ಭಾರತ ವಿರುದ್ಧ ಗೆದ್ದರೆ ಡೇಟಿಂಗ್​ಗೆ ಬರುವೆ; ಬಾಂಗ್ಲಾ ಕ್ರಿಕೆಟಿಗರಿಗೆ ಪಾಕ್​ ನಟಿ ಆಫರ್​!

pan shin web
Published on

ಲಾಹೋರ್​: ಭಾರತ ವಿರುದ್ಧ ವಿಶ್ವಕಪ್​ನಲ್ಲಿ ಕಂಡ ಹೀನಾಯ ಸೋಲಿನಿಂದಾಗಿ ಪಾಕಿಸ್ತಾನ ತಂಡ ಕಂಗೆಟ್ಟಿದೆ. ಅತ್ತ ಪಾಕ್​ ತಂಡದ ಅಭಿಮಾನಿಗಳೂ ಸೋಲಿನಿಂದ ವಿಚಲಿತರಾಗಿದ್ದಾರೆ. ಇದರ ನಡುವೆ ಭಾರತ ವಿರುದ್ಧದ ಸೋಲಿಗೆ ಸೇಡು ತೀರಿಸಿಕೊಳ್ಳಲು ಪಾಕ್​ ನಟಿಯೊಬ್ಬಳು ವಿಚಿತ್ರ ಹಾದಿ ಹಿಡಿದಿದ್ದಾಳೆ!

ಭಾರತ ವಿರುದ್ಧ ಸೇಡು ತೀರಿಸಿಕೊಳ್ಳಲು ಬಾಂಗ್ಲಾದೇಶ ತಂಡದ ಮೊರೆ ಹೋಗಿರುವ ಪಾಕ್​ ನಟಿ ಸೆಹರ್​ ಶಿನ್ವಾರಿ, ಭಾರತ ತಂಡವನ್ನು ಸೋಲಿಸಿದರೆ ಬಾಂಗ್ಲಾದೇಶ ತಂಡದ ಆಟಗಾರರೊಂದಿಗೆ ಡಿನ್ನರ್​ ಡೇಟ್​ಗೆ ಬರಲು ಸಿದ್ಧಳಿರುವೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾಳೆ.

"ಇನ್​ಶಾಅಲ್ಲಾ, ನನ್ನ ಬಂಗಾಲಿ ಬಂದು ಮುಂದಿನ ಪಂದ್ಯದಲ್ಲಿ ಸೇಡು ತೀರಿಸಿಕೊಳ್ಳಲಿ. ನಾನಾಗ ಢಾಕಾಗೆ ತೆರಳಿ ಬಂಗಾಲಿ ಹುಡುಗರೊಂದಿಗೆ ಡಿನ್ನರ್​ ಡೇಟ್​ಗೆ ತೆರಳುವೆ' ಎಂದು ಶಿನ್ವಾರಿ ಎಕ್ಸ್​ನಲ್ಲಿ ಬರೆದುಕೊಂಡಿದ್ದಾಳೆ. ಈ ನಡುವೆ ಭಾರತ ತಂಡ ವಿಶ್ವಕಪ್​ನಲ್ಲಿ ಸೆಮಿಫೈನಲ್​ನಲ್ಲೇ ಹೊರಬೀಳಲಿದೆ ಎಂದು ಭವಿಷ್ಯ ನುಡಿದಿರುವ ಶಿನ್ವಾರಿ, ಪಾಕಿಸ್ತಾನ ಮತ್ತು ನ್ಯೂಜಿಲೆಂಡ್​ ತಂಡಗಳು ಫೈನಲ್​ನಲ್ಲಿ ಆಡಲಿವೆ ಎಂದಿದ್ದಾಳೆ. ಅಲ್ಲದೆ, ಪಾಕ್​ ತಂಡ ವಿಶ್ವಕಪ್​ ಎತ್ತಿಹಿಡಿಯುವ ಕನಸನ್ನೂ ಹಂಚಿಕೊಂಡಿದ್ದಾಳೆ.

ಸೆಹರ್​ ಶಿನ್ವಾರಿ ಈ ಮುನ್ನ ಭಾರತ ವಿರುದ್ಧದ ಪಂದ್ಯಕ್ಕೆ ಮುನ್ನ ಪಾಕ್​ ತಂಡ ಗೆಲುವು ದಾಖಲಿಸಿದರೆ, ಭಾರತ ಮತ್ತು ಬಿಜೆಪಿ ಬಗ್ಗೆ ಇನ್ನೆಂದೂ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಹಾಕುವುದಿಲ್ಲ ಎಂದು ಬರೆದುಕೊಂಡಿದ್ದಳು. ಆದರೆ ಪಂದ್ಯದಲ್ಲಿ ಭಾರತ ತಂಡ ಭರ್ಜರಿ ಗೆಲುವು ದಾಖಲಿಸಿದರೂ ಆಕೆ ತನ್ನ ಮಾತು ಉಳಿಸಿಕೊಂಡಿಲ್ಲ ಎಂಬುದು ಗಮನಾರ್ಹ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net