

Champions Trophy: ಇದೇ ಫೆಬ್ರವರಿ 19ರಿಂದ ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ಪ್ರಾರಂಭವಾಗಲಿದೆ. ಈ ಟೂರ್ನಿ ಪಾಕಿಸ್ತಾನ ಮತ್ತು ದುಬೈನಲ್ಲಿ ನಡೆಯಲಿದೆ. ಚಾಂಪಿಯನ್ಸ್ ಟ್ರೋಫಿ ಟೂರ್ನಿಗಿಂತ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ಮೇಲೆ ಸದ್ಯ ಎಲ್ಲರ ಚಿತ್ತ ಮೂಡಿದೆ. ಈ ಟೂರ್ನಮೆಂಟ್ನ ಒಂದು ಲೆಕ್ಕಾಚಾರ ಕೇವಲ ಇದೊಂದು ಹೈವೋಲ್ಟೇಜ್ ಪಂದ್ಯದ ಮೇಲೆ ನಿಂತಿರುವುದು ಹಲವರ ಕುತೂಹಲಕ್ಕೂ ಕಾರಣವಾಗಿದೆ.
ಪಾಕ್ ಮತ್ತು ಭಾರತ ದೇಶಗಳ ನಡುವಿನ ರಾಜಕೀಯ ಉದ್ವಿಗ್ನತೆಯ ನಡುವೆಯೇ ಪಾಕಿಸ್ತಾನ ಮತ್ತು ಟೀಮ್ ಇಂಡಿಯಾ ಐಸಿಸಿ ಟೂರ್ನಿಯಲ್ಲಿ ಪ್ರಬಲ ಸ್ಪರ್ಧೆ ನೀಡಲು ಸಜ್ಜಾಗಿದೆ. ಕಳೆದ ವರ್ಷದಿಂದ ಎಲ್ಲಿ ಟೂರ್ನಿಯನ್ನು ನಡೆಸಬೇಕು ಎಂಬ ವಿಚಾರಕ್ಕೆ ಬಿಸಿಸಿಐ ಮತ್ತು ಪಿಸಿಬಿ ನಡುವೆ ದೊಡ್ಡ ವಿವಾದವೇ ಭುಗಿಲೆದ್ದಿತ್ತು. ಪಾಕ್ ನೆಲದಲ್ಲಿ ಆಡಲು ನಮ್ಮ ತಂಡ ತಯಾರಿಲ್ಲ ಎಂದು ಬಿಸಿಸಿಐ ಹೇಳಿದರೆ, ಇಲ್ಲಿಯೇ ಟೀಮ್ ಇಂಡಿಯಾ ಆಡಬೇಕು ಎಂಬ ಹಠದಲ್ಲಿ ಪಾಕ್ ಇತ್ತು. ಭಾರೀ ಜಟಾಪಟಿಯ ನಂತರ ಈಗ ಹೈಬ್ರಿಡ್ ಮಾದರಿಯಲ್ಲಿ ಆಡಲು ಒಪ್ಪಿಕೊಂಡಿರುವ ಭಾರತಕ್ಕೆ, ಹೇಗಾದರೂ ತವರಿನಲ್ಲೇ ತಕ್ಕ ಪಾಠ ಕಲಿಸಬೇಕೆಂಬ ಶಪಥವನ್ನು ಪಾಕಿಸ್ತಾನ ಮಾಡಿಕೊಂಡಿದೆ. ಇದಕ್ಕೆ ಈ ಬೆಳವಣಿಗೆಗಳೇ ಸಾಕ್ಷಿ.
ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಎರಡೂ ವೈರಿ ತಂಡಗಳು ಯಾವಾಗ ಪರಸ್ಪರ ಮುಖಾಮುಖಿಯಾಗಲಿದೆ ಎಂದು ಕ್ರಿಕೆಟ್ ಪ್ರಿಯರು ತೀವ್ರ ಕಾತರದಿಂದ ಕಾಯುತ್ತಿದ್ದಾರೆ. ಅವರ ಕಾಯುವಿಕೆಗೆ ಉಳಿದಿರುವುದು ಕೆಲವೇ ಕೆಲವು ದಿನಗಳು ಮಾತ್ರ. ಫೆಬ್ರವರಿ 23ರಂದು ದುಬೈನಲ್ಲಿ ಕಣಕ್ಕಿಳಿಯಲಿರುವ ಪಾಕ್ ಮತ್ತು ಭಾರತ ನಡುವಿನ ಹೈವೋಲ್ಟೇಜ್ ಪಂದ್ಯಕ್ಕೂ ಮುನ್ನವೇ ಇದೀಗ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಆಡಿರುವ ಮಾತುಗಳು ಸದ್ಯ ಭಾರತೀಯರ ಆಕ್ರೋಶಕ್ಕೆ ಕಾರಣವಾಗಿದೆ.
"ನಮಗೆ ಚಾಂಪಿಯನ್ಸ್ ಟ್ರೋಫಿ ಗೆಲುವು ಮಾತ್ರ ಮುಖ್ಯವಲ್ಲ. ಟೀಮ್ ಇಂಡಿಯಾವನ್ನು ಸೋಲಿಸುವುದೂ ಅತೀ ಮುಖ್ಯ" ಎಂದು ಷರೀಫ್ ಪಾಕ್ ತಂಡಕ್ಕೆ ಒತ್ತಿ ಹೇಳಿದ್ದಾರೆ. ಫೆ.07ರ ರಾತ್ರಿ ಲಾಹೋರ್‌ನಲ್ಲಿ ಗಡಾಫಿ ಕ್ರೀಡಾಂಗಣದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, "ನಮ್ಮ ಕ್ರಿಕೆಟ್ ತಂಡ ತುಂಬಾ ಉತ್ತಮವಾಗಿದೆ. ಇತ್ತೀಚಿನ ದಿನಗಳಲ್ಲಿ ಆಟಗಾರರು ಸಹ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಆದರೆ, ಈಗ ಅವರು ನಿಜವಾದ ಸವಾಲನ್ನು ಎದುರಿಸಲಿದ್ದಾರೆ. ನಾವು ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದರೆ ಸಾಕಾಗಲ್ಲ, ನಮ್ಮ ಹಳೆಯ ಎದುರಾಳಿ ಭಾರತ ವಿರುದ್ಧವೂ ಗೆಲ್ಲಬೇಕು. ಇಡೀ ದೇಶವೇ ನಿಮ್ಮ ಬೆನ್ನಿಗಿದೆ. ಶುಭ ಹಾರೈಕೆ ಜತೆಗಿದೆ" ಎಂದು ಷರೀಫ್ ಹೇಳಿದ್ದಾರೆ.
ಇನ್ನು ಪಾಕ್ ಪ್ರಧಾನಿ ಹೇಳಿಕೆಗೆ ತೀವ್ರ ಕಿಡಿಕಾರಿರುವ ಭಾರತೀಯ ಅಭಿಮಾನಿಗಳು, ನಿಮಗೆ ಅಷ್ಟು ಒಳ್ಳೆಯ ಅನುಭವವಿಲ್ಲ. ಮೊದಲು ಗೆದ್ದು, ಆ ನಂತರ ಮಾತನಾಡಿ' ಎಂದು ಜಾಲತಾಣಗಳಲ್ಲಿ ಪೋಸ್ಟ್ ಹಾಕುವ ಮೂಲಕ ತಿರುಗೇಟು ನೀಡಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ವ್ಯಾಪಕ ಟೀಕೆ, ಟ್ರೋಲ್ಗಳು ವ್ಯಕ್ತವಾಗುತ್ತಿವೆ, (ಏಜೆನ್ಸೀಸ್). ಇದನ್ನೂ ಓದಿ: ಕುದ್ರೋಳಿ ರಾಜಾರೋಷವಾಗಿ ಅಕ್ರಮ ಜಾನುವಾರು ವಧೆ – ರಾಶಿ ರಾಶಿ ರುಂಡ, ಚರ್ಮ ಪತ್ತೆ – ಅಕ್ರಮ ಕಟ್ಟಡ ತೆರವಿಗೆ ಮೇಯರ್ ಸೂಚನೆ
ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್ (ಉಪನಾಯಕ), ವಿರಾಟ್ ಕೊಹ್ಲಿ, ಕೆ.ಎಲ್. ರಾಹುಲ್, ರಿಷಬ್ ಪಂತ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಹಾರ್ದಿಕ್ ಪಾಂಡ್ಯ, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಅರ್ಷದೀಪ್ ಸಿಂಗ್.
ಪಾಕಿಸ್ತಾನ ತಂಡ: ಮೊಹಮ್ಮದ್ ರಿಜ್ವಾನ್ (ನಾಯಕ), ಬಾಬರ್ ಅಜಾಮ್, ಫಖರ್ ಜಮಾನ್, ಕಮ್ರಾನ್ ಗುಲಾಮ್, ಸೌದ್ ಶಕೀಲ್, ತಯ್ಯಬ್ ತಾಹಿರ್, ಫಹೀಮ್ ಅಶ್ರಫ್, ಖುಷ್ದಿಲ್ ಶಾ, ಸಲ್ಮಾನ್ ಅಲಿ ಅಘಾ, ಉಸ್ಮಾನ್ ಖಾನ್, ಅಬ್ರಾರ್ ಶಾಹಮ್, ಹರಿಸ್ ನಹ್ಮದ್, ಹರಿಸ್ ನಹ್ಮದ್, ಹರೀಸ್ ನಹ್ಮದ್.