ಆಸ್ಟ್ರೇಲಿಯಾ ವಿರುದ್ಧ ಪರ್ತ್​ನಲ್ಲಿ ನಿತೀಶ್​ ಕುಮಾರ್​ ರೆಡ್ಡಿ ಪದಾರ್ಪಣೆ ನಿರೀಕ್ಷೆ

web nithish
Published on

ಪರ್ತ್​: ಯುವ ವೇಗದ ಬೌಲಿಂಗ್​ ಆಲ್ರೌಂಡರ್​ ನಿತೀಶ್​ ಕುಮಾರ್​ ರೆಡ್ಡಿ ಪರ್ತ್​ನಲ್ಲಿ ನಡೆಯಲಿರುವ ಮೊದಲ ಟೆಸ್ಟ್​ ಪಂದ್ಯದಲ್ಲಿ ಭಾರತ ಪರ ಪದಾರ್ಪಣೆ ಮಾಡುವ ಸಾಧ್ಯತೆಗಳಿವೆ. ಈ ಮೂಲಕ 4ನೇ ವೇಗದ ಬೌಲರ್​ ಆಗಿಯೂ ಅವರನ್ನು ಬಳಸಿಕೊಳ್ಳಲು ಭಾರತ ಯೋಜಿಸಿದೆ. ಪರ್ತ್​ನ ಆಪ್ಟಸ್​ ಸ್ಟೇಡಿಯಂನ ಪಿಚ್​ ಭಾರಿ ಬೌನ್ಸ್​ನಿಂದ ಕೂಡಿದೆ. ಹೀಗಾಗಿ ಅವರ ಬೌಲಿಂಗ್​ ಕೂಡ ಭಾರತಕ್ಕೆ ನೆರವಾಗುವ ನಿರೀಕ್ಷೆ ಇದೆ. 21 ವರ್ಷದ ನಿತೀಶ್​ ಇದುವರೆಗೆ ಆಂಧ್ರ ಪರ 21 ಪ್ರಥಮ ದರ್ಜೆ ಪಂದ್ಯಗಳನ್ನಷ್ಟೇ ಆಡಿದ್ದು, 1 ಶತಕ, 2 ಅರ್ಧಶತಕ ಬಾರಿಸಿದ್ದು, 56 ವಿಕೆಟ್​ ಕಬಳಿಸಿದ್ದಾರೆ. ಐಪಿಎಲ್​ನಲ್ಲಿ ಸನ್​ರೈಸರ್ಸ್​ ಪರವೂ ಮಿಂಚಿದ್ದಾರೆ.

ಶಮಿ ಸೇರ್ಪಡೆಗೆ ಅವಸರವಿಲ್ಲ

ರಣಜಿ ಟ್ರೋಫಿಯಲ್ಲಿ ಬಂಗಾಳ ಪರ ಮರಳಿ ಕಣಕ್ಕಿಳಿದು 7 ವಿಕೆಟ್​ ಕಬಳಿಸಿ ಮಿಂಚಿರುವ ವೇಗಿ ಮೊಹಮದ್​ ಶಮಿ ಅವರನ್ನು ಆಸೀಸ್​ ಪ್ರವಾಸದಲ್ಲಿರುವ ಭಾರತ ಟೆಸ್ಟ್​ ತಂಡಕ್ಕೆ ಸೇರ್ಪಡೆಗೊಳಿಸಲು ಬಿಸಿಸಿಐ ಅವಸರ ತೋರುವುದಿಲ್ಲ ಎನ್ನಲಾಗಿದೆ. ಶಮಿ ಇನ್ನಷ್ಟು ದೇಶೀಯ ಪಂದ್ಯಗಳಲ್ಲಿ ಆಡಿ ಹಿಂದಿನ ಲಯ ಕಂಡುಕೊಳ್ಳಲಿ ಎಂದು ಟೀಮ್​ ಇಂಡಿಯಾದ ಮ್ಯಾನೇಜ್​ಮೆಂಟ್​ ಕೂಡ ಬಯಸಿದೆ. ಇದರಿಂದಾಗಿ ಶಮಿ ಮುಂಬರುವ ಸಯ್ಯದ್​ ಮುಷ್ತಾಕ್​ ಅಲಿ ಟ್ರೋಫಿ ಟಿ20 ಟೂರ್ನಿಯಲ್ಲೂ ಆಡುವ ನಿರೀಕ್ಷೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net