

ನವದೆಹಲಿ: 17ನೇ ಆವೃತ್ತಿಯ ಐಪಿಎಲ್ನಲ್ಲಿ ಉರಿ ದಾಳಿಯೊಂದಿಗೆ ಎದುರಾಳಿಗಳ ನಿದ್ದೆಗೆಡಿಸಿದ್ದ ದೆಹಲಿ ಮೂಲದ ಯುವ ವೇಗಿ ಮಯಾಂಕ್ ಯಾದವ್ ತಮಗೆ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡಿದ್ದಾರೆ ಎಂದು ಹೇಳಿದರೆ ತಪ್ಪಾಗಲಾರದು. ಗಂಟೆಗೆ 150 ಕಿಲೋಮೀಟರ್ಗೂ ಅಧಿಕ ವೇಗದಲ್ಲಿ ಬೌಲಿಂಗ್ ಮಾಡಿ ಗಮನಸೆಳೆದಿರುವ ಮಯಾಂಕ್ ಸದ್ಯ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಪುನಶ್ಚೇತನಕ್ಕೊಳಗಾಗಿದ್ದಾರೆ.
ಮಯಾಂಕ್ ಅವರನ್ನು ರಾಷ್ಟ್ರೀಯ ತಂಡಕ್ಕೆ ಸೇರಿಸಿಕೊಳ್ಳಲಾಗುತ್ತದೆ ಎಂದು ಹೇಳಲಾಯಿತಾದರೂ ಈವರೆಗೂ ಟೀಮ್ ಇಂಡಿಯಾದ ಬಾಗಿಲು ತೆರೆದಿಲ್ಲ. ಮುಂಬರುವ ಸರಣಿಗಳಲ್ಲಿ ಆಡುವ ನಿರೀಕ್ಷೆಯಿದೆ ಆದರೂ ತಂಡದಲ್ಲಿ ಸ್ಥಾನ ಸಿಗುವುದು ಡೌಟ್ ಎಂದು ಹೇಳಲಾಗಿದೆ. ಈ ಬಗ್ಗೆ ಬಿಸಿಸಿಐ ಕಾರ್ಯದರ್ಶಿ ಜಯ್ ಷಾ ಮಾತನಾಡಿದ್ದು, ಯುವ ವೇಗಿ ತಂಡದಲ್ಲಿ ಸ್ಥಾನ ಪಡೆಯುತ್ತಾರಾ ಇಲ್ಲವಾ ಎಂಬುದರ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಮಯಾಂಕ್ ಯಾದವ್ ತಂಡದಲ್ಲಿ ಸ್ಥಾನ ಪಡೆಯಯುತ್ತಾರೋ ಇಲ್ಲವೋ ಎಂಬುದಕ್ಕೆ ಯಾವುದೇ ಗ್ಯಾರಂಟಿ ಇಲ್ಲದ ಕಾರಣ ನಾನು ನಿಮಗೆ ಸ್ಪಷ್ಟ ಉತ್ತರ ನೀಡಲು ಸಅಧ್ಯವಿಲ್ಲ. ಆತ ಉತ್ತಮ ವೇಗದ ಬೌಲರ್ ಆಗಿದ್ದು, ನಾವು ಆತನನ್ನು ಗಮನಿಸುತ್ತಿದ್ದೇವೆ. ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಮಯಾಂಕ್ ಪ್ರಸ್ತುತ ಎನ್ಸಿಎಯಲ್ಲಿದ್ದು, ಗುಣಮುಖರಾದ ಬಳಿಕ ನಿರ್ಧರಿಸಲಾಗುವುದು ಎಂದು ಜಯ್ ಷಾ ಹೇಳಿದ್ದಾರೆ.
ವೇಗದ ಬೌಲಿಂಗ್ ಮೂಲಕ ಐಪಿಎಲ್ನಲ್ಲಿ ಸಾಕಷ್ಟು ಖ್ಯಾತಿ ಗಳಿಸಿದ್ದ ಮಯಾಂಕ್ ಕ್ರಿಕೆಟ್ ಹೊರತಾಗಿಯೂ ನನಗೆ ರಾಕೆಟ್, ಏರೋಪ್ಲೇನ್, ಸೂಪರ್ಬೈಕ್ನ ವೇಗ ನನಗೆ ರೋಮಾಂಚನ ತರುತ್ತದೆ. ಬಾಲ್ಯದಿಂದಲೂ ಅವೇ ನನಗೆ ಪ್ರೇರಣೆ ಎಂದು ತಮ್ಮ ವೇಗದ ಬೌಲಿಂಗ್ ಹಿಂದಿನ ರಹಸ್ಯವನ್ನು ಹೇಳಿದ್ದರು. ಪ್ರಸ್ತುತ ಎನ್ಸಿಎಯಲ್ಲಿರುವ ಮಯಾಂಕ್ ಮುಂದಿನ ದಿನಗಳಲ್ಲಿ ರಾಷ್ಟ್ರೀಯ ತಂಡದ ಪರ ಆಡುವ ನಿರೀಕ್ಷೆಯಿದೆ.