ಹಾರ್ದಿಕ್​ ಪಾಂಡ್ಯರನ್ನು "ಕಾಗೆ" ಎಂದು ಕರೆದ ರೋಹಿತ್​ ಶರ್ಮಾ; ವಿಡಿಯೋ ವೈರಲ್

Rohit Pandya
Published on

ಮುಂಬೈ: 17ನೇ ಐಪಿಎಲ್​ ಆರಂಭಕ್ಕೆ ದಿನಗಣನೆ ಆರಂಭವಾಗಿದ್ದು, ತಂಡಗಳು ಕಠಿಣ ಆಭ್ಯಾಸದಲ್ಲಿ ತೊಡಗಿವೆ. ಆದರೆ, ಮುಂಬೈ ಇಂಡಿಯನ್ಸ್​ನಲ್ಲಿ ನಾಯಕತ್ವದ ವಿಚಾರವಾಗಿ ಶುರುವಾದ ಕಿತ್ತಾಟ ಸದ್ಯಕ್ಕೆ ನಿಲ್ಲುವಂತೆ ಕಾಣುತ್ತಿಲ್ಲ. ಐಪಿಎಲ್​ ಆರಂಭಕ್ಕೂ ಮುನ್ನ ನಾಯಕತ್ವ ಸೇರಿದಂತೆ ತಂಡದಲ್ಲಿನ ಬಿಕ್ಕಟ್ಟಿಗೆ ಸದಾ ಸುದ್ದಿಯಾಗುತ್ತಿರುವ ಮುಂಬೈ ಇಂಡಿಯನ್ಸ್​ ಇದೀಗ ಮತ್ತೊಂದು ವಿಚಾರಕ್ಕೆ ಸದ್ದು ಮಾಡಿದೆ.

ನೂತನ ನಾಯಕ ಹಾರ್ದಿಕ್​ ಪಾಂಡ್ಯರನ್ನು ಮಾಜಿ ಕ್ಯಾಪ್ಟನ್​ ರೋಹಿತ್​ ಶರ್ಮಾ ಕಾಗೆ (ಹಿಂದಿಯಲ್ಲಿ ಕೌವಾ) ಎಂದು ಕರೆದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಪರ-ವಿರೋಧದ ಚರ್ಚೆಗೆ ಆಸ್ಪದ ಮಾಡಿಕೊಟ್ಟಿದೆ.

2020ರ ಕೋವಿಡ್​ ಲಾಕ್​ಡೌನ್​ ಸಮಯದಲ್ಲಿ ಮಾಜಿ ಕ್ರಿಕೆಟಿಗ ಹರ್ಭಜನ್​ ಸಿಂಗ್​ ಜೊತೆಗಿನ ವಿಡಿಯೋ ಸಂಭಾಷಣೆ ಒಂದರಲ್ಲಿ ರೋಹಿತ್​ ಶರ್ಮಾ ಈ ಬಗ್ಗೆ ಮಾತನಾಡಿದ್ದು, ನಾಲ್ಕು ವರ್ಷಗಳ ನಂತರ ಈ ವಿಡಿಯೋ ವೈರಲ್​ ಆಗಿದೆ. ಹಾರ್ದಿಕ್​ನನ್ನು ಯಾರಾದದೂ ಕಾಗೆ ಎಂದು ಕರೆದರೆ ಆತನಿಗೆ ಅದು ಇಷ್ಟವಾಗುವುದಿಲ್ಲ. ಆತ ತಕ್ಷಣವೇ ಸಿಟ್ಟನಿಂದ ಪ್ರತಿಕ್ರಿಯೆ ನೀಡುತ್ತಾನೆ ಎಂದು ರೋಹಿತ್​ ಶರ್ಮಾ ಹೇಳಿರುವ ವಿಡಿಯೋ ಸಖತ್​ ಸೌಂಡ್​ ಮಾಡುತ್ತಿದೆ.

ಈಗಾಗಲೇ ನಾಯಕತ್ವ ಬಿಕ್ಕಟ್ಟು ಸೇರಿದಂತೆ ಹಲವು ವಿಚಾರಗಳಿಗೆ ಈಗಾಗಲೇ ಸದ್ದು ಮಾಡಿರುವ ಮುಂಬೈ ಇಂಡಿಯನ್ಸ್ ತಂಡಕ್ಕೆ ಈಗ ಹೊಸ ತಲೆ ನೋವೊಂದು ಪರಿಣಮಿಸಿದೆ. ಇದರ ಬೆನ್ನಲ್ಲೇ ಹಾರ್ದಿಕ್​ ಹಾಗೂ ರೋಹಿತ್​ ಅಭಿಮಾನಿಗಳ ನಡುವಿನ ಫ್ಯಾನ್​ ವಾರ್​ ತಾರಕಕ್ಕೇರಿದ್ದು, ಮುಂಬರುವ ಐಪಿಎಲ್ ಋತುವಿನಲ್ಲಿ ಈ ಇಬ್ಬರು ಆಟಗಾರರ ನಡುವಿನ ಕೆಮಿಸ್ಟ್ರಿ ದೊಡ್ಡ ಚರ್ಚೆಯ ವಿಷಯವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net