ಸಚಿನ್​ ತೆಂಡುಲ್ಕರ್​ಗೆ ಸಾಧ್ಯವಾಗದ ಸಾಧನೆಯನ್ನು ರಣಜಿಯಲ್ಲಿ ಸಾಧಿಸಿ ತೋರಿಸಿದ ಪುತ್ರ ಅರ್ಜುನ್​!

blank

ಬೆಂಗಳೂರು: ಕ್ರಿಕೆಟ್​ ದಿಗ್ಗಜ ಸಚಿನ್​ ತೆಂಡುಲ್ಕರ್​ ಪುತ್ರ ಹಾಗೂ ಎಡಗೈ ವೇಗಿ ಅರ್ಜುನ್​ ತೆಂಡುಲ್ಕರ್​ (25ಕ್ಕೆ 5) ರಣಜಿ ಟ್ರೋಫಿಯಲ್ಲಿ ಮೊದಲ ಬಾರಿಗೆ 5 ವಿಕೆಟ್​ ಗೊಂಚಲು ಪಡೆದ ಸಾಧನೆ ಮಾಡಿದ್ದಾರೆ. ಪೋರ್ವೊರಿಮ್​ನಲ್ಲಿ ನಡೆಯುತ್ತಿರುವ ಪ್ಲೇಟ್​ ಲೀಗ್​ ಪಂದ್ಯದಲ್ಲಿ ಗೋವಾ ಪರ ಆಡುತ್ತಿರುವ 25 ವರ್ಷದ ಅರ್ಜುನ್​ ದಾಳಿಗೆ ತತ್ತರಿಸಿದ ಅರುಣಾಚಲ ಪ್ರದೇಶ ಕೇವಲ 84 ರನ್​ಗಳಿಗೆ ಸರ್ವಪತನ ಕಂಡಿತು.

2022ರಲ್ಲಿ ರಣಜಿ ಪದಾರ್ಪಣೆ ಪಂದ್ಯದಲ್ಲೇ ಶತಕ ಸಿಡಿಸಿ ಮಿಂಚಿದ್ದ ಅರ್ಜುನ್​ ಇದೀಗ ತಂದೆ ಸಚಿನ್​ಗೂ ಸಾಧ್ಯವಾಗದ ಸಾಧನೆಯನ್ನು ಸಾಧಿಸಿದಂತಾಗಿದೆ. ಸಚಿನ್​ ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ 81 ಶತಕ ಸಿಡಿಸಿದರೂ, ಎಂದೂ 5 ವಿಕೆಟ್​ ಗೊಂಚಲು ಪಡೆದಿರಲಿಲ್ಲ. ಇನಿಂಗ್ಸ್​ವೊಂದರಲ್ಲಿ 3 ವಿಕೆಟ್​ ಗಳಿಸಿದ್ದೇ ಶ್ರೇಷ್ಠ ಸಾಧನೆಯಾಗಿತ್ತು. ಅರ್ಜುನ್​ 49 ರನ್​ಗಳಿಗೆ 4 ವಿಕೆಟ್​ ಕಬಳಿಸಿದ್ದೇ ಹಿಂದಿನ ಶ್ರೇಷ್ಠ ನಿರ್ವಹಣೆಯಾಗಿತ್ತು. ಇದು ಅರ್ಜುನ್​ಗೆ 17ನೇ ಪ್ರಥಮ ದರ್ಜೆ ಪಂದ್ಯವಾಗಿದೆ.

ಶಮಿಗೆ ಸಿಗದ ವಿಕೆಟ್​
ಪಾದದ ಗಾಯದಿಂದ ಚೇತರಿಸಿಕೊಂಡು ಸರಿಸುಮಾರು ಒಂದು ವರ್ಷದ ಬಳಿಕ ಸ್ಪರ್ಧಾತ್ಮಕ ಕ್ರಿಕೆಟ್​ಗೆ ಮರಳಿರುವ ವೇಗಿ ಮೊಹಮದ್​ ಶಮಿ, ಮಧ್ಯಪ್ರದೇಶ ವಿರುದ್ಧದ ರಣಜಿ ಪಂದ್ಯದಲ್ಲಿ ಬಂಗಾಳ ಪರ ಮೊದಲ ದಿನ 10 ಓವರ್​ ಎಸೆದರೂ ವಿಕೆಟ್​ ಕಬಳಿಸಲು ಶಕ್ತರಾಗಲಿಲ್ಲ. ಇಂದೋರ್​ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ 1 ಮೇಡನ್​ ಜತೆಗೆ 34 ರನ್​ ಬಿಟ್ಟುಕೊಟ್ಟರು. ಇದಕ್ಕೆ ಮುನ್ನ ಬ್ಯಾಟಿಂಗ್​ ಮಾಡಿ 6 ಎಸೆತಗಳಲ್ಲಿ 2 ರನ್​ ಗಳಿಸಿ ಔಟಾದರು. ಬಂಗಾಳದ 228 ರನ್​ಗಳಿಗೆ ಪ್ರತಿಯಾಗಿ ಮಧ್ಯಪ್ರದೇಶ 1 ವಿಕೆಟ್​ಗೆ 103 ರನ್​ ಗಳಿಸಿದೆ. ಬೌಲಿಂಗ್​ನಲ್ಲಿ ಶಮಿಗೆ ಸಾಥ್​ ನೀಡಿದ ಸಹೋದರ ಮೊಹಮದ್​ ಕೈಫ್​ 31 ರನ್​ಗೆ 1 ವಿಕೆಟ್​ ಕಬಳಿಸಿದರು.

ಲಖನೌ ಸೂಪರ್​ಜೈಂಟ್ಸ್ ತಂಡ ತೊರೆದಿದ್ದಕ್ಕೆ ಕಾರಣ ಬಿಚ್ಚಿಟ್ಟ ಕೆಎಲ್​ ರಾಹುಲ್​!

TAGGED:
Share This Article

ಚಳಿಗಾಲದಲ್ಲಿ ಎಳನೀರು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದೇ? ಇಲ್ಲಿದೆ ನೋಡಿ ಉಪಯುಕ್ತ ಮಾಹಿತಿ | Tender coconut

Tender coconut : ನೈಸರ್ಗಿಕವಾಗಿ ಹೇರಳವಾಗಿ ದೊರೆಯುವ ಎಳನೀರು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಎಲೆಕ್ಟ್ರೋಲೈಟ್ಸ್​, ವಿಟಮಿನ್ಸ್​,…

Clay Pots : ಹೊಸ ಮಣ್ಣಿನ ಪಾತ್ರೆಯಲ್ಲಿ ಅಡುಗೆ ಮಾಡುವ ಮುನ್ನ ಈ 3 ವಿಷಯಗಳನ್ನು ನೆನಪಿನಲ್ಲಿಡಿ

Clay Pots : ಈಗ ಸ್ಟೀಲ್, ಕಬ್ಬಿಣ, ನಾನ್ ಸ್ಟಿಕ್ ಪಾತ್ರೆಗಳಲ್ಲಿ ಅಡುಗೆ ಮಾಡಲು ಆರಂಭಿಸಿದ್ದಾರೆ.…

Hair care : ಸ್ನಾನ ಮಾಡುವಾಗ ಈ ಟಿಪ್ಸ್ ಪಾಲಿಸಿದರೆ ಕೂದಲು ಉದುರುವುದಿಲ್ಲ..!

Hair care : ಕೂದಲು ಉದುರುವ ಸಮಸ್ಯೆಯಿಂದ ಬಹಳಷ್ಟು ಜನರು ಬಳಲುತ್ತಿದ್ದಾರೆ. ಇಂದಿನ ಆಧುನಿಕ ಜೀವನಶೈಲಿ…