ಇವರಿಗೆಲ್ಲ ನನ್ನ ಜೀವನದಲ್ಲಿ ಜಾಗವೇ ಇಲ್ಲ! ಹೆಸರು ಹೇಳೋದಕ್ಕೂ ಇಷ್ಟವಿಲ್ಲ: ವಾಸಿಮ್ ಅಕ್ರಂ ಗರಂ | Wasim Akram

ವಿಜಯವಾಣಿ - 2025-03-13T133919.815
Published on

Wasim Akram: ಇತ್ತೀಚೆಗಷ್ಟೇ ಮುಕ್ತಾಯಗೊಂಡ 2025ರ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಭಾರತ ಚಾಂಪಿಯನ್ಸ್​ ಆಗಿ ಹೊರಹೊಮ್ಮಿತು. ಬಹು ವರ್ಷಗಳ ನಂತರ ಚಾಂಪಿಯನ್ಸ್ ಟ್ರೋಫಿ ಆತಿಥ್ಯ ವಹಿಸಿದ ಪಾಕಿಸ್ತಾನ ತಂಡವೇ ಟೂರ್ನಿಯಿಂದ ಬಹುಬೇಗನೇ ಗೇಟ್​ಪಾಸ್ ಪಡೆದಿದ್ದು ಸದ್ಯ ಪಾಕ್ ಮಾಜಿ ಆಟಗಾರರು ಮತ್ತು ದಿಗ್ಗಜ ಕ್ರಿಕೆಟಿಗರಿಗೆ ಭಾರೀ ಮುಖಭಂಗ ಉಂಟಾಗಿದೆ.

ಚಾಂಪಿಯನ್ಸ್​ ಟ್ರೋಫಿ ಶುಭಾರಂಭ ಪಂದ್ಯದಲ್ಲಿ ನ್ಯೂಜಿಲೆಂಡ್​ ಮತ್ತು ಎರಡನೇ ಪಂದ್ಯದಲ್ಲಿ ಭಾರತ ಎದುರು ಹೀನಾಯ ಸೋಲುಂಡ ಪಾಕ್​, ಎರಡು ಸತತ ಸೋಲಿನಿಂದ ಟೂರ್ನಿಯಿಂದ ಹೊರಗುಳಿಯಿತು. ಈ ಮೂಲಕ ತಮ್ಮ ಟ್ರೋಫಿ ಕನಸನ್ನು ಛಿದ್ರ ಮಾಡಿಕೊಂಡಿತು. ಅತ್ಯಂತ ಕಳಪೆ ಪ್ರದರ್ಶನ ತೋರಿ ಟೂರ್ನಿಯಿಂದ ಹೊರಬಿದ್ದ ಪಾಕ್​ ತಂಡದಲ್ಲಿ ಸದ್ಯ ಯಾವುದೂ ಸರಿಯಿಲ್ಲ ಎಂಬುದಕ್ಕೆ ಇತ್ತೀಚಿನ ಬೆಳವಣಿಗೆ ಸ್ಪಷ್ಟ ಉದಾಹರಣೆ.

ಕ್ಯಾಪ್ಟನ್ ಮೊಹಮ್ಮದ್​ ರಿಜ್ವಾನ್ ನೇತೃತ್ವದ ಪಾಕ್​ ತಂಡವನ್ನು ಟೀಕಿಸಿ, ಗುರಿಯಾಗಿಸಿದ ಮಾಜಿ ಹಿರಿಯ ಕ್ರಿಕೆಟಿಗ ವಾಸಿಮ್ ಅಕ್ರಂ ಮತ್ತು ಇತರೆ ಹಿರಿಯ ಆಟಗಾರರ ವಿರುದ್ಧ ಮೊಹಮ್ಮದ್​ ಹಫೀಜ್ ತೀವ್ರ ಕಿಡಿಕಾರಿದ್ದರು. 90ರ ಕ್ರಿಕೆಟಿಗರು ನಮಗೆ ಅದ್ಭುತ ಗೆಲುವನ್ನು ಪರಿಚಯಿಸಲಿಲ್ಲ ಮತ್ತು ಟ್ರೋಫಿ ಗೆಲ್ಲುವ ಹುಮ್ಮಸ್ಸನ್ನು ತಂದುಕೊಡಲಿಲ್ಲ. ಹೀಗಿರುವಾಗ ಪ್ರಸ್ತುತ ತಂಡದ ಆಟಗಾರರ ಕಾಲೆಳೆದು ಟೀಕಿಸುವುದು ಸರಿಯಲ್ಲ ಎಂದು ಹಫೀಜ್​, ಅಕ್ರಂ ವಿರುದ್ಧ ಪರೋಕ್ಷವಾಗಿ ಗುಡುಗಿದರು.

ಹಫೀಜ್​ ಹೇಳಿಕೆಗೆ ಪ್ರತಿಕ್ರಿಯಿಸಿದ ಅಕ್ರಂ, "ಇಲ್ಲಿ ನಾನು ಸಾವಿರ ವಿಷಯಗಳನ್ನು ಹೇಳಬಹುದು. ಆದರೆ, ಆ ತಪ್ಪನ್ನು ಮಾಡಲು ಬಯಸುವುದಿಲ್ಲ. ಸುಖಾಸುಮ್ಮನೆ ಅವರಿಗೇಕೆ ನಾವು ಗಮನ ಕೊಡಬೇಕು? ಇವರೆಲ್ಲ ನನ್ನ ಜೀವನದಿಂದ ಹೊರಗುಳಿದಿದ್ದಾರೆ. ನನಗೆ ಯಾರ ಹೆಸರುಗಳನ್ನು ತೆಗೆದುಕೊಳ್ಳಲಯ ಇಷ್ಟವಿಲ್ಲ ಎಂದು ಪರೋಕ್ಷವಾಗಿ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net