ಈ ತಪ್ಪಿಗೆ ಇಡೀ ದೇಶದ ಜನತೆ ಮುಂದೆ ಕ್ಷಮೆಯಾಚಿಸುವೆ: ಪಾಕ್​ ಕ್ರಿಕೆಟಿಗ ಶಾನ್ ಮಸೂದ್​ ಭಾವುಕ

ವಿಜಯವಾಣಿ (16)
Published on

ರಾವಲ್​ಪಿಂಡಿ: ಎರಡು ಪಂದ್ಯಗಳ ಮೊದಲ ಟೆಸ್ಟ್​ ಸರಣಿಯಲ್ಲಿ ಬಾಂಗ್ಲಾದೇಶ ವಿರುದ್ಧ 10 ವಿಕೆಟ್​ಗಳ ಅಂತರದಿಂದ ಹೀನಾಯವಾಗಿ ಸೋತ ಪಾಕಿಸ್ತಾನ, ತಮ್ಮನ್ನು ನಿರಂತರವಾಗಿ ಬೆಂಬಲಿಸಿಕೊಂಡು ಬಂದ ಕ್ರಿಕೆಟ್ ಅಭಿಮಾನಿಗಳಿಗೆ ಭಾರೀ ನಿರಾಸೆ ಮೂಡಿಸಿದೆ. ಪಾಕ್ ವಿರುದ್ಧ ಚೊಚ್ಚಲ ಟೆಸ್ಟ್ ಪಂದ್ಯ ಗೆದ್ದ ಬಾಂಗ್ಲಾ, ಈ ಹಿಂದೆ ನಡೆದ 13 ಮ್ಯಾಚ್​ಗಳ ಪೈಕಿ 12 ಬಾರಿ ಸೋಲುಂಡಿದ್ದರೆ, ಒಂದರಲ್ಲಿ ಡ್ರಾ ಕಂಡಿತ್ತು. ಆದ್ರೆ, ಇದೇ ಮೊದಲ ಬಾರಿಗೆ ಪಾಕಿಸ್ತಾನ ತಂಡಕ್ಕೆ ಬೆವರಿಳಿಸಿದ್ದು, ಐತಿಹಾಸಿಕ ಗೆಲುವು ದಾಖಲಿಸಿದೆ.

ಇನ್ನು ಬಾಂಗ್ಲಾ ವಿರುದ್ಧ 10 ವಿಕೆಟ್​ಗಳ ಹೀನಾಯ ಸೋಲನ್ನು ನೆನೆದು ಬೇಸರ ವ್ಯಕ್ತಪಡಿಸಿದ ಕ್ಯಾಪ್ಟನ್ ಶಾನ್​ ಮಸೂದ್​, "ನಮ್ಮ ಇಡೀ ದೇಶದ ಜನತೆಗೆ ಕ್ಷಮೆಯಾಚಿಸಲು ಬಯಸುವೆ. ಮುಂದಿನ ಪಂದ್ಯಗಳಲ್ಲಿ ಈ ರೀತಿ ಕಳಪೆಯಾಗಿ ಆಡುವುದಿಲ್ಲ. ಉತ್ತಮ ಕಮ್​ಬ್ಯಾಕ್​ ಮಾಡ್ತೇವೆ. ನಾವು ಮಾಡಿದ ತಪ್ಪುಗಳನ್ನು ತಿದ್ದಿಕೊಳ್ಳಬೇಕು ಮತ್ತು ಅವುಗಳ ಮೇಲೆ ಹೆಚ್ಚು ಕೆಲಸ ಮಾಡಬೇಕು" ಎಂದು ಹೇಳಿದರು.

ಈ ಹಿಂದೆ ಟೆಸ್ಟ್ ಪಂದ್ಯ ನಡೆಯುವುದಕ್ಕೂ ಮುನ್ನ ತಮ್ಮ ತಂಡದ ವಿರುದ್ಧ ಕೇಳಿಬಂದ ಮ್ಯಾಚ್ ಫಿಕ್ಸಿಂಗ್ ಆರೋಪವನ್ನು ಸುತಾರಾಮ್ ಒಪ್ಪದ ಕ್ಯಾಪ್ಟನ್ ಶಾನ್​, "ನಮ್ಮಲ್ಲಿ ಯಾರು ಆ ರೀತಿಯಿಲ್ಲ. ಪ್ರತಿಯೊಬ್ಬರು ಕೂಡ ತಮ್ಮ ಟೀಮ್ ಗೆಲ್ಲಲಿ ಎಂದೇ ಮೈದಾನದಲ್ಲಿ ಶ್ರಮಿಸುತ್ತಾರೆಯೇ ಹೊರತು ಇಂತಹ ಮೋಸದಾಟದಲ್ಲಿ ಕೈಜೋಡಿಸುವುದಿಲ್ಲ" ಎಂದು ಫಿಕ್ಸಿಂಗ್ ಆರೋಪವನ್ನು ತಳ್ಳಿಹಾಕಿದ್ದರು,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net