ಹಿಟ್ ಸಿನಿಮಾ ಮಾಡಿದ್ರೂ ಹಣ ಕಳೆದುಕೊಂಡೆ ಎಂದ ಖ್ಯಾತ ಹಿಂದಿ ಚಿತ್ರ ನಿರ್ಮಾಪಕ..!

karan johar
Published on

ನವದೆಹಲಿ: ಬಾಲಿವುಡ್ ಚಲನಚಿತ್ರ ನಿರ್ಮಾಪಕ ಕರಣ್ ಜೋಹರ್ ಇತ್ತೀಚೆಗೆ ಒಂದೆರಡು ಹಿಟ್ ಚಿತ್ರಗಳನ್ನು ನೀಡಿ ಇದ್ದಕ್ಕಿದ್ದಂತೆ ದೊಡ್ಡ ಬಜೆಟ್ ತಾರೆಗಳಂತೆ ವರ್ತಿಸಲು ಪ್ರಾರಂಭಿಸುವ ನಟರ ಬಗ್ಗೆ ಮಾತನಾಡಿದರು.

ಸಂದರ್ಶನವೊಂದರಲ್ಲಿ, ಕರಣ್ ಜೋಹರ್ ಒಬ್ಬ ನಟನಿಗೆ 5 ಕೋಟಿಯ ಓಪನಿಂಗ್ ಗ್ಯಾರಂಟಿಯನ್ನು ಸಹ ನೀಡಲು ಸಾಧ್ಯವಾಗದಿರುವಾಗ, ನಟ ಬಂದು ನಿರ್ಮಾಕನ ಬಳಿ 20 ಕೋಟಿ ಕೇಳಲು ಹೇಗೆ ಸಾಧ್ಯ ಎಂದು ಕೇಳಿ ಹೊಸ ನಟರ ಬಗ್ಗೆ ತಮಗಿರುವ ಅಸಮಾಧಾನವನ್ನು ಹೊರಹಾಕಿದ್ದಾರೆ.

ಈ ನಡುವೆ ಭಾರತೀಯ ಚಿತ್ರರಂಗದ ಬೇರೆ ಭಾಷೆಗಳ ಸಿನಿಮಾಗಳ ಬಗ್ಗೆ ಮಾತನಾಡಿದ ಕರಣ್ ಜೋಹರ್, "ನನ್ನ ಹೃದಯ ಹಿಂದಿ ಚಿತ್ರರಂಗದಲ್ಲಿದ್ದರೂ ಒಬ್ಬ ಉದ್ಯಮಿಯಾಗಿ ತೆಲುಗು ಹೆಚ್ಚು ಲಾಭದಾಯಕ ಉದ್ಯಮವಾಗಿದೆ ಎಂದು ನಾನು ಭಾವಿಸುತ್ತೇನೆ ಎಂದು ಅವರು ಹೇಳಿದರು.  

ಸಂದರ್ಶನದಲ್ಲಿ ಸ್ಟೂಡೆಂಟ್ ಆಫ್ ದ ಇಯರ್ ಸಿನಿಮಾ ಬಗ್ಗೆ ಪ್ರಶ್ನಿಸಿದಾಗ ಅವರು ‘ಆಲಿಯಾ ಭಟ್, ವರುಣ್ ಧವನ್ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಮುಂತಾದವರಿಗೆ ಬಾಲಿವುಡ್ಡಿನಲ್ಲಿ ಪ್ರವೇಶ ನೀಡಿದರೂ ಸ್ಟೂಡೆಂಟ್ ಆಫ್ ದಿ ಇಯರ್ ಚಿತ್ರ ಅಂತಿಮವಾಗಿ ನಷ್ಟ ಅನುಭವಿಸಿದೆ ಎಂದು ಅವರು ಬಹಿರಂಗಪಡಿಸಿದರು. 'ಒಂದು ಚಿತ್ರ ಎಂದಿಗೂ ವಿಫಲವಾಗುವುದಿಲ್ಲ, ಬಜೆಟ್ ಆಗುತ್ತದೆ' ಎಂದು ಯಶ್ ಚೋಪ್ರಾ ನನಗೆ ಹೇಳಿದ್ದರು. ಸ್ಟೂಡೆಂಟ್ ಆಫ್ ದ ಇಯರ್ ನಂತಹ ಹಿಟ್ ಚಿತ್ರ ಮಾಡಿದ್ದೇನೆ, ಆದರೂ ಹಣವನ್ನು ಕಳೆದುಕೊಂಡಿದ್ದೇನೆ" ಎಂದು ಅವರು ಅನೇಕ ಕಾಲದಿಂದ ಕುತೂಹಲವಾಗಿಯೇ ಇದ್ದ ವಿಚಾರವನ್ನು ಬಿಚ್ಚಿಟ್ಟರು.

ಕರಣ್ ಜೋಹರ್ ಮುಂದೇನು ಮಾಡುತ್ತಾರೆ?
ರಣವೀರ್ ಸಿಂಗ್ ಮತ್ತು ಆಲಿಯಾ ಭಟ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಚಿತ್ರದ ಮೂಲಕ ಕರಣ್ ಮತ್ತೆ ನಿರ್ದೇಶನಕ್ಕೆ ಮರಳಲು ಸಜ್ಜಾಗಿದ್ದಾರೆ. ಈ ಚಿತ್ರವು ಏಪ್ರಿಲ್ 2023 ರಲ್ಲಿ ಬಿಡುಗಡೆಯಾಗಲಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net