ಮಹಿಳೆಯರ ಫಿಫಾ ವಿಶ್ವಕಪ್​ನಲ್ಲಿ ಗೋಲು ಸಿಡಿಸಿದ ನಂತರ ಜೆರ್ಸಿ ಬಿಚ್ಚಿ ಸಂಭ್ರಮಿಸಿದ ಆಟಗಾರ್ತಿ!

jersy web
Published on

ಬ್ರಿಸ್ಬೇನ್​: ಆಸ್ಟ್ರೆಲಿಯಾ ಮತ್ತು ನ್ಯೂಜಿಲೆಂಡ್​ ಜಂಟಿ ಆತಿಥ್ಯದಲ್ಲಿ ನಡೆಯುತ್ತಿರುವ ಮಹಿಳೆಯರ ಫುಟ್​ಬಾಲ್​ ವಿಶ್ವಕಪ್​ನಲ್ಲಿ ಆಸ್ಟ್ರೆಲಿಯಾ ತಂಡ ಗುರುವಾರ ಆಘಾತಕಾರಿ ಸೋಲು ಅನುಭವಿಸಿತು. ಆಸ್ಟ್ರೆಲಿಯಾ ವಿರುದ್ಧ ಫಾರ್ವರ್ಡ್​ ಆಟಗಾರ್ತಿ ಅಸಿಸಾಟ್​ ಒಶೋಲಾ ನೈಜೀರಿಯಾ ತಂಡದ ಪರ ಗೋಲು ದಾಖಲಿಸಿ 3-2ರಿಂದ ಅಚ್ಚರಿಯ ಗೆಲುವಿಗೆ ನೆರವಾದರು. ಬಾರ್ಸಿಲೋನಾ ಮಹಿಳಾ ತಂಡದ ಆಟಗಾರ್ತಿಯೂ ಆಗಿರುವ ಒಶೋಲಾ ಗೆಲುವಿನ ಗೋಲು ಸಿಡಿಸಿದ ಬಳಿಕ ಜೆರ್ಸಿ ಬಿಚ್ಚಿ ಸಂಭ್ರಮಿಸುವ ಮೂಲಕ ಇನ್ನಷ್ಟು ಸುದ್ದಿಯಾದರು.

ಒಶೋಲಾ ಮಹಿಳೆಯರ ವಿಶ್ವಕಪ್​ನಲ್ಲಿ ದಾಖಲಿಸಿದ ಚೊಚ್ಚಲ ಗೋಲು ಕೂಡ ಇದಾಗಿದೆ. ಹೀಗಾಗಿ ಗೋಲು ದಾಖಲಿಸಿದ ಬಳಿಕ ಅವರಿಗೆ ಸಂಭ್ರಮವನ್ನು ಮುಚ್ಚಿಡಲಾಗಲಿಲ್ಲ. ಹೀಗಾಗಿ ಜೆರ್ಸಿಯನ್ನು ಬಿಚ್ಚಿ ವಿಶಿಷ್ಟವಾಗಿ ಸಂಭ್ರಮಾಚರಣೆ ನಡೆಸಿದರು.

ಪಂದ್ಯದ ಆರಂಭದಲ್ಲಿ ಕಣಕ್ಕಿಳಿಯದ 28 ವರ್ಷದ ಒಶೋಲಾ, ಪಂದ್ಯದ ನಡುವೆ ಬದಲಿ ಆಟಗಾರ್ತಿಯಾಗಿ ಆಡುವ ಅವಕಾಶ ಪಡೆದಿದ್ದರು. ಜೆರ್ಸಿ ಬಿಚ್ಚಿ ಸಂಭ್ರಮಿಸುವ ಮೂಲಕ ಬರೀ ಸ್ಪೋರ್ಟ್ಸ್​ ಬ್ರಾನಲ್ಲಿ ಮೈದಾನದಲ್ಲಿ ಕಾಣಿಸಿಕೊಂಡ ಕಾರಣಕ್ಕಾಗಿ ಮ್ಯಾಚ್​ ರೆಫ್ರಿ ಕೂಡಲೆ ಒಶೋಲಾಗೆ ಹಳದಿ ಕಾರ್ಡ್​ ಕೂಡ ನೀಡಿದರು. ಒಶೋಲಾ ಜೆರ್ಸಿ ಬಿಚ್ಚಿ ಸಂಭ್ರಮಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net