ಸಾಂಪ್ರದಾಯಿಕ ರೀತಿ 2020ರ ಟೋಕಿಯೋ ಒಲಿಂಪಿಕ್ಸ್​ನ ಕ್ರೀಡಾಜ್ಯೋತಿ

Olympik
Published on

ವಿಶ್ವದಾದ್ಯಂತ ಕರೊನಾ ವೈರಸ್ ಭೀತಿ ವ್ಯಾಪಕವಾಗಿರುವ ನಡುವೆ ಗುರುವಾರ ಗ್ರೀಸ್​ನ ಒಲಿಂಪಿಯಾದಲ್ಲಿ 2020ರ ಟೋಕಿಯೋ ಒಲಿಂಪಿಕ್ಸ್​ನ ಕ್ರೀಡಾಜ್ಯೋತಿಯನ್ನು ಸಾಂಪ್ರದಾಯಿಕ ರೀತಿಯಲ್ಲಿ ಸೂರ್ಯಕಿರಣಗಳಿಂದ ಬೆಳಗಿಸಲಾಗಿದೆ.

ಐಒಸಿಯಿಂದ ಮಾನ್ಯತೆ ಪಡೆದ 100 ಪತ್ರಕರ್ತರು ಮಾತ್ರವೇ ಸಮಾರಂಭದಲ್ಲಿ ಹಾಜರಿದ್ದರು. ಗ್ರೀಸ್​ನ ಒಲಿಂಪಿಕ್ ಶೂಟಿಂಗ್ ಚಾಂಪಿಯನ್ ಅನ್ನಾ ಕೊರಾಕಾಕಿ 2020 ಒಲಿಂಪಿಕ್ ಕ್ರೀಡಾಜ್ಯೋತಿ ಹಿಡಿದ ಮೊದಲಿಗರೆನಿಸಿದರು. 7 ದಿನಗಳ ಕಾಲ ಕ್ರೀಡಾಜ್ಯೋತಿ ಗ್ರೀಸ್​ನಲ್ಲಿ ಸಂಚರಿಸಲಿದ್ದು, ಬಳಿಕ ಆತಿಥೇಯ ಜಪಾನ್​ಗೆ ಹಸ್ತಾಂತರಗೊಳ್ಳಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net