ಪ್ಯಾರಿಸ್​ ಪ್ಯಾರಾಲಿಂಪಿಕ್ಸ್​ನಲ್ಲಿ ಒಲಿಂಪಿಕ್ಸ್​ ರಿಂಗ್​ ಬ್ಯಾನ್​! ಹೀಗಿದೆ ಕಾರಣ...

web para
Published on

ಪ್ಯಾರಿಸ್​: ಒಲಿಂಪಿಕ್ಸ್​ ರಿಂಗ್​ನ ಟ್ಯಾಟೂ ಹಾಕಿಸಿಕೊಂಡಿದ್ದ ಅನೇಕ ಕ್ರೀಡಾಪಟುಗಳು ಪ್ಯಾರಿಸ್​ ಒಲಿಂಪಿಕ್ಸ್​ ವೇಳೆ ಗೆಲುವಿನ ಸಮಯದಲ್ಲಿ ಅದರೊಂದಿಗೆ ಸಂಭ್ರಮಿಸಿದ್ದರು. ಆದರೆ ಮುಂಬರುವ ಪ್ಯಾರಿಸ್​ ಪ್ಯಾರಾಲಿಂಪಿಕ್ಸ್​ ವೇಳೆ ಕ್ರೀಡಾಪಟುಗಳು ಅದೇ ರೀತಿ ಒಲಿಂಪಿಕ್ಸ್​ ರಿಂಗ್​ನ ಟ್ಯಾಟೂನೊಂದಿಗೆ ಸಂಭ್ರಮಿಸುವುದು ಕಂಡು ಬಂದರೆ ಸ್ಪರ್ಧೆಯಿಂದಲೇ ಅನರ್ಹಗೊಳ್ಳಲಿದ್ದಾರೆ! ಹೌದು, ಅಂತಾರಾಷ್ಟ್ರೀಯ ಪ್ಯಾರಾಲಿಂಪಿಕ್​ ಸಮಿತಿಯ (ಐಪಿಸಿ) ಕಟ್ಟುನಿಟ್ಟಿನ ನಿಯಮಾವಳಿ ಪ್ರಕಾರ, ಒಲಿಂಪಿಕ್ಸ್​ ರಿಂಗ್​ ಸಹಿತ ಯಾವುದೇ ಟ್ಯಾಟೂವನ್ನು ಕ್ರೀಡಾಪಟುಗಳು ಪ್ರದರ್ಶಿಸಿದರೆ ಕೂಟದಿಂದ ನಿಷೇಧಕ್ಕೆ ಒಳಗಾಗಲಿದ್ದಾರೆ.

ಅಂತಾರಾಷ್ಟ್ರೀಯ ಒಲಿಂಪಿಕ್​ ಸಮಿತಿಗಿಂತ (ಐಒಸಿ) ಭಿನ್ನವಾದ ನಿಯಮಾವಳಿಯನ್ನು ಐಪಿಸಿ ಹೊಂದಿದೆ. ದೇಹದ ಮೇಲೆ ಪ್ರದರ್ಶಿಸಲಾಗುವ ಜಾಹೀರಾತುಗಳ ವಿರುದ್ಧ (ಬಾಡಿ ಅಡ್ವಟೈಸ್​ಮೆಂಟ್​) ಐಪಿಸಿ ಕಠಿಣ ನಿಯಮಾವಳಿ ಹೊಂದಿದೆ. ಅದರನ್ವಯ ದೇಹದ ಮೇಲಿನ ಒಲಿಂಪಿಕ್ಸ್​ ರಿಂಗ್​ನ ಟ್ಯಾಟೂ ಪ್ರದರ್ಶನ ಕೂಡ ನಿಷಿದ್ಧವಾಗಿದೆ. ಈ ವಿಷಯದಲ್ಲಿ ಐಪಿಸಿ ಕಟ್ಟುನಿಟ್ಟಾಗಿದ್ದು, ಟ್ಯಾಟೂ ಪ್ರದರ್ಶನ ಸ್ಪರ್ಧೆಯ ಅವಕಾಶವನ್ನೇ ಕಸಿದುಕೊಳ್ಳಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net