ಆಸೀಸ್​ ಬೌಲರ್​ಗಳ ಬೆವರಿಳಿಸಿದ ನಿತೀಶ್​ ಕುಮಾರ್​ ರೆಡ್ಡಿ; ಪುತ್ರನ ಚೊಚ್ಚಲ ಟೆಸ್ಟ್ ಶತಕ, ಹೆತ್ತವರ ಕಣ್ಣಲ್ಲಿ ಆನಂದಭಾಷ್ಪ | Nithish

ವಿಜಯವಾಣಿ (3)
Published on

Nithish Kumar Reddy: ಇಂದು (ಡಿ.28) ಮೆಲ್ಬೋರ್ನ್​ನಲ್ಲಿ ನಡೆದ ಟೀಮ್ ಇಂಡಿಯಾ ಮತ್ತು ಆಸ್ಟ್ರೇಲಿಯಾ ನಡುವಿನ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ ಮೂರನೇ ದಿನದಂದು ಆಸೀಸ್​ ವಿರುದ್ಧ ಬ್ಯಾಟಿಂಗ್​ನಲ್ಲಿ ಅಬ್ಬರಿಸಿದ ಭಾರತದ ಸ್ಟಾರ್ ಬ್ಯಾಟರ್​ ನಿತೀಶ್ ಕುಮಾರ್​ ರೆಡ್ಡಿ, ತಮ್ಮ ಚೊಚ್ಚಲ ಟೆಸ್ಟ್ ಶತಕವನ್ನು ದಾಖಲಿಸುವ ಮೂಲಕ ಹೆತ್ತವರಲ್ಲಿ ಸಂತಸದ ಕಂಬನಿಯನ್ನು ಹರಿಸಿದ್ದಾರೆ.

ಮುಗಿಲು ಮುಟ್ಟಿದ ಸಂತಸ

ಎಂಸಿಜಿಯಲ್ಲಿ ನಡೆದ ಬಾಕ್ಸಿಂಗ್ ಡೇ ಟೆಸ್ಟ್‌ನ 3ನೇ ದಿನದಂದು ಆಸ್ಟ್ರೇಲಿಯಾ ವಿರುದ್ಧ ಭಾರತ ಕಮ್​ಬ್ಯಾಕ್​ ಮಾಡಲು ತಮ್ಮ ಬ್ಯಾಟ್​ನಿಂದ ಉತ್ತಮ ಕೊಡುಗೆ ನೀಡಿದ 21 ವರ್ಷ ವಯಸ್ಸಿನ ನಿತೀಶ್​, ಇಡೀ ಭಾರತೀಯ ಕ್ರಿಕೆಟ್ ಅಭಿಮಾನಿಗಳನ್ನು ಮಾತ್ರವಲ್ಲದೇ ತಮ್ಮ ಕುಟುಂಬಸ್ಥರು ಹಾಗೂ ಸ್ನೇಹಿತರಲ್ಲಿ ಭಾರೀ ಸಂತಸ ತಂದಿದ್ದಾರೆ. ಟೆಸ್ಟ್​ನಲ್ಲಿ ಚೊಚ್ಚಲ ಶತಕ ಬಾರಿಸಿದ ಪುತ್ರನ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ ಪೋಷಕರು, ಮಗನ ಸಾಧನೆ ಕಂಡು ಖುಷಿಯಿಂದ ಕಣ್ಣೀರಿಟ್ಟಿದ್ದೇವೆ ಎಂದಿದ್ದಾರೆ.

ನಂಬಿಕೆ ಇತ್ತು

ಇನ್ನು ಅಣ್ಣನ ಸಾಧನೆ ಬಗ್ಗೆ ಮನಬಿಚ್ಚಿ ಮಾತನಾಡಿದ ಸಹೋದರಿ, "ನಮಗೆಲ್ಲರಿಗೂ ತುಂಬಾ ಹೆಮ್ಮೆಯಿದೆ, ಇದಕ್ಕಾಗಿ ನಾವೆಲ್ಲರೂ ತುಂಬಾ ಸಂತೋಷ ಪಡುತ್ತೇವೆ. ಇದು ಸಹೋದರನ ಮೊದಲ ಟೆಸ್ಟ್​ ಶತಕ ಎಂಬುದೇ ಬಹಳ ಖುಷಿ. ಏಕೆಂದರೆ, ನಾವು ಮೈದಾನದಲ್ಲಿ ಅಣ್ಣನ ಪ್ರದರ್ಶನವನ್ನು ನೋಡಲು ಕುಟುಂಬದೊಂದಿಗೆ ಬಂದೆವು. ಆದರೆ, ನಾವು ಬಂದ ದಿನದಂದೇ ಅವರು ಸೆಂಚುರಿ ಬಾರಿಸಿದ್ದು, ಅತೀವ ಸಂತಸವನ್ನು ತಂದೊಡ್ಡಿದೆ" ಎಂದರು.

"ಸಹೋದರನ ಸಾಧನೆಗೆ ನಾವೆಲ್ಲರೂ ತುಂಬಾ ಹೆಮ್ಮೆ ಪಡುತ್ತೇವೆ ಮತ್ತು ಇದರ ಬಗ್ಗೆ ಖುಷಿಯಿದೆ. ಅವರು 99 ರನ್​ ಗಳಿಸಿದ್ದಾಗ ಸ್ವಲ್ಪ ಮಟ್ಟಿಗೆ ಆತಂಕ ಕಾಡಿತು. ಆದ್ರೆ, ಶತಕದಾಟ ಆಡುತ್ತಾನೆ ಎಂಬ ಭರವಸೆ ಬಲವಾಗಿತ್ತು. ಅದರಲ್ಲಿ ಯಾವುದೇ ಅನುಮಾನ ಇರಲಿಲ್ಲ" ಎಂದು ನಿತೀಶ್ ಸಹೋದರಿ ಹೇಳಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net