

ಲೌಡೆರ್ಹಿಲ್: ಎಡಗೈ ವೇಗಿ ಶಹೀನ್ ಷಾ ಅಫ್ರಿದಿ (22ಕ್ಕೆ 3), ಎಡಗೈ ಸ್ಪಿನ್ನರ್ ಇಮಾದ್ ವಾಸಿಂ (8ಕ್ಕೆ 3) ಮಾರಕ ಬೌಲಿಂಗ್ ಹಾಗೂ ನಾಯಕ ಬಾಬರ್ ಅಜಮ್ (32*ರನ್, 34 ಎಸೆತ, 2 ಬೌಂಡರಿ) ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಪಾಕಿಸ್ತಾನ ತಂಡ ಐಸಿಸಿ ಟಿ20 ವಿಶ್ವಕಪ್ನ ತನ್ನ 4ನೇ ಹಾಗೂ ಕೊನೇ ಲೀಗ್ ಪಂದ್ಯದಲ್ಲಿ ಐರ್ಲೆಂಡ್ ತಂಡವನ್ನು 3 ವಿಕೆಟ್ಗಳಿಂದ ಮಣಿಸಿ, ಟೂರ್ನಿಗೆ ಗೆಲುವಿನ ವಿದಾಯ ಹೇಳಿದೆ.
ಸೆಂಟ್ರಲ್ ಬ್ರೋವರ್ಡ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಔಪಚಾರಿಕ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿದ ಐರ್ಲೆಂಡ್, ಶಹೀನ್ ಹಾಗೂ ಮೊಹಮದ್ ಅಮೀರ್ (11ಕ್ಕೆ 2) ದಾಳಿಗೆ ನಲುಗಿ 32 ರನ್ಗಳಿಗೆ 6 ವಿಕೆಟ್ ಕಳೆದುಕೊಂಡಿತು. ಆಗ ಗರೆಥ್ ಡೆಲಾನಿ (31 ರನ್,19 ಎಸೆತ, 1 ಬೌಂಡರಿ, 3 ಸಿಕ್ಸರ್) ಆಸರೆಯಲ್ಲಿ 9 ವಿಕೆಟ್ಗೆ 106 ರನ್ಗಳ ಸಾಧಾರಣ ಮೊತ್ತ ಪೇರಿಸಿತು. ಪ್ರತಿಯಾಗಿ ಪಾಕ್ ಒಂದು ಹಂತದಲ್ಲಿ 62 ರನ್ಗಳಿಗೆ 6 ವಿಕೆಟ್ ಕಳೆದುಕೊಂಡು ಸೋಲಿನ ಭೀತಿ ಎದುರಿಸಿದರೂ, ಬಾಬರ್ ಅಜಮ್ ರಕ್ಷಣೆಯಲ್ಲಿ 18.5 ಓವರ್ಗಳಲ್ಲಿ 7 ವಿಕೆಟ್ಗೆ 111 ರನ್ ಗಳಿಸಿ ಸಮಾಧಾನಕರ ಗೆಲುವು ಕಂಡಿತು.
ಬಾಬರ್ ಮತ್ತು ಅಬ್ಬಾಸ್ ಅಫ್ರಿದಿ (17) 7ನೇ ವಿಕೆಟ್ಗೆ 40 ಎಸೆತಗಳಲ್ಲಿ 33 ರನ್ ಪೇರಿಸಿ ಪಾಕ್ ತಂಡವನ್ನು ಆಘಾತಕಾರಿ ಸೋಲಿನಿಂದ ಪಾರು ಮಾಡಿದರು.
ಐರ್ಲೆಂಡ್ಗೆ ಕಡಿವಾಣ: ಮೊದಲ ಓವರ್ನಲ್ಲಿ ಆಂಡ್ರ್ಯೋ ಬಲ್ಬಿರ್ನಿ (0) ಹಾಗೂ ಲೋರ್ಕನ್ ಟಕ್ಕರ್ (2) ವಿಕೆಟ್ ಪಡೆದ ಶಹೀನ್ ಷಾ ಐರ್ಲೆಂಡ್ ಆರಂಭಿಕ ಶಾಕ್ ನೀಡಿದರು. ನಾಯಕ ಪೌಲ್ ಸ್ಟೀರ್ಲಿಂಗ್ (1), ಹ್ಯಾರಿ ಟೆಕ್ಟರ್ (0) ವೈಲ್ಯ ಮುಂದುವರಿಸಿದರು. 32 ರನ್ಗಳಿಗೆ 6 ವಿಕೆಟ್ ಕೈಚೆಲ್ಲಿದ ಐರ್ಲೆಂಡ್ ಮೂರಂಕಿ ದಾಖಲಿಸುವುದು ದುಸ್ಥರ ಎನಿಸಿತು. ಆಗ ಗರೆಥ್ ಡೆಲಾನಿ ಹಾಗೂ ಅಡೈರ್ 7ನೇ ವಿಕೆಟ್ಗೆ 30 ಎಸೆತಗಳಲ್ಲಿ 44 ರನ್ಗಳಿಸಿ ಚೇತರಿಕೆ ನೀಡಿದರು. ಇಮಾದ್ ವಾಸಿಂ (8ಕ್ಕೆ 3) ಬಾಲಗೋಂಚಿಗಳಿಗೆ ಕಡಿವಾಣ ಹೇರಿದರು. ಜೋಶ್ವ ಲೀಟಲ್ (22*) ಹೋರಾಟದಿಂದ ಐರ್ಲೆಂಡ್ 100ರ ಗಡಿ ದಾಟಿತು.
ಐರ್ಲೆಂಡ್: 9 ವಿಕೆಟ್ಗೆ 106 (ಸ್ಟೀರ್ಲಿಂಗ್ 1, ಲೋರ್ಕನ್ 2, ಕರ್ಟಿಸ್ 7, ಡಾಕ್ರೆಲ್ 11, ಗರೆಥ್ 31, ಮಾರ್ಕ್ ಅಡೈರ್ 15, ಜೋಶ್ವ ಲಿಟಲ್ 22*, ಬೆನ್ ವೈಟ್ 5*, ಶಹೀನ್ ಷಾ ಅಫ್ರಿದಿ 22ಕ್ಕೆ 3, ಅಮೀರ್ 11ಕ್ಕೆ 2, ಇಮಾದ್ ವಾಸಿಂ 8ಕ್ಕೆ 3). ಪಾಕಿಸ್ತಾನ: 18.5 ಓವರ್ಗಳಲ್ಲಿ 7 ವಿಕೆಟ್ಗೆ 111 (ರಿಜ್ವಾನ್ 17, ಆಯುಬ್ 17, ಬಾಬರ್ 32*, ಖರ್ 5, ಶಾದಾಬ್ 0, ಅಬ್ಬಾಸ್ ಅಫ್ರಿದಿ 17, ಶಹೀನ್ ಷಾ 13*, ಮೆಕ್ಕಾರ್ಥಿ 15ಕ್ಕೆ 3, ಕ್ಯಾಂಪರ್ 24ಕ್ಕೆ 2).
4. ಶಹೀನ್ ಷಾ ಅಫ್ರಿದಿ ಹಾಲಿ ವಿಶ್ವಕಪ್ ಟೂರ್ನಿಯ ಪಂದ್ಯದ ಮೊದಲ ಓವರ್ನಲ್ಲಿ 2 ವಿಕೆಟ್ ಪಡೆದ 4ನೇ ಬೌಲರ್. ರುಬ್ಲೆನ್ ಟ್ರುಪ್ಲೆಮನ್, ಾಜಲ್ಹೂಕ್ ಾರೂಖಿ, ಅರ್ಷದೀಪ್ ಸಿಂಗ್ ಮೊದಲಿಗರು. ಈ ನಾಲ್ವರು ಬೌಲರ್ಗಳು ಎಡಗೈ ವೇಗಿಗಳಾಗಿರುವುದು ವಿಶೇಷ.