ನವದೆಹಲಿ: 33ನೇ ಆವೃತ್ತಿಯ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಪದಕ ಗೆಲ್ಲುವ ಅವಕಾಶದಿಂದ ವಂಚಿತರಾಗಿದ್ದ ಕುಸ್ತಿಪಟು ವಿನೇಶ್ ಪೋಗಟ್ ಭಾರತಕ್ಕೆ ಮರಳಿದ್ದು, ಅವರಿಗೆ ದೆಹಲಿ ವಿಮಾನ ನಿಲ್ದಾಣದಲ್ಲಿ ಅದ್ಧೂರಿ ಸ್ವಾಗತ ದೊರೆತಿದೆ. ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಹೊರಗೆ ನೆರದಿದ್ದ ನೂರಾರು ಅಭಿಮಾನಿಗಳು ಡೋಲು ಬಾರಿಸಿ, ನೋಟು ಹಾಗೂ ಹೂವಿನ ಹಾರ ಹಾಕಿ, ಘೋಷಣೆಗಳನ್ನು ಕೂಗಿ ಸ್ವಾಗತಿಸಿದರು.
ತೂಕದ ಕಾರಣಕ್ಕಾಗಿ ಒಲಿಂಪಿಕ್ಸ್‌ನಿಂದ ಹೊರಹಾಕಲ್ಪಟ್ಟಿದ್ದ ಕುಸ್ತಿಪಟು ವಿನೇಶ್ ಫೋಗಟ್ ತವರಿಗೆ ಮರಳಿದ್ದಾರೆ. ದೆಹಲಿ ನಿಲ್ದಾಣದ ಹೊರಗಡೆ ಅವರನ್ನು ಸ್ವಾಗತಿಸುವಾಗ ಕುಸ್ತಿಪಟು ಭಜರಂಗ್ ಪೂನಿಯಾ ಅವರು ಎಡವಟ್ಟೊಂದನ್ನು ಮಾಡಿದ್ದು, ಇದು ಎಲ್ಲರ ಕೆಂಗಣ್ಣಿಗೆ ಗುರಿಯಾಗಿದೆ.
So @BajrangPunia standing on ‘Tiranga’
— BALA (@erbmjha) August 17, 2024
Fun fact you can’t criticise him because he has represented India in olympic games so he has freedom to do all this. pic.twitter.com/FNDniKuyXI
ಇದನ್ನೂ ಓದಿ: ರಾಜೀನಾಮೆ ಕೊಡುವಂತಹ ತಪ್ಪು ನಾನು ಮಾಡಿಲ್ಲ, ರಾಜ್ಯಪಾಲರು ಬಿಜೆಪಿಯ ಕೈಗೊಂಬೆ: ಸಿಎಂ ಸಿದ್ದರಾಮಯ್ಯ
ವಿನೇಶ್ ಪೋಗಟ್ ಅವರನ್ನು ಸ್ವಾಗತಿಸಲು ಕುಸ್ತಿಪಟುಗಳಾದ ಸಾಕ್ಷಿ ಮಲಿಕ್ ಮತ್ತು ಬಜರಂಗ್ ಪೂನಿಯಾ ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಈ ವೇಳೆ ವಿನೇಶ್ ಅವರನ್ನು ತೆರೆದ ವಾಹನದಲ್ಲಿ ಮೆರವಣಿಗೆ ಮಾಡಲಾಯಿತು. ಕಾರಿನ ಬಾನೆಟ್ ಮೇಲೆ ಭಜರಂಗ್ ಪೂನಿಯಾ ನಿಂತಿದ್ದು, ಅವರು ರಾಷ್ಟ್ರಧ್ವಜದ ಮೇಲೆ ನಿಂತು ಅವಮಾನಿಸಿದ್ದಾರೆ ಎಂಬ ಆಪಾದನೆ ಕೇಳಿ ಬಂದಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇತ್ತ ಭಜರಂಗ್ ಪೂನಿಯಾ ಅವರ ನಡೆ ಪರ-ವಿರೋಧದ ಚರ್ಚೆಗೆ ಆಸ್ಪದ ಮಾಡಿಕೊಟ್ಟಿದ್ದು, ಹಲವರು ಕುಸ್ತಿಪಟುವಿನ ನಡೆಗೆ ಕಿಡಿಕಾರಿದ್ದಾರೆ. ಒಬ್ಬ ಕ್ರೀಡಾಪಟುವಾಗಿ ನೀವು ಈ ರೀತಿ ನಡೆದುಕೊಂಡಿರುವುದು ಸರಿಯಲ್ಲ. ಈ ಕೂಡಲೇ ನೀವು ದೇಶದ ಜನರ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದ್ದಾರೆ. ಕೆಲವರು ಇದು ಅಚಾನಕ್ ಆಗಿದ್ದು, ಅವರು ಕ್ಷಮೆಯಾಚಿಸುವುದು ಸೂಕ್ತ ಎಂದು ಕಮೆಂಟ್ ಹಾಕಿದ್ದಾರೆ.