ಅಂದು ಟೀಮ್​ ಇಂಡಿಯಾ ಕೊಟ್ಟ ಹೊಡೆತಕ್ಕೆ ಇನ್ನು ಸುಧಾರಿಸಿಕೊಳ್ಳದ ಪಾಕಿಸ್ತಾನ! ವಿರಾಟ್​ ಕೊಹ್ಲಿಯೇ ದುಸ್ವಪ್ನ

Pakistan
Published on

ನವದೆಹಲಿ: ಪಾಕಿಸ್ತಾನದ ಕ್ರಿಕೆಟ್‌ ಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ಆ ತಂಡ ಸರಣಿ ಗೆದ್ದು ಸುಮಾರು 3 ವರ್ಷಗಳಾಗಿವೆ ಎಂದರೆ ನೀವು ನಂಬಬಹುದೇ? ಆದರೆ ಇದು ಅಕ್ಷರಶಃ ಸತ್ಯ. ಬಾಬರ್ ಅಜಮ್, ಮೊಹಮ್ಮದ್ ರಿಜ್ವಾನ್, ನಸೀಮ್ ಶಾ ಮತ್ತು ಶಾಹೀನ್ ಶಾ ಅವರಂತಹ ಘಟಾನುಘಟಿ ಆಟಗಾರರನ್ನು ಹೊಂದಿರುವ ಪಾಕಿಸ್ತಾನ ಕೇವಲ ಕಾಗದದ ಸಿಂಹ ಮೇಲಿನ ಸಿಂಹವಷ್ಟೇ. ಪಾಕ್ ಕ್ರಿಕೆಟ್ ಪತನದತ್ತ ಸಾಗುತ್ತಿದ್ದು, ಮತ್ತೆ ಪುಟಿದೇಳದ ಸ್ಥಿತಿ ತಲುಪುತ್ತಿದೆ. ಪಾಕಿಸ್ತಾನದ ಈ ಪರಿಸ್ಥಿತಿಗೆ ಭಾರತವೇ ಕಾರಣ ಎಂದು ನಿಮಗೆ ತಿಳಿದಿದೆಯೇ? ಕಳೆದ ವರ್ಷ ಟೀಮ್​ ಇಂಡಿಯಾ ಕೊಟ್ಟ ಹೊಡೆತಕ್ಕೆ ಪಾಕಿಸ್ತಾನದ ಪತನದತ್ತ ಸಮೀಪಿಸಿದೆ.

ವಾಸಿಂ ಅಕ್ರಮ್, ಸೈಯದ್ ಅನ್ವರ್, ಇಮ್ರಾನ್ ಖಾನ್​ರಂತಹ ದಿಗ್ಗಜ ಕ್ರಿಕೆಟಿಗರ ಆಳ್ವಿಕೆಯಲ್ಲಿ ಪಾಕಿಸ್ತಾನ ಕ್ರಿಕೆಟ್​ನಲ್ಲಿ ಮಿಂಚಿತ್ತು. ಆದರೆ, ಕಳೆದ ಮೂರು ವರ್ಷಗಳಲ್ಲಿ ಪಾಕಿಸ್ತಾನ ಕ್ರಿಕೆಟ್ ಅವನತಿಯತ್ತ ಸಾಗುತ್ತಿದೆ. ಈ ಮೂರು ವರ್ಷಗಳಲ್ಲಿ ಪಾಕಿಸ್ತಾನ ಒಂದೇ ಒಂದು ಸರಣಿಯನ್ನು ಗೆದ್ದಿಲ್ಲ ಮತ್ತು ಪಾಕಿಸ್ತಾನದ ಸೋಲಿಗೆ ಭಾರತದ ಆ ಒಂದು ಹೊಡೆತವೇ ಕಾರಣ. ಆ ಪಂದ್ಯದಲ್ಲಿ ಭಾರತದ ವಿರುದ್ಧ ಸೋತ ದಿನದಿಂದಲೇ ಪಾಕಿಸ್ತಾನದ ಪತನ ಆರಂಭವಾಯಿತು. 2023ರಲ್ಲಿ ಭಾರತದಲ್ಲಿ ನಡೆದ ಏಷ್ಯಾ ಕಪ್ ಸೂಪರ್ 4 ಪಂದ್ಯದ ಭಾಗವಾಗಿ ಪಾಕಿಸ್ತಾನದ ವಿರುದ್ಧ ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ ಟೀಮ್​ ಇಂಡಿಯಾ 228 ರನ್‌ಗಳಿಂದ ಗೆಲುವು ಸಾಧಿಸಿತು.

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ಕೇವಲ 2 ವಿಕೆಟ್ ಕಳೆದುಕೊಂಡು 356 ರನ್​ಗಳ ಬೃಹತ್ ಮೊತ್ತ ಪೇರಿಸಿತು. ವಿರಾಟ್ ಕೊಹ್ಲಿ ಔಟಾಗದೆ 122 ಮತ್ತು ಕೆ.ಎಲ್. ರಾಹುಲ್ 111 ಶತಕಗಳನ್ನು ಗಳಿಸಿದರು. ನಂತರ ಬ್ಯಾಟಿಂಗ್‌ಗೆ ಇಳಿದ ಪಾಕಿಸ್ತಾನ 32 ಓವರ್‌ಗಳಲ್ಲಿ 8 ವಿಕೆಟ್‌ಗೆ 128 ರನ್ ಗಳಿಸಿತು (ಡಕ್‌ವರ್ತ್ ಲೂಯಿಸ್ ಪ್ರಕಾರ).

ಈ ಪಂದ್ಯದಲ್ಲಿ ಪಾಕಿಸ್ತಾನ ಸೋತಾಗ ಪಾಕಿಸ್ತಾನದ ಅವನತಿ ಶುರುವಾಯಿತು ಎಂದೇ ಹೇಳಬೇಕು. ಇತ್ತೀಚೆಗಷ್ಟೇ ಮುಕ್ತಾಯಗೊಂಡ ಏಷ್ಯಾಕಪ್‌ನ ಸೂಪರ್ 4ನಲ್ಲಿಯೂ ಪಾಕ್​ ಮನೆಗೆ ತೆರಳಿತು. ಇದಲ್ಲದೇ 2023ರ ಏಕದಿನ ವಿಶ್ವಕಪ್ ಟೂರ್ನಿಯಿಂದ ಲೀಗ್ ಹಂತದಲ್ಲೇ ಹೊರಬಿದ್ದಿತು. ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 3-0 ಅಂತರದಲ್ಲಿ ಸೋತಿತು. ಕೆಲ ದಿನಗಳ ಹಿಂದೆ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯನ್ನೂ ಕಳೆದುಕೊಂಡಿತ್ತು.

ಇದಿಷ್ಟೇ ಅಲ್ಲದೆ, ಟಿ20 ವಿಶ್ವಕಪ್​ನಲ್ಲಿ ಐರ್ಲೆಂಡ್ ಹಾಗೂ ಯುಎಇ ಕೈಯಲ್ಲಿ ಹೀನಾಯವಾಗಿ ಸೋತಿತು. ಇತ್ತೀಚೆಗಷ್ಟೇ ಬಾಂಗ್ಲಾದೇಶ ವಿರುದ್ಧ ತನ್ನದೇ ನೆಲದಲ್ಲಿ ಎರಡು ಟೆಸ್ಟ್‌ಗಳಲ್ಲಿ ಸೋಲನುಭವಿಸುವ ಮೂಲಕ ಪಾಕಿಸ್ತಾನ ತೀವ್ರ ಟೀಕೆಗೆ ಗುರಿಯಾಯಿತು. ಕಳೆದ ವರ್ಷ ಇದೇ ದಿನಗಳಲ್ಲಿ ಟೀಮ್​ ಇಂಡಿಯಾ ಎದುರಿಸಿದ ಹೊಡೆತದಿಂದ ಪಾಕಿಸ್ತಾನ ಇನ್ನೂ ಚೇತರಿಸಿಕೊಂಡಿಲ್ಲ ಎಂಬುದು ಗಮನಾರ್ಹ. ಈ ಅಂಕಿ-ಅಂಶಗಳನ್ನು ನೋಡಿದರೆ ಪಾಕಿಸ್ತಾನ ಕ್ರಿಕೆಟ್ ಪತನದ ಹಿಂದೆ ಟೀಮ್​ ಇಂಡಿಯಾ ಇದೆ ಎಂದು ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net