VIDEO: ಚೇರ್​ನಿಂದ ಕೆಳಗೆ ಬಿದ್ದು ಟ್ರೋಲ್​ ಆದ ಪಾಕ್​ ಕ್ರಿಕೆಟಿಗ..!

imam ul haq
Published on

ಸೌಥಾಂಪ್ಟನ್​: ಪಾಕಿಸ್ತಾನ ಕ್ರಿಕೆಟಿಗರಿಗೂ ಟ್ರೋಲ್​ಗೂ ಅವಿನಾಭಾವ ಸಂಬಂಧ. ಅದು ಮೈದಾನದ ಒಳಗೆ ಇರಲಿ..ಹೊರಗೆ ಇರಲಿ ಏನಾದರೂ ಒಂದು ವಿಷಯದಲ್ಲಿ ಯಡವಟ್ಟು ಮಾಡಿಕೊಂಡು ಟ್ರೋಲ್​ ಆಗುವ ಮೂಲಕ ಸಾಮಾಜಿಕ ಜಾಲತಾಣಗಳಿಗೆ ಆಹಾರವಾಗುತ್ತಾರೆ. ಸೌಥಾಂಪ್ಟನ್​ನಲ್ಲಿ ನಡೆಯುತ್ತಿರುವ 3ನೇ ಹಾಗೂ ಅಂತಿಮ ಟೆಸ್ಟ್​ ಪಂದ್ಯದ 4ನೇ ದಿನದಾಟದ ವೇಳೆ ಪಾಕಿಸ್ತಾನದ ಇಮಾಮ್​ ಉಲ್​ ಹಕ್​ ಡಗ್​ಔಟ್​ನಲ್ಲಿ ಕುಂತಲ್ಲಿಯೇ ಚೇರ್​ ಮೇಲಿಂದ ಬೀಳುವ ಮೂಲಕ ಟ್ರೋಲ್​ ಆಗಿದ್ದಾರೆ. ಈ ವಿಡಿಯೋದಲ್ಲಿ ರೆಕಾರ್ಡ್​ ಆಗಿದ್ದು ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ..

ಫಾಲೋಆನ್​ ಅನುಭವಿಸಿರುವ ಪಾಕಿಸ್ತಾನ ತಂಡ ಇನಿಂಗ್ಸ್​ ಸೋಲು ತಪ್ಪಿಸಿಕೊಳ್ಳಲು ಹೋರಾಡುತ್ತಿದ್ದರೆ, ಈತ್ತ ಮೈದಾನದಲ್ಲಿ ಹೊರಗೆ ತುಳಿತಿದ್ದ ಇಮಾಮ್​ ಚೇರ್​ನಿಂದ ಕುಸಿದು ಬಿದ್ದು ಸುದ್ದಿಯಾಗಿದ್ದಾರೆ. ಸಹ-ಆಟಗಾರರೊಂದಿಗೆ ಪೆವಿಲಿಯನ್​ ಬದಲಿಗೆ ಡಗ್​ಔಟ್​ನಲ್ಲಿ ಕುಳಿತಿದ್ದ ಇಮಾಮ್​, ದಿಢೀರ್​ ಅನೇ ಚೇರ್​ ಸಮೇತ ಕಳಗೆ ಬಿದ್ದಿದ್ದಾರೆ. ಈ ವೇಳೆ ಮಾಜಿ ನಾಯಕ ಸಫ್ರಾರ್ಜ್​ ಅಹಮದ್​ ಸೇರಿದಂತೆ ಕೆಲ ಆಟಗಾರರು ಇಮಾಮ್​ ಅವರನ್ನು ನೋಡಿ ಮುಸಿ ಮುಸಿ ನಕ್ಕಿದ್ದಾರೆ. ಇದು ವಿಡಿಯೋದಲ್ಲಿ ಸೆರೆಯಾಗಿದೆ. ಬಳಿಕ ಎದ್ದು ಕುಂತಿರುವ ಇಮಾಮ್​, ತಮ್ಮಷ್ಟಕ್ಕೆ ತಾವೇ ನಕ್ಕಿದ್ದಾರೆ.

ಈಗಾಗಲೇ 3 ಪಂದ್ಯಗಳ ಸರಣಿಯಲ್ಲಿ 0-1 ರಿಂದ ಹಿನ್ನಡೆ ಅನುಭವಿಸಿರುವ ಪಾಕಿಸ್ತಾನ ತಂಡ 3ನೇ ಟೆಸ್ಟ್​ ಪಂದ್ಯದಲ್ಲೂ ಸೋಲಿನಂಚಿನಲ್ಲಿದೆ. ಇಂಗ್ಲೆಂಡ್​ ಮೊದಲ ಇನಿಂಗ್ಸ್​ 8 ವಿಕೆಟ್​ಗೆ 583 ರನ್​ ಗಳಿಸಿ ಡಿಕ್ಲೇರ್​ ಮಾಡಿಕೊಂಡಿದ್ದಾರೆ. ಪಾಕಿಸ್ತಾನ 273 ರನ್​ಗಳಿಗೆ ಸರ್ವಪತನ ಕಂಡಿತು. ಇದರಿಂದ ಫಾಲೋಅನ್​ ಅನುಭವಿಸಿರುವ ಪಾಕಿಸ್ತಾನ 2ನೇ ಸರದಿ ಬ್ಯಾಟಿಂಗ್​ ಆರಂಭಿಸಿದ್ದು, 2 ವಿಕೆಟ್​ಗೆ 100 ರನ್​ ಕಲೆಹಾಕಿದೆ. ಇನಿಂಗ್ಸ್​ ಸೋಲು ತಪ್ಪಿಸಿಕೊಳ್ಳಲು ಇನ್ನು 210 ರನ್​ ಕಲೆಹಾಕಬೇಕಿತ್ತು. ಮಂಗಳವಾರ ಕಡೇ ದಿನದಾಟವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net