ಚೆನ್ನೈ, ಮುಂಬೈ ಅಲ್ಲವೇ ಅಲ್ಲ…Ashwin​ ಪ್ರಕಾರ ಐಪಿಎಲ್​​ಗಾಗಿ ದೇವರು ಗಿಫ್ಟ್​ ಕೊಟ್ಟ ಫ್ರಾಂಚೈಸಿ ಇದೇ ನೋಡಿ

R Ashwin
Published on

ಬೆಂಗಳೂರು: 18ನೇ ಆವೃತ್ತಿಯ ಐಪಿಎಲ್​ (IPL) ಆರಂಭವಾಗುವುದಕ್ಕೆ ದಿನಗಳೇ ಬಾಕಿ ಉಳಿದಿದ್ದು, ಈಗಾಗಲೇ ಅದಕ್ಕೆ ಸಂಬಂಧಿಸಿದ ಸುದ್ದಿ ಕ್ರೀಡಾ ವಲಯದಲ್ಲಿ ಸಖತ್​ ಸೌಂಡ್​ ಮಾಡುತ್ತಿವೆ. ಪ್ರತಿಬಾರಿ ಐಪಿಎಲ್ 9IPL) ನಡೆದಾದಗಲೂ ಸಖತ್​ ಸೌಂಡ್​ ಮಾಡುವ ತಂಡ ಎಂದರೆ ಅದು ರಾಯಲ್​ ಚಾಲೆಂಜರ್ಸ್​ ಬೆಂಗಳೂರು (Royal Challengers Bengaluru) ತಂಡ ಎಂದರೆ ತಪ್ಪಾಗಲಾರದು. ಕಳೆದ 17 ಆವೃತ್ತಿಗಳಲ್ಲೂ ತಂಡ ಒಮ್ಮೆಯೂ ಕಪ್​ ಗೆದ್ದಿಲ್ಲವಾದರೂ ನಿರಾಸೆಗೊಳ್ಳದ ಅಭಿಮಾನಿಗಳು ಈ ಸಲ ಕಪ್​ ನಮ್ದೆ (EE Sala Cup Namdhey) ಎಂದು ಹೇಳುವ ಮೂಲಕ ನೆಚ್ಚಿನ ತಂಡವನ್ನು ಹುರಿದುಂಬಿಸುತ್ತ ಬಂದಿದ್ದಾರೆ.

ತಂಡ ಸೋತರೂ, ಗೆದ್ದರೂ ಆರ್​ಸಿಬಿಗೆ (RCB) ಬೆಂಬಲವಾಗಿ ನಿಂತಿರುವ ಅಭಿಮಾನಿಗಳು (Fans) ಯಾವ ಹಂತದಲ್ಲಿಯೂ ತಂಡವನ್ನು ಬಿಟ್ಟುಕೊಟ್ಟಿಲ್ಲ. ಇದೀಗ ಈ ಬಗ್ಗೆ ಟೀಮ್​ ಇಂಡಿಯಾ (Team India) ಆಟಗಾರ ಆರ್​. ಅಶ್ವಿನ್​ (R Ashwin) ಮಾತನಾಡಿದ್ದು, ಈ ರೀತಿಯ ಅಭಿಮಾನಿಗಳನ್ನು ಆರ್​ಸಿಬಿ (RCB) ಫ್ರಾಂಚೈಸಿಯೂ ದೇವರಿಂದ ಪಡೆದಿರುವ ಉಡುಗೊರೆ ಎಂದು ಬಣ್ಣಿಸಿದ್ದಾರೆ. ತಮ್ಮ ಯೂಟ್ಯೂಬ್​ ಚಾನೆಲ್​ನಲ್ಲಿ ಈ ಕುರಿತಾದ ವಿಡಿಯೋವನ್ನು ಪೋಸ್ಟ್​ ಮಾಡಿದ್ದಾರೆ.

ಈ ಕುರಿತು ಮಾತನಾಡಿರುವ ಅಶ್ವಿನ್​, ನಾನು ನೋಡಿರುವಂತೆ ಆರ್​ಸಿಬಿ ಫ್ಯಾನ್ಸ್ (RCB Fans)​ ವಿರಾಟ್​ (Virat Kohli) ಹಾಗೂ ತಂಡವನ್ನು ತುಂಬಾ ಪ್ರೀತಿಸುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿ (Social Media) ಮಾಡಲಾಗುವ ಟ್ರೋಲ್​ನಿಂದ ಅನೇಕರು ಖಿನ್ನತೆಗೆ (Depression) ಒಳಗಾಗಿರುವ ಬಗ್ಗೆ ನಾನು ಕೇಳಿದ್ದೇನೆ. ಇಷ್ಟಾದರೂ ತಂಡದ ಮೇಲೆ ಅವರಿಗೆ ಕೊಂಚವು ಪ್ರೀತಿ ಕಡಿಮೆಯಾಗಿಲ್ಲ.

ನನ್ನ ಪ್ರಕಾರ, ಆರ್​ಸಿಬಿ ಫ್ರಾಂಚೈಸಿ (RCB Franchise) ದೇವರಿಂದ ಪಡೆದ ಉಡುಗೊರೆ (God's Gift) ಎಂದರೆ ಅದು ಅತ್ಯಂತ ನಿಷ್ಠಾವಂತ ಅಭಿಮಾನಿಗಳು. ಅವರ ಅಭಿಮಾನಿಗಳು (Fans) ಯಾವಾಗಲೂ ಅವರ ಬೆಂಬಲಕ್ಕೆ ನಿಂತಿದ್ದಾರೆ. ಹೀಗಾಗಿಯೇ ಐಪಿಎಲ್​ನಲ್ಲಿ (IPL) ಆರ್​ಸಿಬಿ (RCB) ಅತ್ಯಂತ ಸ್ಥಿರವಾಗಿ ನಿಂತಿರುವ ತಂಡವಾಗಿದೆ ಎಂದು ಅಭಿಮಾನಿಗಳನ್ನು ಕೊಂಡಾಡಿದ್ದಾರೆ. ಇತ್ತ ಅಶ್ವಿನ್ (Ashwin)​ ಅವರ ಮಾತುಗಳನ್ನು ಕೇಳಿ ಆರ್​ಸಿಬಿ ಅಭಿಮಾನಿಗಳು (RCB Fans) ಫುಲ್​ ಖುಷ್​ ಆಗಿದ್ದು, ಅಶ್ವಿನ್​ ಅವರ ಪೋಸ್ಟ್​ಗೆ ಕಮೆಂಟ್​ ಹಾಕುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net