ಮೊದಲ ಟಿ20 ಪಂದ್ಯದಲ್ಲಿ ವಿಂಡೀಸ್‌ಗೆ ಸೋಲುಣಿಸಿದ ಪಾಕಿಸ್ತಾನ

wi vs pak web
Published on

ಕರಾಚಿ: ಪ್ರಮುಖ ಆಟಗಾರರ ಗೈರು ಮತ್ತು ಒಮಿಕ್ರಾನ್ ಹಾವಳಿಯ ನಡುವೆ ಪಾಕಿಸ್ತಾನ ಪ್ರವಾಸ ಕೈಗೊಂಡಿರುವ ವೆಸ್ಟ್ ಇಂಡೀಸ್ ತಂಡ ಮೊದಲ ಟಿ20 ಪಂದ್ಯದಲ್ಲಿ ಆತಿಥೇಯರಿಗೆ 63 ರನ್‌ಗಳಿಂದ ಶರಣಾಗಿದೆ. 3 ಪಂದ್ಯಗಳ ಸರಣಿಯಲ್ಲಿ ವಿಂಡೀಸ್ 0-1 ಹಿನ್ನಡೆ ಕಂಡಿದ್ದು, 2ನೇ ಪಂದ್ಯ ಮಂಗಳವಾರ ನಡೆಯಲಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಪಾಕ್, ಮೊಹಮದ್ ರಿಜ್ವಾನ್ (78) ಮತ್ತು ಹೈದರ್ ಅಲಿ (68) ಬಿರುಸಿನ ಅರ್ಧಶತಕದಿಂದ 6 ವಿಕೆಟ್‌ಗೆ 200 ರನ್ ಪೇರಿಸಿತು. ಪ್ರತಿಯಾಗಿ ವೇಗಿ ಮೊಹಮದ್ ವಾಸಿಂ (40ಕ್ಕೆ 4) ಮತ್ತು ಸ್ಪಿನ್ನರ್ ಶಾದಾಬ್ ಖಾನ್ (17ಕ್ಕೆ 3) ದಾಳಿಗೆ ಕುಸಿದ ನಿಕೋಲಸ್ ಪೂರನ್ ಸಾರಥ್ಯದ ವಿಂಡೀಸ್ ತಂಡ 19 ಓವರ್‌ಗಳಲ್ಲಿ 137 ರನ್‌ಗೆ ಆಲೌಟ್ ಆಯಿತು.

ಪಾಕಿಸ್ತಾನ: 6 ವಿಕೆಟ್‌ಗೆ 200 (ರಿಜ್ವಾನ್ 78, ಬಾಬರ್ 0, ಫಖರ್ 10, ಹೈದರ್ ಅಲಿ 68, ನವಾಜ್ 30, ರೊಮಾರಿಯೊ 43ಕ್ಕೆ 2, ಥಾಮಸ್ 38ಕ್ಕೆ 1), ವೆಸ್ಟ್ ಇಂಡೀಸ್: 19 ಓವರ್‌ಗಳಲ್ಲಿ 137 (ಶೈ ಹೋಪ್ 31, ಪೂರನ್ 18, ಪೊವೆಲ್ 21, ಸ್ಮಿತ್ 24, ಮೊಹಮದ್ ವಾಸಿಂ 40ಕ್ಕೆ 4, ಶಾದಾಬ್ ಖಾನ್ 17ಕ್ಕೆ 3).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net