೆಟಿಗ ದಿನೇಶ್ ಕಾರ್ತಿಕ್ ಸ್ಟಾರ್ ಟಾಕ್

karthik web
Published on

ಬೆಂಗಳೂರು: ಜಗತ್ತಿನ ಅತ್ಯುನ್ನತ ಅಥ್ಲೀಟ್​ಗಳಿಂದ ಸ್ಫೂರ್ತಿ ಪಡೆದ ಕ್ರೀಡಾ ಉಡುಪುಗಳ ಬ್ರಾಂಡ್ - ಪರಿಮ್ಯಾಚ್ ಸ್ಪೋರ್ಟ್ಸ್ ಬೆಂಗಳೂರಿನ ಮಂತ್ರಿ ಸ್ಟೋರ್ ಮಾಲ್‌ನಲ್ಲಿ ಭಾನುವಾರ ಖ್ಯಾತ ಕ್ರಿಕೆಟಿಗ ದಿನೇಶ್ ಕಾರ್ತಿಕ್​ ಅವರೊಂದಿಗೆ ಅಭಿಮಾನಿಗಳ ಪ್ರತ್ಯೇಕ ಸಂವಾದ ಕಾರ್ಯಕ್ರಮವನ್ನು ಆಯೋಜಿಸಿತ್ತು. ಪರಿಮ್ಯಾಚ್ ಸ್ಪೋರ್ಟ್ಸ್​ ಅಧಿಕೃತ ಬ್ರಾಂಡ್ ರಾಯಭಾರಿಯಾಗಿರುವ ದಿನೇಶ್ ಕಾರ್ತಿಕ್ ಅವರು ಅಭಿಮಾನಿಗಳೊಂದಿಗೆ ಛಾಯಾಚಿತ್ರಗಳನ್ನು ತೆಗೆಸಿಕೊಂಡರಲ್ಲದೆ, ಪ್ರಶೋತ್ತರ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಈ ಕಾರ್ಯಕ್ರಮದ ಸಂದರ್ಭದಲ್ಲಿ ಅವರು ಮಾಧ್ಯಮದವರೊಂದಿಗೂ ಸಂವಾದ ನಡೆಸಿದರು.

ದಿನೇಶ್ ಕಾರ್ತಿಕ್ ಪಂದ್ಯದ ಅಂತಿಮ ಓವರ್‌ಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವಲ್ಲಿ ಹೆಸರಾಗಿದ್ದಾರೆ. ಭಾರತದ ಅಂತಾರಾಷ್ಟ್ರೀಯ ಟಿ29 ತಂಡದಲ್ಲಿ ಕಾರ್ತಿಕ್​ ಅತ್ಯಂತ ಪ್ರಮುಖ ಆಟಗಾರರಾಗಿದ್ದರು. ಅವರ ಅಸಾಧಾರಣ ವೇಗ ಮತ್ತು ಸ್ವಿಂಗ್‌ಗಳು ಜಗತ್ತಿನ ಕೆಲವು ಅಗ್ರ ಬ್ಯಾಟ್ಸ್‌ಮನ್‌ಗಳಿಗೆ ಸತತವಾಗಿ ಸವಾಲೆಸೆಯುತ್ತಿವೆ.

ಈ ಕಾರ್ಯಕ್ರಮದ ಸಂದರ್ಭದಲ್ಲಿ ದಿನೇಶ್ ಕಾರ್ತಿಕ್​ ಅವರು ಮುಂಬರಲಿರುವ ಕ್ರಿಕೆಟ್ ಋತುವಿಗೆ ತಮ್ಮ ವೈಯಕ್ತಿಕ ಗುರಿಗಳ ಕುರಿತು ಒಳನೋಟಗಳನ್ನು ಹಂಚಿಕೊಂಡರು. ಅಲ್ಲದೆ ಪ್ರದರ್ಶನದ ಒತ್ತಡವನ್ನು ಯಶಸ್ವಿಯಾಗಿ ನಿಭಾಯಿಸುವುದಕ್ಕಾಗಿ ಅಥ್ಲೀಟ್‌ಗಳು ಬಳಸಿಕೊಳ್ಳುವ ಕಾರ್ಯತಂತ್ರಗಳನ್ನು ಕುರಿತು ತಿಳಿಸಿದರು.

ಚರ್ಚೆಯ ಗಮನಾರ್ಹವಾದ ಮುಖ್ಯಾಂಶ ಎಂದರೆ ಅದು ಪರಿಮ್ಯಾಚ್ ಸ್ಪೋರ್ಟ್ಸ್​​ನೊಂದಿಗೆ ಅವರ ಪಾಲುದಾರಿಕೆ ಕುರಿತ ಚರ್ಚೆಯಾಯಿತು. ಇದರಲ್ಲಿ ಕಾರ್ತಿಕ್ ಅವರ ಕ್ರೀಡಾ ಮಹತ್ವಾಕಾಂಕ್ಷೆಗಳಿಗೆ ಬ್ರಾಂಡ್‌ನ ಅಚಲ ಬೆಂಬಲ ಕುರಿತು ಅವರು ಒತ್ತಿ ಹೇಳಿದರು. ತಮ್ಮ ಪ್ರತ್ಯೇಕವಾದ ಸ್ಪೋರ್ಟ್ಸ್ ವೇರ್ ಶ್ರೇಣಿಯಲ್ಲಿನ ಪೊಲೊ ಶರ್ಟ್ ಅನ್ನು ಕಾರ್ತಿಕ ಹೆಮ್ಮೆಯಿಂದ ಧರಿಸಿದ್ದರು. ಈ ಶ್ರೇಣಿ ಪರಿಮ್ಯಾಚ್ ಸ್ಪೋರ್ಟ್ಸ್ ನೊಂದಿಗೆ ಜಂಟಿ ಯೋಜನೆಯಾಗಿದೆ. ಕಾರ್ತಿಕ್ ಅವರಿಗೆ ಕ್ರೀಡೆ ಕುರಿತು ಇರುವ ಅಚಲ ಭಾವೋತ್ಸಾಹ ಮತ್ತು ಅವರ ಅನನ್ಯ ಶೈಲಿಯನ್ನು ಇದು ಬಿಂಬಿಸುತ್ತದೆ.

"ಡೇರ್ ಟು ಬಿ ಎ ಚಾಂಪಿಯನ್" ಎಂಬ ಹೊಸ ಬ್ರಾಂಡ್ ಅಭಿಯಾನಕ್ಕೆ ಸಮರ್ಪಿತವಾದ ಇತ್ತೀಚಿನ ಪರಿಮ್ಯಾಚ್ ಕ್ರೀಡಾ ಬ್ರಾಂಡ್ ವಿಡಿಯೋಗಾಗಿ ಚಿತ್ರೀಕರಣದ ಸಂದರ್ಭದಲ್ಲಿನ ತಮ್ಮ ಅನುಭವವನ್ನು ಕೂಡ ಅವರು ಹಂಚಿಕೊಂಡರು.

ಪರಿಮ್ಯಾಚ್ ಸ್ಪೋರ್ಟ್ಸ್ ಕುರಿತು: ಜಗತ್ತಿನ ಆಗ್ರಮಾನ್ಯ ಅಥ್ಲೀಟ್‌ಗಳಿಂದ ಸ್ಪೂರ್ತಿ ಪಡೆದ ಅತ್ಯುನ್ನತ ಗುಣಮಟ್ಟದ ಕ್ರೀಡಾ ಉಡುಪುಗಳ ಬ್ರಾಂಡ್ ಪರಿಮ್ಯಾಚ್ ಸ್ಪೋರ್ಟ್ಸ್ ಆಗಿದೆ. ಪ್ರತಿ ಧೈರ್ಯಶಾಲಿ ಆಥೀಟ್‌ಗಳು ತಮ್ಮ ಗೆಲುವಿನ ಮಾರ್ಗದಲ್ಲಿ ಸಜ್ಜಾಗಿ ಇರುವಂತೆ ಇವುಗಳನ್ನು ವಿನ್ಯಾಸಗೊಳಿಸಲಾಗಿರುತ್ತದೆ. ಮೂಲವಾಗಿ ಕ್ರೀಡೆ ಕುರಿತ ಭಾವೋತ್ಸಾಹದೊಂದಿಗೆ ಪರಿಮ್ಯಾಚ್ ಸ್ಪೋರ್ಟ್ಸ್ ಪ್ರೊ-ಆನ್-ಫೀಲ್ಡ್ ಕಿಟ್‌ಗಳನ್ನು ಫುಟ್​ಬಾಲ್ ಮತ್ತು ಕ್ರಿಕೆಟ್ ತಂಡಗಳಿಗಾಗಿ ಸೃಷ್ಟಿಸುತ್ತಿದೆ. ಜೊತೆಗೆ ಫ್ಯಾನ್‌ಗಳಿಗೆ ಪ್ರತಿದಿನದ ವರ್ಕ್‌ ಔಟ್ ಉಡುಪುಗಳ ಸಮಗ್ರ ಶೈಲಿಯನ್ನು ಸಾದರಪಡಿಸುತ್ತಿದೆ. ಇದರ ಪ್ರತ್ಯೇಕ ವಿನ್ಯಾಸದೊಂದಿಗೆ ಈ ಉಡುಪುಗಳು ಗುಂಪಿನಲ್ಲಿ ಪ್ರತ್ಯೇಕವಾದ ಸ್ಥಾನ ಕಂಡುಕೊಳ್ಳುತ್ತವೆ. ಜಗತ್ತಿನ ಅಗ್ರ ಅಥ್ಲೀಟ್‌ಗಳು ಮತ್ತು ಅವರು ಕ್ರೀಡಾಂಗಣದಲ್ಲಿ ಗಳಿಸಿದ ವಿಜಯಗಳಿಂದ ಈ ಶ್ರೇಣಿ ಸ್ಫೂರ್ತಿ ಪಡೆದಿದೆ. ಕ್ರೀಡೆ ಕುರಿತಂತೆ ಭಾರತದ ಪ್ರೀತಿಯನ್ನು ವಿಸ್ತರಿಸುವ ಮತ್ತು ಅದನ್ನು ಸಂಪೂರ್ಣ ನೂತನ ಮಟ್ಟಕ್ಕೆ ತರುವ ಮಹತ್ವಾಕಾಂಕ್ಷೆಯ ಗುರಿ ಸಾಧಿಸುವ ಮಾರ್ಗದಲ್ಲಿ ಪರಿಮ್ಯಾಚ್ ಸ್ಪೋರ್ಟ್ಸ್ ಸಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net