ಸುತ್ತಿಗೆಯಿಂದ ಪಿಚ್ ಸರಿ ಮಾಡಿದ ಕ್ರಿಕೆಟಿಗನ ವಿಡಿಯೋ ವೈರಲ್..!

pakistan pitch
Published on

ನವದೆಹಲಿ: ಕರಾಚಿಯಲ್ಲಿ ನಡೆಯುತ್ತಿರುವ ಸರಣಿಯ ಎರಡನೇ ಮತ್ತು ಅಂತಿಮ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನ ತಂಡ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ. ಮೊದಲ ಟೆಸ್ಟ್ ಡ್ರಾ ಆಗಿ ಕೊನೆಗೊಂಡಿದ್ದು ಎರಡೂ ತಂಡಗಳು ಸರಣಿಯನ್ನು ಗೆಲ್ಲಲು ಎರಡನೇ ಟೆಸ್ಟ್ಅನ್ನು ಗೆಲ್ಲುವ ಅನಿವಾರ್ಯತೆ ಎದುರಿಸುತ್ತಿವೆ.

ನ್ಯೂಜಿಲೆಂಡ್ ತನ್ನ ಎರಡನೇ ಇನ್ನಿಂಗ್ಸ್ ಅನ್ನು ೨೭೭/೫ ಕ್ಕೆ ಡಿಕ್ಲೇರ್ ಮಾಡಿಕೊಂಡಿತು, ಅವರ ಬ್ಯಾಟ್ಸಮನ್ ಗಳು ಪಂದ್ಯದ ೪ ನೇ ದಿನದುದ್ದಕ್ಕೂ ಪಾಕಿಸ್ತಾನದಬೌಲರ್ ಗಳನ್ನು ನಿರಾಶೆಗೊಳಿಸಿದರು. ಒಂದು ಹಂತದಲ್ಲಿ, ಪಾಕಿಸ್ತಾನದ ವೇಗಿ ನಸೀಮ್ ಷಾ, ಪಿಚ್ ಕ್ಯುರೇಟರ್ ನಿಂದ ಸುತ್ತಿಗೆಯನ್ನು ತೆಗೆದುಕೊಂಡು ಫುಟ್ಮಾರ್ಕ್ಗಳನ್ನು ಸರಿ ಮಾಡಿದರು, ಈ ಸಂದರ್ಭ ಕ್ಯೂರೇಟರ್ ಕೂಡ ಅವರ ಪಕ್ಕದಲ್ಲಿ ನಿಂತಿದ್ದರು.

ಪಾಕಿಸ್ತಾನ ಕ್ರಿಕೆಟ್ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಈ ವೀಡಿಯೊವನ್ನು ಹಂಚಿಕೊಂಡಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net